ವಿಜಯಪುರ: ಕೋವಿಡ್ 19 ಭೀತಿ, ಲಾಕ್‌ಡೌನ್‌ನಿಂದಾಗಿ ಅನೇಕರು ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಸಿಲು ಕಿದ್ದಾರೆ. ವೈಯಕ್ತಿಕ ಮತ್ತು ದೇಶದ ಆರ್ಥಿಕ ಸ್ಥಿತಿ ಯನ್ನು ವೃದ್ಧಿಸಿಕೊಂಡು ಸ್ವಾವಲಂ ಬನೆ ಸಾಧಿಸಿಕೊಳ್ಳಲು ಹೋದ್ಯಮ ಇಂದಿಗೆ ಉತ್ತಮ ಮಾರ್ಗ ಎಂದು ಹಿರಿಯ ಗಾಂಧಿವಾದಿ ಡಾ.ಎಸ್.ಎನ್.ಸುಬ್ಬರಾವ್ ತಿಳಿಸಿದರು.
ಪಟ್ಟಣದ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ಬಳಗದಿಂದ ಕೊರೊನಾ ಸಂಕಷ್ಟ ನಿಭಾಯಿಸುವ ಕುರಿತು ಹಮ್ಮಿ ಕೊಂಡಿದ್ದ ಸಂವಾದ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 1920ರಲ್ಲಿ ಮಹಾತ್ಮಗಾಂಧೀಜಿ ಅವರುರಾಷ್ಟ್ರದ ಅಭಿವೃದ್ಧಿಗೆ ಗ್ರಾಮೋದ್ಯಮದ ಕನಸು ಕುರಿತು ಪ್ರತಿ ಪಾದಿಸಿದ್ದರು. ಗ್ರಾಮಗಳ ಅಭಿವೃದ್ದಿಯೊಂದೇ ಇಂದಿನ ಸಂಕಷ್ಟದಿಂದ ಪಾರಾಗಲು ಒಳ್ಳೆಯ ಮಾರ್ಗ.
ನಿರು ದ್ಯೋಗ ಸಮಸ್ಯೆ ಹೋಗಲಾಡಿಸಲು ಶ್ರಮ ಸಂಸ್ಕೃತಿ ಹೆಚ್ಚಬೇಕು. ಕೊರೊನಾದಿಂದ ಕೆಲಸ ಕಳೆದು ಕೊಂಡ ವರು ಸ್ವಾವಲಂಬನೆ ಸಾಧಿಸಲು ಸಾಲ ಸೌಲಭ್ಯ ಒದಗಿಸಬೇಕು ಎಂದರು. ಲಾಕ್‌ಡೌನ್‌ನಿಂದ ದೇಶದ ಆರ್ಥಿಕತೆಗೆ ಆಗಿರುವ ನಷ್ಟ ಭರಿಸಲು ಸರ್ಕಾರಗಳು ಕೈಗೊಂಡಿರುವ ಕ್ರಮ ಗಳು ಶ್ಲಾಘನೀಯ. ದೇಶದಲ್ಲಿ ಸಮಾನತೆ, ಸಹಕಾರದ ದೃಷ್ಟಿಕೋನವು ಹವ್ಯಾಸವಾಗಬೇಕು. ಎಂತಹ ಸಂದರ್ಭಗಳಲ್ಲಿಯೂ ಯಾರೊಬ್ಬರೂ ಉಪವಾಸ ದಿಂದ ಬಳಲದಂತೆ ನೆರೆಹೊರೆಯವರೇ ಆಹಾರ ಒದ ಗಿಸಿ ಸಹಾಯಹಸ್ತ ಚಾಚಬೇಕು ಎಂದು ಹೇಳಿದರು.
ಮದ್ಯಪಾನ ನಿಷೇಧಿಸಬೇಕು: ಲಾಕ್‌ಡೌನ್ ಸಂದರ್ಭ ದಲ್ಲಿ ಮದ್ಯಪಾನ ನಿಷೇಧಿಸಿದ ಕ್ರಮವು ಮುಂದು ವರಿಯಬೇಕಿತ್ತು. ಆದಾಯದ ಮೂಲಕ್ಕಾಗಿ ಕೀರ್ತಿ ಶೇಷ ಸಿ.ರಾಜಗೋಪಾಲಚಾರಿ ಅವರ ಆಶಯದಂತೆ ಇತರೆ ತೆರಿಗೆಗಳ ವಸೂಲಿ ಕ್ರಮಗಳನ್ನು ಜಾರಿಗೆ ತರ ಬೇಕು. ಮದ್ಯಪಾನ ಮಾರಾಟ ಮುಂದುವರಿದಿರುವುದ ರಿಂದ ಮತ್ತೆ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ, ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ವಿ.ಪ್ರಶಾಂತ್, ವಿ.ಸತೀಶ್ ಮತ್ತಿತರರು ಇದ್ದರು.