ಚನ್ನರಾಯಪಟ್ಟಣ: ಜಿಲ್ಲೆಯ ಕೋವಿಡ್ ಸೋಂಕಿತರ ಪ್ರತಿ ಮನೆಗೆ ಚಿಕಿತ್ಸಾ ಕಿಟ್‌ಗಳನ್ನು ಉಚಿತವಾಗಿ ವಿತರಣೆ ಮಾಡಲು ಪೂರ್ವ ತಯಾರಿ ಮಾಡಿಕೊಳ್ಳುವಂತೆ ಡೀಸಿಗೆ ಜಿಲ್ಲಾಮಂತ್ರಿ ಕೆ.ಗೋಪಾಲಯ್ಯ ಸೂಚನೆ ನೀಡಿದರು. ಪಟ್ಟಣದ ಪ್ರವಾಸಿ ಮಂದಿರಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕೊರೊನಾ ಸೋಂಕು ಹೆಚ್ಚು ಹರಡುತ್ತಿರುವುದರಿಂದ ಸೋಂಕು ಗುಣಪಡಿ ಸುವ 15 ಬಗೆಯ ಚಿಕಿತ್ಸಾ ಸಾಮಗ್ರಿಗಳನ್ನು ಒಳಗೊಂಡ
ಕಿಟ್‌ಗಳನ್ನು ಸಿದ್ಧಪಡಿಸಿ ಪ್ರತಿ ಸೋಂಕಿತರ ಮನೆಗೆ ತಲುಪಿಸುವ ಕೆಲಸವನ್ನು ಆರೋಗ್ಯ ಇಲಾಖೆ ಮೂಲಕ ಜಿಲ್ಲಾಡಳಿತ ಮಾಡಲಿದೆ ಎಂದು ಭರವಸೆ ನೀಡಿದರು.
ಈಗಾಗಲೆ ಬೆಂಗಳೂರಿನ ಮಹಾ ಲಕ್ಷ್ಮೀ ಲೇಔಟ್ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರಾಯೋಗಿಕವಾಗಿ ವೈಯಕ್ತಿಕವಾಗಿ ಹಣ ಭರಿಸಿ ಕಿಟ್‌ತಯಾರು ಮಾಡಿ ಆಶಾ
ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ನರ್ಸ್ ಹಾಗೂ ಇತರ ಸಿಬ್ಬಂದಿಯೊಂದಿಗೆ ಪ್ರತಿ ಮನೆಗೆ ವಿತರಣೆ ಮಾಡಲಾಗುತ್ತಿದೆ ಎಂದರು.
ಯಾವ ರೋಗಕ್ಕೆ ಯಾವ ಮಾತ್ರೆ ತೆಗೆದುಕೊಳ್ಳಬೇಕು ಅದನ್ನು ಪರೀಕ್ಷಿಸಿ ಕೊಳ್ಳಲು ಅಗತ್ಯ ಸಾಮಗ್ರಿಗಳನ್ನು ಕಿಟ್‌ನಲ್ಲಿ ನೀಡಲಾಗಿದೆ, ಈ ಕಿಟ್‌ನಿಂದ ಕೊರೊನಾ ದೃಢಪಟ್ಟವರು ಮನೆಯಲ್ಲಿ ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತಿದೆ. ಇದೇ ಮಾದರಿಯಲ್ಲಿ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮಾಡುವಂತೆ ಈಗಾಗಲೆ ಸಿಎಂ ಜೊತೆ ಮಾತನಾಡಿದ್ದೇ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಗಿರೀಶ್ ಮಾತನಾಡಿ, ಈಗಾಗಲೆ ಕೈಗಾರಿಕಾ ಪ್ರದೇಶಲ್ಲಿನ ಅನೇಕ ಕಾರ್ಖಾನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಕೊರೊನಾ ಪರೀಕ್ಷೆ ಮಾಡಿದ್ದು
ಅದರಲ್ಲಿ ನೂರಾರು ಮಂದಿಗೆ ಕೊರೊನಾ ಪತ್ತೆಯಾಗಿದೆ, ಇದೇ ಮಾದರಿಯಲ್ಲಿ ಹಾಸನ ಜಿಲ್ಲೆಯ ಎಲ್ಲಾ ಕಾರ್ಖಾನೆಯ ಕಾರ್ಮಿಕರ ತಪಾಸಣೆ ಮಾಡಲಾಗು
ವುದು ಎಂದು ಹೇಳಿದರು. ಶಾಸಕ ಸಿ.ಎನ್.ಬಾಲಕೃಷ್ಣ, ಜಿಪಂ ಸಿಇಒ ಪರಮೇಶ, ಎಸಿ ಡಾ.ನವೀನ್‌ಭಟ್, ತಹಶೀಲ್ದಾರ್ ಜೆ.ಬಿ.ಮಾರುತಿ, ತಾಪಂ ಇಒ
ಚಂದ್ರಶೇಖರ್ ಇತರರು ಇದ್ದರು.