Advertisement

ಕೋವಿಡ್ ನಿಯಮ ಉಲ್ಲಂಘನೆ: ಶಾಸ್ತ್ರಿ, ಕೊಹ್ಲಿಗೆ ಬಿಸಿಸಿಐ ತರಾಟೆ

08:57 PM Sep 07, 2021 | Team Udayavani |

ಹೊಸದಿಲ್ಲಿ: ತಂಡದ ಜತೆಯಿದ್ದರೂ ಟೀಮ್‌ ಇಂಡಿಯಾ ಮುಖ್ಯ ಕೋಚ್‌ ರವಿಶಾಸ್ತ್ರಿಗೆ ಹೇಗೆ ಕೋವಿಡ್‌ ತಗುಲಿತು? ಇದೀಗ ಯಕ್ಷಪ್ರಶ್ನೆಯಾಗಿ ಉಳಿದಿಲ್ಲ. ಈ ಕುರಿತು ಬಿಸಿಸಿಐ ತನಿಖೆ ನಡೆಸಿದ್ದು, ಸೋಂಕಿನ ಮೂಲ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.

Advertisement

ಕೆಲವು ದಿನಗಳ ಹಿಂದೆ ವಿರಾಟ್‌ ಕೊಹ್ಲಿ ಹಾಗೂ ಕೋಚ್‌ ರವಿ ಶಾಸ್ತ್ರಿ ಲಂಡನ್‌ನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಇದಕ್ಕಾಗಿ ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಯಿಂದ ಅನುಮತಿ ಪಡೆದಿರಲಿಲ್ಲ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪರಿಣಾಮ ರವಿಶಾಸ್ತ್ರಿ ಕೊರೊನಾ ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ.

ವಿವರಣೆ ಕೇಳಿದ ಬಿಸಿಸಿಐ:

ಈ ವಿಷಯ ತಿಳಿಯುತ್ತಿದ್ದಂತೆ ಬಿಸಿಸಿಐ ನಾಯಕ ಕೊಹ್ಲಿ ಮತ್ತು ಕೋಚ್‌ ಶಾಸ್ತ್ರಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಕೊರೊನಾ ನಿಯಮವನ್ನು ಉಲ್ಲಂಘಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ವಿವರಣೆ ಕೇಳಿದೆ. ಯಾವುದೇ ಕಾರಣಕ್ಕೂ ಹೊರಗೆ ಓಡಾಡದಂತೆ ಆಟಗಾರರಿಗೆ ತಾಕೀತು ಮಾಡಿದೆ. ಓವಲ್‌ನಲ್ಲಿ 50 ವರ್ಷಗಳ ಬಳಿಕ ಗೆಲುವು ದಾಖಲಿಸಿದರೂ ಟೀಮ್‌ ಇಂಡಿಯಾ ಯಾವುದೇ ರೀತಿಯ ಪಾರ್ಟಿ ಮಾಡುವಂತಿಲ್ಲ ಎಂದು ಬಿಸಿಸಿಐ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next