Advertisement
ಬೇವಿನ ಎಲೆ: ಬೇವಿನ ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಸೋಸಿ ಒಂದು ಬಾಟಲಿಯಲ್ಲಿ ಸಂಗ್ರಹಿಸಿ. ದಿನಕ್ಕೆ ಎರಡರಿಂದ ಮೂರು ಬಾರಿ ಈ ನೀರನ್ನು ಕುಡಿಯಿರಿ. ಈ ನೀರನ್ನು ನಿಯಮಿತವಾಗಿ ಕುಡಿದ ಡೆಂಗ್ಯೂ ರೋಗಪೀಡಿತರ ರಕ್ತದಲ್ಲಿನ ಪ್ಲೇಟ್ಲೆಟ್ ಹಾಗೂ ಬಿಳಿರಕ್ತಕಣಗಳು ಹೆಚ್ಚಳವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದು ಕಂಡುಬಂದಿದೆ.
Related Articles
Advertisement
ಮೆಂತ್ಯ ಸೊಪ್ಪು; ನೀರಿನಲ್ಲಿ ಮೆಂತ್ಯೆ ಸೊಪ್ಪಿನ ಎಲೆಗಳನ್ನು ನೆನೆಸಿಕೊಳ್ಳಬೇಕು. ಆ ಮೇಲೆ ಕುಡಿಯುಬೇಕು.
ಪಪ್ಪಾಯಿ ಎಲೆಪಪ್ಪಾಯಿ ಗಿಡದಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ ಗುಣವಿದೆ. ಪಪ್ಪಾಯ ಗಿಡದ ಎಲೆಯ ರಸವನ್ನು ಹಿಂಡಿ ಬೆಳಗ್ಗೆ ಬರೀ ಹೊಟ್ಟೆಗೆ ಮೂರು ಚಮಚ ರಸ ಮತ್ತು ಸಂಜೆ ಮೂರು ಚಮಚ ದಂತೆ ಸತತ ಮೂರು ದಿನ ಸೇವಿಸಿದರೆ ಡೆಂಗ್ಯೂ ಜ್ವರವನ್ನು ಕಡಿಮೆ ಮಾಡಬಹುದು. ದಾಳಿಂಬೆ
ಈ ಹಣ್ಣಿನ ಬೀಜಗಳು ಕಬ್ಬಿಣದ ಪ್ರಮುಖ ಮೂಲವಾಗಿವೆ. ಇವು ರಕ್ತ ಕಣಗಳ ಸಂಖ್ಯೆಯನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿವೆ. ಡೆಂಗ್ಯೂ ಜ್ವರದಿಂದ ಕಡಿಮೆಯಾಗಿರುವ ರಕ್ತ ಕಣಗಳು ಈ ಹಣ್ಣಿನ ಸೇವನೆಯಿಂದ ಮತ್ತೆ ಹೆಚ್ಚಾಗಿ ಕಾಯಿಲೆ ಬೇಗ ನಿವಾರಣೆಯಾಗುತ್ತದೆ. ಈ ಹಣ್ಣು ಕಾಯಿಲೆಯಿಂದ ಉಂಟಾಗುವ ಆಯಾಸವನ್ನು ಕೂಡ ಕಡಿಮೆಗೊಳಿಸುತ್ತದೆ. •••ಧನ್ಯಶ್ರೀ ಬೋಳಿಯಾರ್