Advertisement

ಡಾ.ರಘುರಾಮ್‌ ರಾಜನ್‌ಗೆ ನೊಬೆಲ್‌ ?

06:10 AM Oct 08, 2017 | Team Udayavani |

ನವದೆಹಲಿ: ಪ್ರಸಕ್ತ ಸಾಲಿನ ಅರ್ಥಶಾಸ್ತ್ರ ನೊಬೆಲ್‌ಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಾಜಿ ಗವರ್ನರ್‌ ಡಾ.ರಘುರಾಮ್‌ ರಾಜನ್‌ ಪಾತ್ರರಾಗಲಿದ್ದಾರೆಯೇ? ನೊಬೆಲ್‌ ಸಂಭಾವ್ಯರ ಪಟ್ಟಿಯಲ್ಲಿ ವಿಶ್ವದ 6 ಮಂದಿ ಹಣಕಾಸು ಕ್ಷೇತ್ರದ ತಜ್ಞರ ಪೈಕಿ ರಾಜನ್‌ ಹೆಸರೂ ಇದೆ ಎಂದು ಅಮೆರಿಕದ “ದ ವಾಲ್‌ ಸ್ಟ್ರೀಟ್‌ ಜರ್ನಲ್‌’ ವರದಿ ಮಾಡಿದೆ.

Advertisement

ಕಾರ್ಪೊರೇಟ್‌ ಕ್ಷೇತ್ರದಲ್ಲಿ ಹಣಕಾಸು ಹರಿವಿನ ಬಗ್ಗೆ ಪ್ರಮುಖ ನಿರ್ಧಾರ ಕೈಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕೆ ಪ್ರತಿಯಾಗಿ ರಾಜನ್‌ ಅವರನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ವರದಿ ತಿಳಿಸಿದೆ.

2008ರಲ್ಲಿ ಅಮೆರಿಕ ಮತ್ತು ವಿಶ್ವಕ್ಕೆ ಆರ್ಥಿಕ ಹಿಂಜರಿತ ಕಾಡಲಿದೆ ಎಂದು ಡಾ.ರಾಜನ್‌ 2005ರಲ್ಲಿ ಎಚ್ಚರಿಕೆ ನೀಡಿದ್ದರು. ಆದರೆ, ಆ ಸಂದರ್ಭದಲ್ಲಿ ಅವರ ಮಾತುಗಳನ್ನು ಲಘುವಾಗಿ ಪರಿಗಣಿಸಲಾಗಿತ್ತು. ಹಲವರು ಅವರ ಹೇಳಿಕೆ ಕುರಿತು ವ್ಯಂಗ್ಯವಾಡಿದ್ದರು. ಆದರೆ, ರಾಜನ್‌ ಅವರು ಭವಿಷ್ಯ ನುಡಿದ ಮೂರೇ ವರ್ಷಗಳಲ್ಲಿ ಅಮೆರಿಕವು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿತ್ತು.

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯ ಮುಖ್ಯ ಹಣಕಾಸು ತಜ್ಞರಾಗಿ ನೇಮಕವಾದ ಪಾಶ್ಚಿಮಾತ್ಯ ರಾಷ್ಟ್ರದವರಲ್ಲದ ಮತ್ತು 40 ವರ್ಷಕ್ಕಿಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೂ ರಘುರಾಮ್‌ ರಾಜನ್‌ ಪಾತ್ರರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next