Advertisement

ಅಕ್ರಮ ನಿರ್ಮಾಣದ ಮನೆ ತೆರವು

10:56 PM May 29, 2019 | sudhir |

ಶಿರ್ವ: ನ್ಯಾಯಾಲಯದ ಆದೇಶದಂತೆ ಕುತ್ಯಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಅಗರ್‌ದಂಡೆ ಕೊಡಪಟ್ಯಬಳಿ ಲೋಕೋಪಯೋಗಿ ಇಲಾಖೆಗೆ ಸೇರಿದ ಜಮೀನಿನಲ್ಲಿ ಅಕ್ರಮವಾಗಿ ದಿ| ರಮೇಶ್‌ ಆಚಾರ್ಯ ಅವರ ಪತ್ನಿ ಸುಂದರಿ ಆಚಾರ್ಯ ನಿರ್ಮಿಸಿದ್ದ ಮನೆಯನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಬುಧವಾರ ನೆಲಸಮ ಮಾಡಿದ್ದಾರೆ.

Advertisement

ಈ ಜಮೀನಿಗೆ ಹೊಂದಿಕೊಂಡು ಪಾಂಡುರಂಗ ಹೆಗ್ಡೆ ಎಂಬವರಿಗೆ ಸೇರಿದ ಜಮೀನಿದ್ದು, ಅವರು ಲೋಕೋಪಯೋಗಿ ಇಲಾಖೆಯ ಜಮೀನಿನಲ್ಲಿ ಸುಂದರಿ ಆಚಾರ್ಯ ಅವರು ಅಕ್ರಮವಾಗಿ ಮನೆ ನಿರ್ಮಿಸಿ ವಾಸವಾಗಿರುವುದರ ವಿರುದ್ಧ ಹೆಗ್ಡೆಯವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಕಳೆದ ಹಲವು ವರ್ಷಗಳಿಂದ ಈ ಪ್ರಕರಣ ನ್ಯಾಯಾಲಯದಲ್ಲಿದ್ದು, ಹೈಕೋರ್ಟ್‌ ಮನೆ ತೆರವುಗೊಳಿಸುವಂತೆ ಲೋಕೋಪಯೋಗಿ ಇಲಾಖೆಗೆ ಆದೇಶ ನೀಡಿದೆ. ಒಂದು ವೇಳೆ ಆದೇಶ ಪಾಲಿಸದಿದ್ದಲ್ಲಿ ಇಲಾಖೆ ಅಧಿಕಾರಿಗಳ ಮೇಲೆ ಕ್ರಮ ಜರಗಿಸುವುದಾಗಿ ನ್ಯಾಯಾಲಯ ತಿಳಿಸಿತ್ತು. ಅದರಂತೆ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಯವರ ಮಾರ್ಗದರ್ಶನದಂತೆ ಲೋಕೋಪಯೋಗಿ ಅಧಿಕಾರಿಗಳು 15-5-2019ರ ಒಳಗೆ ಮನೆ ತೆರವುಗೋಳಿಸಲು ತಿಳಿಸಿದ್ದು ಬಳಿಕ ಯಾವುದೇ ಸಮಯದಲ್ಲಿ ಬಂದು ಮನೆ ತೆರವುಗೊಳಿಸುವುದಾಗಿ ನೋಟೀಸು ನೀಡಿದ್ದರು.

ಕಾಲಾವಕಾಶ ನೀಡಿದರೂ ಮನೆ ತೆರವು ಮಾಡದ ಹಿನೆ‌್ನಲೆಯಲ್ಲಿ ಬುಧವಾರ ಬೆಳಿಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾದ ಜಗದೀಶ ಭಟ್ ಹಾಗೂ ಅಶೋಕ್‌ ಸ್ಥಳಕ್ಕೆ ಬಂದು ಪೊಲೀಸರ ಸಹಕಾರದಿಂದ ತೆರವಿಗೆ ಮುಂದಾಗಿದ್ದು ಈ ಸಮಯದಲ್ಲಿ ಸ್ಥಳೀಯ ಕೆಲ ಮಂದಿ ಸೇರಿ ತೆರವು ತಡೆಯಲು ಯತ್ನಿಸಿದರು. ಕೊನೆಗೆ ಮನೆಯವರ ಮನವೊಲಿಸಿ ಅವರನ್ನು ಸ್ಥಳಾಂತರಿಸಿ ಜೆಸಿಬಿ ಸಹಾಯದಿಂದ ಅಧಿಕಾರಿಗಳು ಮನೆ ನೆಲಸಮಗೊಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next