Advertisement

ಮನೆ ಬಾಡಿಗೆ ಕಟ್ಟಿಲ್ಲವೆಂದು ಗಾಳಿಯಲ್ಲಿ ಗುಂಡು ಹಾರಿಸಿ ಹೆದರಿಸಿದ ಮಾಲೀಕ: ವಿಡಿಯೋ ವೈರಲ್

01:28 PM Jun 15, 2020 | keerthan |

ಚಿಕ್ಕೋಡಿ: ಮನೆ ಬಾಡಿಗೆ ಕಟ್ಟಿಲ್ಲವೆಂದು ಮನೆ ಮಾಲೀಕ ಬಂದೂಕು ತೋರಿಸಿ ಗಾಳಿಯಲ್ಲಿ ಗುಂಡು ಹಾರಿಸಿದ ವಿಚಿತ್ರ ಘಟನೆ ಚಿಕ್ಕೋಡಿ ನಗರದಲ್ಲಿ ರವಿವಾರ ರಾತ್ರಿ ನಡೆದಿದೆ.

Advertisement

ಚಿಕ್ಕೋಡಿ ನಗರದ ಬಿ.ಕೆ. ಕಾಲೇಜಿನ ಹತ್ತಿರ ಬಾಡಿಗೆ ಮನೆಯಲ್ಲಿ ವಾಸ ಮಾಡಿರುವ ರೋಹಿಣಿ ಕುಲಕರ್ಣಿ ಎಂಬ ಮಹಿಳೆ ಮನೆ ಮಾಲಿಕನಿಗೆ ಬಾಡಿಗೆ ಬಾಕಿ ಇರಿಸಿದ್ದರು. ಇದಕ್ಕಾಗಿ ಮನೆ ಮಾಲಿಕ ನಿನ್ನೆ ರಾತ್ರಿ ಮಹಿಳೆಯ ಮನೆಗೆ ಬಂದು  ತಕ್ಷಣವೇ ಮನೆ ಖಾಲಿ ಮಾಡಬೇಕೆಂದು ಬೆದರಿಕೆ ಹಾಕಿ ಗಾಳಿಯಲ್ಲಿ ಗುಂಡು ಹಾರಿಸಿ ಹೆದರಿಸಿದ್ದಾನೆ. ಗಾಳಿಯಲ್ಲಿ ಗುಂಡು ಹಾರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮನೆ ಮಾಲಿಕ ಯಾರು ಎಂಬುದು ಸ್ಪಷ್ಟವಾಗಿ ತಿಳಿಯುತ್ತಿಲ್ಲ. ಈ ಘಟನೆ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಇನ್ನೂ ಪ್ರಕರಣ ದಾಖಲಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next