ಅಸೋಸಿಯೇಷನ್ ವತಿಯಿಂದ “ಉತ್ತಮ ಆರೋಗ್ಯಕ್ಕೆ ಸಮಗ್ರ ಪರ್ಯಾಯ ಚಿಕಿತ್ಸೆಗಳು’ ಎಂಬ
ಕಾರ್ಯಾಗಾರ ನಡೆಯುತ್ತಿದೆ. ಐಪಿಎಸ್ ಅಧಿಕಾರಿ ಎಸ್. ಸವಿತಾ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಫೀನಿಕ್ಸ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ಎ.ಹಿರೇಮಠ, ಜಿ.ಆರ್.ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲರಾದ ಕಸ್ತೂರಿ ಬಿರಾದಾರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಾಮಾನ್ಯ ಕಾಯಿಲೆಗಳಿಗೆ ಹೊಮಿಯೋಪಥಿ ಚಿಕಿತ್ಸೆ, ಆತ್ಮಹತ್ಯೆ ಪಿಡುಗು, ಮಾನಸಿಕ ಆರೋಗ್ಯದ ಅವಶ್ಯಕತೆ, ಪ್ರಕೃತಿ ಚಿಕಿತ್ಸೆ, ನಗೆ ಚಿಕಿತ್ಸೆ, ನಗೆಯೋಗ, ಜಲಚಿಕಿತ್ಸೆಯ ಮಹತ್ವ, ಮುದ್ರೆಗಳಿಂದ ಆರೋಗ್ಯ ಮತ್ತಿತರ ವಿಷಯಗಳ ಕುರಿತು ಪರಿಣತರು ಉಪನ್ಯಾಸ ನೀಡಲಿದ್ದಾರೆ. ಮೊದಲು ಬಂದವರಿಗೆ ಮೊದಲು ಆದ್ಯತೆ. ಹೆಸರು ನೋಂದಾಯಿಸಿಕೊಳ್ಳಲು 9480504276ಗೆ ಸಂಪರ್ಕಿಸಿ.
Advertisement
ಎಲ್ಲಿ?: ಗಾಂಧಿ ಸಾಹಿತ್ಯ ಸಂಘ, ಪ್ರಕೃತಿ ಜೀವನ ಕೇಂದ್ರ ಕಟ್ಟಡ, 8ನೇ ಕ್ರಾಸ್, ಮಲ್ಲೇಶ್ವರಯಾವಾಗ?: ಜೂನ್ 24, ಬೆಳಗ್ಗೆ 9- ಮಧ್ಯಾಹ್ನ 2