ಯಕ್ಷಗಾನದಲ್ಲಿ ಅಪರೂಪವೆನಿಸಿದ, ತೆರೆಯ ಮರೆಯ ಪಾತ್ರವಾದ ತಟ್ಟಿ àರಭದ್ರನ ವೇಷ ಧರಿಸಿ ನಿಂತರೆಂದರೆ ಒಂದು ಕ್ಷಣ ಎಲ್ಲರೂ ಚಕಿತರಾಗಬೇಕು. ತಟ್ಟೀರಭದ್ರನ ಅಬ್ಬರದ ಪ್ರವೇಶ ಆರ್ಭಟದೊಂದಿಗೆ ಸಭೆಯ ಮಧ್ಯೆ ನಡೆದು ಬರುವಾಗ ದೊಂದಿ ಬೀಸುತ್ತ ಪ್ರವೇಶಿಸುವ ವೈಖರಿಗೆ ಬೆರಗಾಗಲೇಬೇಕು. ರೌದ್ರ ಮುಖವರ್ಣಿಕೆ, ಆರ್ಭಟ ಬೆರಗುಗೊಳಿಸುವ ವೇಷಭೂಷಣಗಳಿಂದ ಗಮನ ಸೆಳೆಯುವ ಶ್ರೀಪಾದರವರು ಅನೇಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಬೆಂಗಳೂರಿನಲ್ಲಿ ಭಿಝಿ ಕೆಲಸಗಳ ನಡುವೆ ತಮ್ಮ ಹವ್ಯಾಸದ ಮೂಲಕ ತಮ್ಮೂರನ್ನು ಜೀವಂತವಿಟ್ಟಿರುವವರು ಅನೇಕರು ನಮ್ಮ ನಡುವೆಯಿದ್ದಾರೆ.
ಸಂಪರ್ಕ: 9448018654
Advertisement
ಬಳಕೂರು ವಿ.ಎಸ್.ನಾಯಕ