Advertisement

ಹೋಂ ಕ್ವಾರಂಟೈನ್‌ : ಶಿರ್ವದ 6 ಮನೆಗಳು ಸೀಲ್‌ ಡೌನ್‌

04:45 PM Jun 13, 2020 | sudhir |

ಶಿರ್ವ : ಇಲ್ಲಿನ ಗ್ರಾ.ಪಂ. ವ್ಯಾಪ್ತಿಯಲ್ಲಿ ಮಹಾರಾಷ್ಟ್ರದಿಂದ ಆಗಮಿಸಿದ ಒಟ್ಟು 28 ಮಂದಿಯನ್ನು ಸರಕಾರದ ಆದೇಶದಂತೆ ಹೋಂ ಕ್ವಾರಂಟೈನ್‌ ಮಾಡಲಾಗಿದ್ದು ಅವರು ವಾಸಿಸುವ 6 ಮನೆಯನ್ನು ಶುಕ್ರವಾರ ಸಂಜೆ ಸೀಲ್‌ಡೌನ್‌ ಮಾಡಲಾಗಿದೆ.

Advertisement

ಮಹಾರಾಷ್ಟ್ರದಿಂದ ಆಗಮಿಸಿ ಕ್ವಾರಂಟೈನ್‌ನಲ್ಲಿದ್ದ 10 ಮಂದಿ ಮತ್ತು ಮುಂಬೈನಿಂದ ಶುಕ್ರವಾರ ಬಂದ 18 ಮಂದಿಯನ್ನು ನೇರವಾಗಿ ಹೋಂ ಕ್ವಾರಂಟೈನ್‌ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಕಾಪು ತಹಶೀಲ್ದಾರ್‌ ಮಹಮ್ಮದ್‌ ಇಸಾಕ್‌ ನಿರ್ದೇಶನದಂತೆ ಕಂದಾಯ, ಪೊಲೀಸ್‌ ಮತ್ತು ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಶಿರ್ವ ಗ್ರಾ.ಪಂ. ವ್ಯಾಪ್ತಿಯ ಬಲ್ಲಾಡಿಯ 1,ಬಂಟಕಲ್ಲು ಮಾಣಿಪ್ಪಾಡಿ 2, ಶಿರ್ವ ಮಸೀದಿ ಬಳಿ 1,ಸೊಸೈಟಿ ಬಳಿ 1, ಹಾಗೂ ಜತ್ರಬೆಟ್ಟುವಿನ 1 ಮನೆ ಸೇರಿ ಒಟ್ಟು 6 ಮನೆಯನ್ನು ಸೀಲ್‌ಡೌನ್‌ ಮಾಡಲಾಗಿದ್ದು,28 ಮಂದಿಯನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ.

ಮನೆಯಿಂದ ಯಾರೂ ಹೊರಗೆ ಬಾರದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು,ನಿಗಾ ವಹಿಸಲಾಗಿದೆ. ಗ್ರಾಮಸ್ಥರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಕಾಪು ಕಂದಾಯ ಪರೀವೀಕ್ಷಕ ರವಿಶಂಕರ್‌, ಶಿರ್ವ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್‌, ಶಿರ್ವ ಪೊಲೀಸ್‌ ಠಾಣೆಯ ಎಎಸ್‌ಐ ಸುರೇಶ್‌, ಗ್ರಾಮ ಕರಣಿಕ ವಿಜಯ್‌, ಸಹಾಯಕ ಭಾಸ್ಕರ್‌,ಆರೋಗ್ಯ ಸಹಾಯಕಿ ಗೀತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next