ಹೊಂಡಾ ಸಿಬಿ500ಎಕ್ಸ್, ಹೊಸ ಪೀಳಿಗೆಯಯುವಕರಿಗೆ ಹೇಳಿ ಮಾಡಿಸಿದ ಬೈಕ್ ಆಗಿದ್ದು, 2021ರಲ್ಲಿಕೆಲವೊಂದು ಹೊಸ ಪೀಚರ್‌ಗಳೊಂದಿಗೆ ಮಾರುಕಟ್ಟೆಗೆಬಂದಿದೆ.
ವಿಶೇಷವೆಂದರೆ, ಇದು 2014ರಲ್ಲೇ ಮಾರುಕಟ್ಟೆಗೆ ಬಂದಿದ್ದು, 2019ರಲ್ಲಿ ಒಮ್ಮೆ ಅಪ್ ಡೇಟ್ ಆಗಿದೆ. ಈಗಮತ್ತೆ ಹೊಸ ಮಾದರಿಯೊಂದಿಗೆಬಂದಿದೆ. ತೀರಾ ಸರಳ, ಸುಲಭ ರೈಡಿಂಗ್‌ಮತ್ತು ಅತ್ಯುತ್ಕೃಷ್ಟತೆಯೊಂದಿಗೆ,ಸಿಬಿ500ಎಕ್ಸ್ ಯಾವುದೇರಸ್ತೆ ಕಂಡಿಷನ್‌ಗೂ ಹೊಂದಿಕೊಳ್ಳುವಂತಿದೆ.
ಬೈಕಿನ ಗಾತ್ರದವಿಚಾರಕ್ಕೆ ಬಂದರೆ,ಇದು ಅಷ್ಟೇನೂದೊಡ್ಡದಲ್ಲದ ಮತ್ತುಚಿಕ್ಕದೂ ಅಲ್ಲದರೀತಿಯಲ್ಲಿದೆ. ರೆಗುಲರ್‌ಬಾಡಿವರ್ಕ್ ಮತ್ತು ಎಲ್‌ಇಡಿ ಲೈಟಿಂಗ್ ಇದಕ್ಕೆಪ್ರೀಮಿಯಂ ಲುಕ್ ನೀಡಿವೆ. ಇದರ ಸೀಟ್ ಹೈಟ್ 830ಎಂಎಂ ಇದೆ. ಹಾಗೆಯೇ 17.7 ಲೀ. ಪೆಟ್ರೋಲ್ ಟ್ಯಾಂಕ್‌ಸಾಮರ್ಥ್ಯ ವಿದೆ.
ಇದರಲ್ಲಿ ಪುಟ್ಟದಾದ ಮತ್ತು ಅತ್ಯಂತಸರಳ ಎನ್ನಬಹುದಾದ ಎಲ್‌ಸಿಡಿ ಡಿಸ್ ಪ್ಲೇ ಇದೆ. ಫಿನಿಶ್‌ಮತ್ತು ಕ್ವಾಲಿಟಿ ಮಟ್ಟ ಚೆನ್ನಾಗಿದೆ. ಇದರಲ್ಲಿ ನಿಮಗೆ ಬೇಕಾದಮಾಹಿತಿಗಳಷ್ಟೇ ಸಿಗುತ್ತವೆ. ಅಂದರೆ, ಕಿ.ಮೀ. ವೇಗ, ಮತ್ತುಪೆಟ್ರೋಲ್ ಮಾಹಿತಿ ಸಿಗುತ್ತದೆ. ಈ ಬೈಕು, ಓಡಿಸುವುದಕ್ಕೆತುಂಬಾ ಕಂಫರ್ಟ್ ಇದೆ ಎಂಬುದು ಬೈಕ್ ತಜ್ಞರಅಭಿಪ್ರಾಯ.
ತುಂಬಾ ವಿಶಾಲವಾದ ಸೀಟು ಇದ್ದು,ಹಿಂಬದಿಯಿಂದ ಇಳಿಜಾರಿನ ರೀತಿಯಲ್ಲಿ ಸೀಟು ಅಡ್ಜಸ್ಟ್‌ಮಾಡಲಾಗಿದೆ. ಅಂದ ಹಾಗೆ, ಇದು471 ಸಿಸಿ ಎಂಜಿನ್ ಸಾಮರ್ಥ್ಯದಬೈಕ್. ಇದರಿಂದ 47.5 ಎಚ್‌ಪಿಮತ್ತು 43.2 ಎನ್‌ಎಂ ಶಕ್ತಿಸಿಗುತ್ತದೆ. ಜತೆಗೆ ಇದರಲ್ಲಿಆರು ಗೇರ್‌ಗಳಿವೆ.
ಇದು199ಕೆ.ಜಿ.ಭಾರವಿದ್ದು, ನಗರಪ್ರದೇಶದಲ್ಲಿಓಡಿಸುವುದುಅತ್ಯಂತಸುಲಭ. 100ಕಿ.ಮೀ. ವೇಗದಲ್ಲಿಓಡಿದರೂಗಾಡಿಯಲ್ಲಿ ಶೇಕಿಂಗ್ ಬರಲ್ಲ. ಸಸ್ಪೆನ್ಸನ್ ಚೆನ್ನಾಗಿರುವುದರಿಂದಅತ್ಯಂತ ಕೆಟ್ಟ ರಸ್ತೆಗಳಲ್ಲೂ ಸುಲಭವಾಗಿ ಹೋಗಬಹುದು.ಅಂದಹಾಗೆ ಇದರ ಬೆಲೆ 6.87 ಲಕ್ಷದಿಂದಆರಂಭವಾಗುತ್ತದೆ. ಇದು ಎಕ್ಸ್ ಶೋಂ ಬೆಲೆಯಾಗಿದ್ದು,ಅಂತಿಮ ದರ ಇನ್ನಷ್ಟು ಹೆಚ್ಚಳವಾಗಬಹುದು.
ಸೋಮಶೇಖರ ಸಿ.ಜೆ