ಬಂಗಾರಪೇಟೆ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ರುವ ತೀರ ಹಿಂದುಳಿದಿರುವ, ನಿರಾಶ್ರಿತ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಗುಂಪು ಮನೆ ನಿರ್ಮಾಣ ಮಾಡಲಾಗುತ್ತಿದೆ.
5 ವರ್ಷಗಳ ಹಿಂದೆ ನಿರ್ಮಾಣ ಮಾಡಿದ ವಸತಿಗೃಹಗಳು, ಜನಪ್ರತಿ ನಿಧಿಗಳು, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ನನೆಗುದಿಗೆ ಬಿದ್ದು, ಕಾಮಗಾರಿ ಆಮೆ ಗತಿಯಲ್ಲಿ ನಡೆಯುತ್ತಿದೆ. ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಗುಡಿಸಲುಗಳಲ್ಲಿ ವಾಸಮಾಡುತ್ತಿರುವ ಬಡ ಕುಟುಂಬಗಳನ್ನು ಗುರುತಿಸಿ ಅವರಿಗೆಲ್ಲ ಪುರಸಭೆಯಿಂದ ಉಚಿತ ನಿವೇಶನ ನೀಡಿ, ಕೊಳಚೆ ನಿರ್ಮೂಲನೆ ಮಂಡಳಿಯಿಂದ ಗುಂಪು ಮನೆಗಳನ್ನು ನಿರ್ಮಾಣ ಮಾಡಿಕೊಡುವ ಬಗ್ಗೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ 5 ವರ್ಷ ಹಿಂದೆ ಭರವಸೆ ನೀಡಿದ್ದರು. ಅದರಂತೆ ಮನೆಗಳ ನಿರ್ಮಾ ಣಕ್ಕೂ ಹಸಿರು ನಿಶಾನೆ ನೀಡಿ, ಮನೆ ಪೂರ್ಣಗೊಳಿಸದೇ ಪಾಳು ಬಿದ್ದಿವೆ.
ಫಲಾನುಭವಿಗಳು ಆಯ್ಕೆ: ಪಟ್ಟಣದ ಕೆಂಪೇಗೌಡ ವೃತ್ತದ ಬಳಿಯಿರುವ ಕಾರಹಳ್ಳಿ ರಸ್ತೆಯಲ್ಲಿ ಗುಂಪು ಮನೆಗಳನ್ನು ನಿರ್ಮಾಣ ಮಾಡುತ್ತಿದ್ದು, ಗುಡಿಸಲು ಗಳಲ್ಲಿ ವಾಸವಾಗಿರುವ ಪರಿಶಿಷ್ಟ ಜಾತಿ, ಪಂಗಡ ದವರು ಹಾಗೂ ಸಾಮಾನ್ಯ ವರ್ಗಕ್ಕೆ ಸೇರಿದ ಬಡವ ರಿಗೆ ಒಂದೇ ಕಡೆ ವಾಸಿಸಲು ಯೋಜನೆ ರೂಪಿಸಿದ್ದು, ಒಟ್ಟು 110 ಮನೆ ನಿರ್ಮಾಣ ಮಾಡಲು ಫಲಾನು ಭವಿಗಳನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ. ವಂತಿಗೆ ಪಾವತಿಸಿ: ಕೊಳಚೆ ನಿರ್ಮೂಲನೆ ಮಂಡಳಿ ಯಿಂದ 4.25 ಲಕ್ಷ ರೂ. ನೀಡಿದರೆ ಫಲಾನುಭವಿ 60 ಸಾವಿರ ರೂ. ಪಾವತಿಸಬೇಕು. ಈಗಾಗಲೇ ಫಲಾನುಭವಿಗಳು 60 ಸಾವಿರ ರೂ. ಪೈಕಿ ಕೇವಲ 5 ಸಾವಿರ ರೂ. ಮಾತ್ರ ಕೊಳಚೆ ಮಂಡಳಿಗೆ ಪಾವತಿ ಮಾಡಿದ್ದಾರೆ. ಉಳಿದ 55 ಸಾವಿರ ಹಣವನ್ನು ಪಾವತಿ ಮಾಡದೆ ವಿಳಂಬ ಮಾಡಿದ್ದರಿಂದ ಈ ಯೋಜನೆ ಸಹ ಆಮೆ ನಡಿಗೆಯಲ್ಲಿ ಸಾಗಲು ಕಾರಣವಾಗಿದೆ. ಕೊಳಚೆ ನಿರ್ಮೂಲನೆ ಮಂಡಳಿ ಒಂದು ಹಂತಕ್ಕೆ ಪೂರ್ಣಗೊಳಿಸಿದ್ದು, ಫಲಾನುಭವಿ ವಂತಿಕೆ ಹಣ ವಿಳಂಬದಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಿದೆ.
ಕೋಟ್ಯಂತರ ರೂ. ನೀರಲ್ಲಿ ಹೋಮ: ಈ ಗುಂಪು ಮನೆಗಳಿಗೆ ಹೋಗಲು ಸರಿಯಾದ ರಸ್ತೆಯೂ ಇಲ್ಲ, ಬೀದಿ ದೀಪಗಳೂ ಇಲ್ಲ, ಗುಂಪು ಮನೆಗಳ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಕೊಳಚೆ ನಿರ್ಮೂಲನೆ ಮಂಡಳಿ ಸಹ ಫಲಾನುಭವಿಗಳ ನಿರಾಸಕ್ತಿ ತೋರಿರುವುದರಿಂದ ಮಂಡಳಿ ಸಹ ಆಸಕ್ತಿ ತೋರದೆ ಕಡೆಗಣಿಸಿದೆ. ಇದರಿಂದ ಕೋಟ್ಯಂತರ ರೂ. ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಅರ್ಧಕ್ಕೆ ನಿಂತಿರುವ ಗುಂಪು ಮನೆಗಳು ಈಗ ಪುಂಡ ಪೋಕರಿಗಳ ಅನೈತಿಕ ಚಟುವಟಿಕೆಗಳ ಅಡ್ಡವಾಗಿವೆ. ರಾತ್ರಿ ವೇಳೆ ಕುಡುಕರು ಎಣ್ಣೆ ಪಾರ್ಟಿ ಮಾಡಿ ಅಲ್ಲೆ ಬಾಟಲಿಗಳನ್ನು ಎಸೆದು ವಾತಾವರಣ ಕಲುಷಿತಗೊಳಿಸಿದ್ದಾರೆ. ಇಲಾಖೆ ಮನೆಗಳ ಸುತ್ತಲೂ ಬೇಲಿ ನಿರ್ಮಾಣ ಮಾಡದೆ, ಕಡೆಗಣಿಸಿರುವುದರಿಂದ ಪಾಳು ಬಿದ್ದಿದೆ.
ಜನರು ವಾಸ ಮಾಡಲು ಯೋಗ್ಯವಲ್ಲದ ಸ್ಥಳದಲ್ಲಿ ಗುಂಪು ಮನೆಗಳನ್ನು ನಿರ್ಮಾಣ ಮಾಡುತ್ತಿರುವುದರಿಂದ ಜನರೂ ತನ್ನ ವಂತಿಕೆ ಹಣ ಪಾವತಿ ಮಾಡಲು ಹಿಂದೇಟು ಹಾಕುತಿದ್ದಾರೆಂದು ತಿಳದು ಬಂದಿದೆ. ಒಂದು ಮೂಲದ ಪ್ರಕಾರ ಈ ಗುಂಪು ಮನೆಗಳ ಫಲಾನುಭವಗಳ ಆಯ್ಕೆಯಲ್ಲೇ ಅಕ್ರಮ ನಡೆದಿದ್ದು, ಅರ್ಹರಿಗೆ ಮನೆ ದಕ್ಕಿಲ್ಲ, ಉಳ್ಳವರಿಗೆ ಹಂಚಿಕೆ ಮಾಡಲಾಗಿದೆ. ಆದ್ದರಿಂದಲೇ ಯೋಜನೆ ವಿಳಂಬಕ್ಕೆ ಕಾರಣವೆಂಬ ಆರೋಪಗಳೂ ಸಾಮಾನ್ಯವಾಗಿ ಕೇಳಿ ಬರುತ್ತಿದೆ. ಬಂಗಾರಪೇಟೆ ಪುರಸಭೆ ವ್ಯಾಪ್ತಿಯ ಪಟ್ಟಣದಲ್ಲಿ ಕೊಳಚೆ ನಿರ್ಮೂಲನೆ ಮಂಡಳಿಯಿಂದ ನಿರ್ಮಾಣ ಹಂತದಲ್ಲಿ ರುವ ಗುಂಪು ಮನೆಗಳಿಗೆ ಫಲಾನುಭವಿ ಗಳು 60 ಸಾವಿರ ರೂ. ಹಣ ಪಾವತಿಸ ಬೇಕು. ಉಳಿದ 4.25 ಲಕ್ಷ ರೂ. ಸರ್ಕಾರ ಪಾವತಿ ಮಾಡುತ್ತದೆ. ಫಲಾನುಭವಿಗಳ ವಂತಿಕೆ ವಿಳಂಬದಿಂದ ಯೋಜನೆ ಸ್ಥಗಿತವಾಗಿದೆ.
-ಚರಣ್‌ರಾಜ್, ಎಇಇ, ಕೊಳಚೆ ನಿರ್ಮೂಲ ಮಂಡಳಿ, ಬೆಂಗಳೂರು
-ಎಂ.ಸಿ.ಮಂಜುನಾಥ್