Advertisement

ಆ್ಯಕ್ಟಿವಾ ಪ್ರೀಮಿಯಂ ಎಡಿಷನ್‌ ಮಾರುಕಟ್ಟೆಗೆ; ಮೂರು ಬಣ್ಣಗಳಲ್ಲಿ ಲಭ್ಯವಿದೆ

05:07 PM Aug 21, 2022 | Team Udayavani |

ಜನಪ್ರಿಯ ದ್ವಿಚಕ್ರ ವಾಹನ ಉತ್ಪಾದನಾ ಕಂಪನಿ ಹೋಂಡಾದ ಆ್ಯಕ್ಟಿವಾ ಪ್ರೀಮಿಯಂ ಎಡಿಷನ್‌ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

Advertisement

ಸದ್ಯ ಅದು ಡೀಲಕ್ಸ್‌ ಮಾದರಿಯಲ್ಲಿ ಮಾತ್ರವೇ ಲಭ್ಯವಾಗಲಿದೆ. ಮ್ಯಾಟ್‌ ಸಂಗೀರಾ ರೆಡ್‌ ಮೆಟಾಲಿಕ್‌, ಮ್ಯಾಟ್‌ ಮಾರ್ಷಲ್‌ ಗ್ರೀನ್‌ ಮೆಟಾಲಿಕ್‌, ಪರ್ಲ್ ಸಿರೀನ್‌ ಬ್ಲೂ ಎಂಬ ಮೂರು ಬಣ್ಣಗಳಲ್ಲಿ ವಾಹನ ಲಭ್ಯವಾಗಲಿದೆ.

ವಾಹನ ಮುಂಭಾಗದಲ್ಲಿ ಚಿನ್ನದ ಬಣ್ಣದಲ್ಲಿ ಇರುವ ಹೋಂಡಾ ಎಂದು ಆಕರ್ಷಕವಾಗಿ ಬರೆಯಲಾಗಿದೆ. ಜತೆಗೆ ಬದಿಯಲ್ಲಿ ಕೂಡ ಅದೇ ರೀತಿಯಲ್ಲಿ ಬರೆಯಲಾಗಿದೆ.

ನವದೆಹಲಿಯಲ್ಲಿ ಎಕ್ಸ್‌ಶೋ ರೂಮ್‌ ಬೆಲೆ 75, 400 ರೂ. ಎಂದು ನಿಗದಿಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next