Advertisement

Crime: ಬಾಲಕನಿಂದ ಮನೆಪಾಠದ ಶಿಕ್ಷಕನ ಕೊಲೆ

07:20 PM Sep 03, 2023 | Team Udayavani |

ನವದೆಹಲಿ: ಲೈಂಗಿಕ ಕಿರುಕುಳ ನೀಡುತ್ತಿದ್ದ ಮನೆಪಾಠದ ಶಿಕ್ಷಕನನ್ನು 14 ವರ್ಷದ ಬಾಲಕನೊಬ್ಬ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಆಗ್ನೇಯ ದೆಹಲಿಯ ಜಾಮಿಯಾ ನಗರದಲ್ಲಿ ನಡೆದಿದೆ. 28 ವರ್ಷದ ಮೃತ ಶಿಕ್ಷಕ ಸಲಿಂಗಕಾಮಿಯಾಗಿದ್ದು, ಎರಡು ತಿಂಗಳ ಹಿಂದೆ ಬಾಲಕನನ್ನು ಭೇಟಿಯಾಗಿದ್ದ.

Advertisement

ಅನೇಕ ಬಾರಿ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಅದನ್ನು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ. ಮನೆಪಾಠದ ಶಿಕ್ಷಕ ಜಾಮಿಯಾ ನಗರದ ಬಾಟ್ಲಾ ಹೌಸ್‌ನಲ್ಲಿ ವಾಸಿಸುತ್ತಿದ್ದ. ಆ.30ರಂದು ಬಾಲಕನನ್ನು ಮನೆಗೆ ಕರೆದಿದ್ದಾನೆ. ಈ ವೇಳೆ ಪೇಪರ್‌ ಕಟ್ಟರ್‌ನಿಂದ ಶಿಕ್ಷಕನನ್ನು ಕತ್ತು ಸೀಳಿ ಹತ್ಯೆ ಮಾಡಲಾಗಿದೆ. ಪೊಲೀಸರು ಬಾಲಕನನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next