Advertisement
ಇಸ್ರೋ ಅಧ್ಯಕ್ಷ ಕೆ. ಶಿವನ್ 2019ರಲ್ಲಿ ಈ ಬಗ್ಗೆ ಪ್ರಸ್ತಾವಿಸಿದ್ದರು. ನಮ್ಮ ವಿಜ್ಞಾನಿಗಳು ನಿರ್ಮಿಸಲಿರುವ ಬಾಹ್ಯಾಕಾಶ ಕೇಂದ್ರ 20 ಟನ್ ತೂಕವಿರಲಿದೆ. ಭೂಮಿಯಿಂದ 400 ಕಿ.ಮೀ. ಎತ್ತರದ ಕಕ್ಷೆಯಲ್ಲಿ ಅದು ಇರಲಿದೆ. ಗಗ ನ ಯಾ ತ್ರಿ ಗಳು 15-20 ದಿನಗಳ ಕಾಲ ಅಲ್ಲಿರಲಿದ್ದಾರೆ ಎಂದಿ ದ್ದರು. 2023ರಲ್ಲಿ ಗಗನ ಯಾನ ಕೈಗೊಂಡ ಬಳಿಕ ಐದರಿಂದ ಏಳು ವರ್ಷಗಳ ಒಳಗಾಗಿ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಕೈಗೆತ್ತಿ ಕೊಳ್ಳಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದರು.
ಕೇಂದ್ರ ಸರಕಾರ ಮತ್ತು ಇಸ್ರೋದ ಮಹತ್ವಾ ಕಾಂಕ್ಷಿ ಯೋಜನೆಯಾಗಿರುವ ಮಾನವ ಸಹಿತ ಗಗನ ಯಾನವನ್ನು 2023 ರಲ್ಲಿ ಕೈಗೆತ್ತಿಕೊಳ್ಳುವು ದಾಗಿ ಈಗಾಗಲೇ ಘೋಷಿಸ ಲಾಗಿದೆ. ಅದೇ ವರ್ಷ ಶುಕ್ರ ಗ್ರಹದ ಅಧ್ಯಯನಕ್ಕೆ ಸಂಬಂಧಿಸಿದ ಯೋಜನೆಯನ್ನೂ ಜಾರಿಗೊಳಿಸಲು ಕಾರ್ಯಯೋಜನೆ ಹಾಕಿ ಕೊಳ್ಳಲಾಗಿದೆ.