ಬೆಂಗಳೂರು: ವಿದೇಶದಿಂದ ಹಾಗೂ ಹೊರ ರಾಜ್ಯಗಳಿಂದ ಬರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇವರನ್ನು ಕ್ವಾರಂಟೈನ್ ಮಾಡುವುದು ಸವಾಲಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ವಿದೇಶದಿಂದ ಹಾಗೂ ಹೊರ ರಾಜ್ಯ ದಿಂದ ಬರುವವರನ್ನು ಸಾಂಸ್ಥಿಕ ಕ್ವಾರಂ ಟೈನ್ ಮಾಡುವ ಬದಲು ಹೋಂ ಕ್ವಾರಂಟೈನ್ ಮಾಡುವ ನಿಟ್ಟಿನಲ್ಲಿ ಗಂಭೀರವಾದ ಚರ್ಚೆ ನಡೆದಿದೆ.
ಈ ಸಂಬಂಧ ಗುರುವಾರ ಸುದ್ದಿ ಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್, ಪ್ರತಿ ದಿನ ಹೊರರಾಜ್ಯ ಗಳಿಂದ ಲಕ್ಷಾಂತರ ಜನ ನಗರಕ್ಕೆ ಬರುತ್ತಿ ದ್ದಾರೆ. ಎಲ್ಲರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲು ಬೇಕಾದಷ್ಟು ಕೊಠಡಿಗಳು ಇಲ್ಲ. ಹೀಗಾಗಿ, ನೇರವಾಗಿ ಹೋಂ ಕ್ವಾರಂಟೈನ್ ಮಾಡುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ. ದಿನ 15 ಸಾವಿರಕ್ಕೂ ಹೆಚ್ಚು ಜನ ವಿವಿಧ ಮಾರ್ಗವಾಗಿ ನಗರವನ್ನು ಪ್ರವೇಶಿಸುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಆದರೆ, ಸದ್ಯ ನಗರದ 6,068 ಹೋಟೆಲ್ ಕೊಠಡಿಗಳು ಹಾಗೂ ಹಾಸ್ಟೆಲ್‌ಗಳಲ್ಲಿ 4 ಸಾವಿರ ಹಾಸಿಗೆ ಗಳನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲು ಸಾಧ್ಯವಿದೆ. ಮುಂದಿನ ದಿನಗಳಲ್ಲಿ ಇದು ಸಮಸ್ಯೆಯಾಗಲಿದ್ದು, ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲಾಗು ವುದು ಎಂದರು.
ಅನುಮತಿ ನೀಡಿದರೆ ಅಗತ್ಯಕ್ರಮ: ಸರ್ಕಾರ ನೇರ ಹೋಂ ಕ್ವಾರಂಟೈನ್ ಮಾಡುವುದಕ್ಕೆ ಅನುಮತಿ ನೀಡಿದಲ್ಲಿ, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಚೆಕ್‌ಫೋಸ್ಟ್ ಗಳಲ್ಲಿ ಪ್ರಯಾಣಿಕರ ಕೈಗೆ ಸೀಲ್ ಹಾಕಲಾಗು ವುದು. ಅವರ ಫೋನ್ ನಂಬರ್ ಪಡೆದು ಲೊಕೇಷನ್ ಟ್ರ್ಯಾಕ್ ಮಾಡಲಾಗುವುದು. ಜತೆಗೆ ಕ್ವಾರಂಟೈನ್ ಆಗುವವರ ಮನೆಯ ಬಾಗಿಲಿನ ಮುಂದೆ ಕ್ವಾರಂಟೈನ್ ನೋಟಿಸ್ ತೀರ್ಮಾನಿಸಲಾಗಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗಂಟಲು ದ್ರವ ಪರೀಕ್ಷೆಗೆ ತೊಡಕು: ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಗಳಲ್ಲಿಯೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಜನರ ಗಂಟಲು ದ್ರವ ಪರೀಕ್ಷೆಯನ್ನು ಬೆಂಗಳೂರಿನಲ್ಲಿರುವ ಲ್ಯಾಬ್‌ಗಳಿಗೆ ಕಳುಹಿಸುತ್ತಿರುವ ಹಿನ್ನೆಲೆಯಲ್ಲಿ 2 ದಿನಗಳಲ್ಲಿ ಬರುತ್ತಿದ್ದ ಪರೀûಾ ವರದಿಗಳು ಮೂರರಿಂದ ನಾಲ್ಕು ದಿನವಾಗು ತ್ತಿದೆ. ಹೀಗಾಗಿ, ಉಳಿದ ಪ್ರಕ್ರಿಯೆಗಳೂ ವಿಳಂಬವಾಗುತ್ತಿದೆ ಎಂದು ಮಾಹಿತಿ ನೀಡಿದರು.