Advertisement
ಅಕ್ಟೋಬರ್ ಮೊದಲ ವಾರದಲ್ಲಿ ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವ ಹಿನ್ನೆಲೆಯಲ್ಲಿ 81,289 ಮಂದಿಗೆ ದಂಡ ವಿಧಿಸಲಾಗಿದೆ.
ಕ್ವಾರಂಟೈನ್‌ಗೆ ಒಳಪಟ್ಟವರು ಕಡ್ಡಾಯ ಕ್ವಾರಂಟೈನ್ ವಾಚ್ ಮೊಬೈಲ್ ಆ್ಯಪ್ ಬಳಸಬೇಕು. ಜೈಲು ಶಿಕ್ಷೆ ಅಥವಾ ದಂಡ
ಪದೇ ಪದೆ ಹೋಂ ಕ್ವಾರಂಟೈನ್ ನಿಯಮ ಉಲ್ಲಂ ಸಿದರೆ ವಿಪತ್ತು ನಿರ್ವಹಣೆ ಕಾಯ್ದೆ 2005 ಪ್ರಕಾರ ಜೈಲು ಶಿಕ್ಷೆ ಅಥವಾ ದಂಡ ವಿಧಿಸಬಹುದು. ಈವರೆಗೆ 4,19,804 ಮಂದಿ ನಿಯಮ ಉಲ್ಲಂ ಸಿದ್ದಾರೆ. ಈ ಪೈಕಿ ಐದು ಸಾವಿರ ಮಂದಿಯನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಸ್ಥಳಾಂತರಿಸಲಾಗಿದೆ. ಪದೇ ಪದೆ ನಿಯಮ ಉಲ್ಲಂ ಸಿದ 2,916 ಮಂದಿಯ ವಿರುದ್ಧ ಎಫ್ಐಆರ್ ಹಾಕಲಾಗಿದೆ. ಸೋಂಕು ಹೆಚ್ಚಿರುವ ಜಿಲ್ಲೆಗಳಾದ ಬೆಂಗಳೂರು, ಕಲಬುರಗಿ, ಬಳ್ಳಾರಿ, ಮೈಸೂರಿನಲ್ಲಿಯೇ ಹೆಚ್ಚು ನಿಯಮ ಉಲ್ಲಂಘನೆಯಾಗಿದೆ.