Advertisement

ಗೃಹಶೋಭೆ ಮುಂಗಾರು ಶಾಪಿಂಗ್‌ ಫೆಸ್ಟಿವಲ್‌ ಆರಂಭ

12:00 PM Aug 01, 2017 | |

ಮೈಸೂರು: ಗೃಹಶೋಭೆ ಗೃಹಬಳಕೆ ವಸ್ತುಗಳ ಅತಿದೊಡ್ಡ ಪ್ರದರ್ಶನ ಮುಂಗಾರು ಶಾಪಿಂಗ್‌ ಫೆಸ್ಟಿವಲ್‌ ಅನ್ನು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದು 10 ದಿನಗಳ ವಸ್ತು ಪ್ರದರ್ಶನವನ್ನು ಮಾಜಿ ಸಚಿವ ಎಸ್‌.ಎ.ರಾಮದಾಸ್‌ ಉದ್ಘಾಟಿಸಿದರು. ಈ ವೇಳೆ  ಸೈಮನ್‌ ಎಕ್ಸಿಬಿಟರ್ ನಿರ್ದೇಶಕ ನಾಗಚಂದ್ರ ಉಪಸ್ಥಿತರಿದ್ದರು.

Advertisement

ವಸ್ತುಪ್ರದರ್ಶನದಲ್ಲಿ ಎಲೆಕ್ಟ್ರಾನಿಕ್ಸ್‌ ವಸ್ತುಗಳು, ಫ‌ನೀಚರ್‌, ಉಡುಪುಗಳು, ಆಟಿಕೆಗಳು ಗೃಹೋಪಯೋಗಿ ವಸ್ತುಗಳು, ಪ್ಲಾಸ್ಟಿಕ್‌ ಸಾಮಾನುಗಳು ಹಾಗೂ ಇನ್ನಿತರ ಹೊಸ ಉತ್ಪನ್ನಗಳ ಮಳಿಗೆಗಳಿದ್ದು, ತಿಂಡಿ ತಿನಿಸುಗಳಿಗಾಗಿ ಪ್ರತ್ಯೇಕ ಮಳಿಗೆಗಳನ್ನು ನಿರ್ಮಿಸಲಾಗಿದೆ.

ಈ ಪ್ರದರ್ಶನದಲ್ಲಿ ಮತ್ಸ ಮೇಳವನ್ನು 3ನೇ ಬಾರಿಗೆ ಏರ್ಪಡಿಸಲಾಗಿದೆ. ಈ ಮೀನುಗಳ ಪ್ರದರ್ಶನದ ಮುಖ್ಯ ಉದ್ದೇಶವೇನೆಂದರೆ ಎಲ್ಲಾ ನಾಗರಿಕರಿಗೂ ನಾನಾ ರೀತಿಯ ಅಕ್ವೇರಿಯಂನ್ನು ಮತ್ತು ವಿವಿಧ ಜಾತಿಯ ಮೀನುಗಳನ್ನು ಪರಿಚಯಿಸುವುದು ಮತ್ತು ಸಾಕುವ ಉದ್ದೇಶ ಇರುವವರು ಪ್ರದರ್ಶನವನ್ನು ನೋಡಿ ಆನಂದಿಸಬಹುದು ಮತ್ತು ಮೀನುಗಳನ್ನು  ಖರೀದಿಸಬಹುದು.

ಈ ಪ್ರದರ್ಶನವು ಈಗಿನ ಮಕ್ಕಳಿಗೆ ಮತ್ತು ನಾಗರಿಕರಿಗೆ ಯಾವ ಯಾವ ರೀತಿಯ ಮೀನುಗಳಿವೆ ಎಂದು ತಿಳಿಸಿಕೊಡುವುದು ಮತ್ತು ಅಕ್ವೇರಿಯಂ ಇಂಡಸ್ಟ್ರೀಯನ್ನು ಮುಂದೆ ತರುವುದೇ ಈ ಪ್ರದರ್ಶನದ ಮುಖ್ಯ ಉದ್ದೇಶ. ವಸ್ತು ಪ್ರದರ್ಶನವು ಆ. 6ರ ವರೆಗೆ ಬೆಳಗ್ಗೆ 11 ರಿಂದ ರಾತ್ರಿ 9 ರವರೆಗೆ ತೆರೆದಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next