ಲಾಹೋರ್: ವಿಶ್ವಕಪ್‌ನಿಂದ ಬಹಳ ಬೇಗ ಹೊರಬಿದ್ದ ಪಾಕಿಸ್ಥಾನವಿನ್ನು ವರ್ಷಾಂತ್ಯದ ಆಸ್ಟ್ರೇಲಿಯ ಪ್ರವಾಸಕ್ಕೆ ಅಣಿಯಾಗಿದೆ. ಇದಕ್ಕಾಗಿ ಪ್ರಕಾಟಿಸಲಾದ ಟೆಸ್ಟ್ ತಂಡದಲ್ಲಿ ಮೂವರು ಹೊಸಬರಿಗೆ ಅವಕಾಶ ನೀಡಲಾಗಿದೆ. ಇವರೆಂದರೆ ಓಪನರ್ ಸೈಮ್ ಅಯೂಬ್, ಆಮಿರ್ ಜಮಾಲ್ ಮತ್ತು ಪೇಸ್ ಬೌಲರ್ ಖುರ್ರಂ ಶಾಜಾದ್.
ಭುಜದ ನೋವಿನಿಂದ ಇನ್ನೂ ಚೇತರಿಸದ ನಸೀಮ್ ಶಾ ತಂಡಕ್ಕೆ ಆಯ್ಕೆಯಾಗಿಲ್ಲ. ಎಡಗೈ ಪೇಸರ್ ಮಿರ್ ಹಮ್ಜಾ ಅವರನ್ನು ಮರಳಿ ಕರೆಸಲಾಗಿದೆ. ಫಖರ್ ಜಮಾನ್, ಹ್ಯಾರಿಸ್ ರವೂಫ್, ಉಸ್ಮಾ ಮಿರ್, ಶದಾಬ್ ಖಾನ್, ಇಫ್ತಿಕಾರ್ ಅಹ್ಮದ್ ಅವರನ್ನು ಕೈಬಿಡಲಾಗಿದೆ.
ವಹಾಬ್ ರಿಯಾಜ್ ನೇತೃತ್ವದ ನೂತನ ಆಯ್ಕೆ ಸಮಿತಿ ತಂಡವನ್ನು ಅಂತಿಮಗೊಳಿಸಿತು. ಟೆಸ್ಟ್ ತಂಡವನ್ನು ಶಾನ್ ಮಸೂದ್ ಮುನ್ನಡೆಸಲಿದ್ದಾರೆ.
ಪರ್ತ್ (ಡಿ. 14-18), ಮೆಲ್ಬರ್ನ್ (ಡಿ. 26-30) ಮತ್ತು ಸಿಡ್ನಿಯಲ್ಲಿ (ಜ. 3-7) ಟೆಸ್ಟ್ ಪಂದ್ಯಗಳನ್ನು ಆಡಲಾಗುವುದು.
ಪಾಕಿಸ್ಥಾನ ಟೆಸ್ಟ್ ತಂಡ: ಶಾನ್ ಮಸೂದ್ (ನಾಯಕ), ಆಮಿರ್ ಜಮಾಲ್, ಅಬ್ದುಲ್ಲ ಶಫೀಕ್, ಅಬ್ರಾರ್ ಅಹ್ಮದ್, ಬಾಬರ್ ಆಜಂ, ಫಾಹಿಮ್ ಅಶ್ರಫ್, ಹಸನ್ ಅಲಿ, ಇಮಾಮ್ ಉಲ್ ಹಕ್, ಖುರ್ರಂ ಶಾಜಾದ್, ಮಿರ್ ಹಮ್ಜಾ, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಮ್ ಜೂ., ನೊಮಾನ್ ಅಲಿ, ಸೈಮ್ ಅಯೂಬ್, ಸಲ್ಮಾನ್ ಅಲಿ ಆಘಾ, ಸರ್ಫರಾಜ್ ಅಹ್ಮದ್, ಸೌದ್ ಶಕೀಲ್, ಶಾಹೀನ್ ಶಾ ಅಫ್ರಿದಿ