Advertisement
ನಗರದ ಮನೆಗಳಲ್ಲಿ ಇರುವುದು ಸ್ವಲ್ಪವೇ ಜಾಗ. ಕೆಲವು ಕ್ರಿಯಾತ್ಮಕ ಚಿಂತನೆಗಳಿದ್ದರೆ ಸಣ್ಣ ಜಾಗದಲ್ಲೂ ಕೃಷಿ ಮಾಡಲು ಸಾಧ್ಯ.
ನಗರದ ಮನೆಯಲ್ಲಿ ಮೊದಲು ನೀವು ಎಲ್ಲಿ ಕೃಷಿ ಮಾಡಬೇಕೆಂಬುದನ್ನು ನಿರ್ಧರಿಸಿ. ಅದೂ ತರಕಾರಿ ತೋಟ, ಹೂದೋಟ ಯಾವುದೂ ಆಗಿರಬಹುದು. ಅದಕ್ಕಾಗಿ ಜಾಗ ಆಯ್ಕೆ ಮಾಡಿ. ಹೆಚ್ಚಾಗಿ ಟೆರೇಸ್ ಕೃಷಿಗೆ ಸೂಕ್ತ ಜಾಗ. ಬಿಸಿಲು ಚೆನ್ನಾಗಿ ಬೀಳುವುದಿದ್ದರೆ ಅದೇ ಜಾಗವನ್ನು ಆಯ್ಕೆ ಮಾಡಿ. ಮನೆಯ ಬಾಲ್ಕನಿಯಲ್ಲಿ ಕೂಡಾ ಕೃಷಿ ಮಾಡಲು ಅವಕಾಶಗಳಿವೆ. ಪಾಟ್ ಹಾಗೂ ಹ್ಯಾಂಗಿಂಗ್ ಪಾಟ್‌ಗಳಲ್ಲಿ ಗಿಡ ನೆಡುವ ಮೂಲಕ ಕೃಷಿ ಮಾಡಬಹುದು. ತುಳಸಿ, ಸಾಂಬ್ರಾಣಿಯಂತಹ ಗಿಡಗಳನ್ನು ಪಾಟ್‌ನಲ್ಲಿ ಹಾಕಿ ಮೆಟ್ಟಿಲುಗಳಲ್ಲಿಡಬಹುದು. ಬಳ್ಳಿಯಲ್ಲಿ ಹಬ್ಬುವ ತರಕಾರಿ ಗಿಡಗಳನ್ನು ಹೆಚ್ಚು ಬಿಸಿಲು ಇರುವ ಕಡೆ ನೆಟ್ಟು ಬೆಳೆಸಬಹುದು. ಗಿಡಗಳನ್ನು ಒಂದೇ ಕಡೆ ನೆಟ್ಟು ಬೆಳೆಸಬಹುದು.
Related Articles
ಯಾವ ಕಾಲ ಯಾವ ಗಿಡಗಳಿಗೆ ಹೆಚ್ಚು ಸೂಕ್ತ ಎಂಬುದನ್ನು ತಿಳಿದಿರಬೇಕು. ಜತೆಗೆ ಕೀಟನಾಶಕಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಬೇಕು. ಜೈವಿಕ ಕೀಟನಾಶಕವಾದರೆ ಇನ್ನೂ ಉತ್ತಮ. ಟೆರೇಸ್‌ನಲ್ಲಿ ಗಿಡಗಳು ಒಂದು ಮತ್ತೂಂದನ್ನು ಆಕ್ರಮಿಸದಂತೆ ನೋಡಿಕೊಳ್ಳಬೇಕು. ಹೀಗೆ ಕೆಲವು ತಂತ್ರಾಂಶಗಳನ್ನು ಅನುಸರಿಸುವುದರಿಂದ ನೀವೂ ಕೃಷಿಕರಾಗಬಹುದು.
Advertisement
•ಸುಶ್ಮಿತಾ ಶೆಟ್ಟಿ ಸಿರಿಬಾಗಿಲು