Advertisement

ತಾಂಡಾಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ದರ್ಶನಾಪುರ

09:41 AM Feb 16, 2019 | Team Udayavani |

ಶಹಾಪುರ: ಬಂಜಾರ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಎರಡು ಎಕರೆ ಜಮೀನು ಮಂಜೂರಾಗಿದೆ. ಈ ಮೊದಲು ಸಚಿವರಿದ್ದ ಉಮೇಶ ಜಾಧವ ಸರ್ಕಾರದಿಂದ 1 ಕೋಟಿ ರೂ. ಅನುದಾನ ಕಲ್ಪಿಸುವಲ್ಲಿ ಶ್ರಮಿಸಿದ್ದರು. ಅದರಂತೆ ಪ್ರಸ್ತುತ ಎರಡು ಎಕರೆ ಜಾಗ ಬಂಜಾರ ಸಮುದಾಯಕ್ಕೆ ದೊರೆಯಲಿದೆ. ಬರುವ ದಿನಗಳಲ್ಲಿ ಸಮುದಾಯ ಭವನ ನಿರ್ಮಾಣ ಮಾಡುವ ಕಾರ್ಯ ನೆರವೇರಲಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಭರವಸೆ ನೀಡಿದರು.

Advertisement

ನಗರದ ಸಿಪಿಎಸ್‌ ಶಾಲಾ ಆವರಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಸಂತ ಸೇವಾಲಾಲ್‌ ಮಹಾರಾಜ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಂಜಾರ ಸಮುದಾಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದೇನೆ. ತಾಲೂಕಿನ ತಾಂಡಾಗಳ ಅಭಿವೃದ್ಧಿಗೆ ನಿರಂತರ ಕೆಲಸ ಕಾರ್ಯಗಳು ನಡೆದಿವೆ. ಜೊತೆಗೆ ಬಂಜಾರ ಸಮುದಾಯ ಅಭಿವೃದ್ಧಿ ಹೊಂದಬೇಕಿದೆ. ಸರ್ಕಾರ ಕಲ್ಪಿಸಿದ ಸವಲತ್ತುಗಳನ್ನು ಬಳಸಿಕೊಂಡು ಇಡೀ ಸಮುದಾಯ ಬೆಳೆಯಬೇಕಿದೆ. ಆ ನಿಟ್ಟಿನಲ್ಲಿ ಯುವಕರು ಮುಂದಾಗಬೇಕು ಎಂದರು. 

ಯಾವುದೇ ಮಹಾತ್ಮರನ್ನು ಸಂತರು ಒಂದೇ ಸಮುದಾಯಕ್ಕೆ ಮೀಸಲಾಗಿರುವುದಿಲ್ಲ. ಅವರು ಇಡೀ ಸಮಾಜವನ್ನು ತಿದ್ದುವ ಕೆಲಸ ಮಾಡಿದವರು. ಲೋಕ ಒಳಿತಿಗೆ ಅವರ ಶ್ರಮ ಇರುತ್ತದೆ. ಹೀಗಾಗಿ ಬುದ್ಧ, ಬಸವ, ಅಂಬೇಡ್ಕರ್‌ ಮತ್ತು ಸಂತ ಸೇವಾಲಾಲ್‌ ಅವರು ಇಡೀ ಸಮಾಜಕ್ಕೆ ಪ್ರೇರಣಾ
ಶಕ್ತಿಯಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ್‌ ಸಂಗಮೇಶ ಜಿಡಗಾ, ಪೌರಾಯುಕ್ತ ಬಸವರಾಜ ಶಿವಪೂಜೆ, ಜಿಪಂ ಕಿಶನ್‌ ರಾಠೊಡ ಮತ್ತು ಕನ್ಯಾಕೋಳೂರ ಇದ್ದರು. ನಿವೃತ್ತ ಶಿಕ್ಷಕ ರೇಖು ಚವ್ಹಾಣ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next