Advertisement
ಕಾಟಿಪಳ್ಳ ಗ್ರಾಮದಲ್ಲೇ ಮುಕ್ಕಾಲು ಕಿಲೋ ಮೀಟರ್ ಶವಯಾತ್ರೆ ನಡೆಸಲು ಪೊಲೀಸರು ಅನುಮತಿ ನೀಡಿದ್ದರು. ಶವಯಾತ್ರೆ ನಡೆದ ಬಳಿಕ ಸುರತ್ಕಲ್‌ನ ಗಣೇಶಕಟ್ಟೆ ರುದ್ರ ಭೂಮಿಯಲ್ಲಿ ಶಿವಾಜಿ ಕ್ಷತ್ರಿಯ ಸಂಪ್ರದಾಯದಂತೆ ಅತ್ಯಂಕ್ರಿಯೆ ನಡೆಸಲಾಯಿತು. ದೀಪಕ್ ಸಹೋದರ ಅಂತಿಮ ವಿಧಿವಿಧಾನ ನೆರವೇರಿಸಿದರು.
Related Articles
Advertisement
ಸುದ್ದಿಗಾರರೊಂದಿಗೆ ಮಾತನಾಡಿದಗೃಹ ಸಚಿವ ರಾಮಲಿಂಗಾ ರೆಡ್ಡಿ ‘ ದೀಪಕ್ ರಾವ್ ಮೃತ ದೇಹ ಸಾಗಾಣಿಕೆ ವಿಚಾರದಲ್ಲಿ ಪೊಲೀಸ್ ಇಲಾಖೆ ಸೂಕ್ತ ತೀರ್ಮಾನ ಕೈಗೊಂಡಿದೆ. ದೀಪಕ್ ರಾವ್ ಯಾವ ಸಂಘಟನೆಗೆ ಸೇರಿದ್ದಾರೆ,ಯಾವ ಉದ್ದೇಶದಿಂದ ಕೊಲೆ ನಡೆದಿದೆ ಎಂಬುದು ತನಿಖೆಯಿಂದ ಹೊರ ಬರಬೇಕಿದೆ. ಪ್ರಕರಣವನ್ನು ಎನ್‌ಐಎ ತನಿಖೆಗೆ ನೀಡುವ ಅಗತ್ಯವಿಲ್ಲ ಕೊಲೆಗೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ.ಎಡಿಜಿಪಿ ಕಮಲ್ ಪಂತ್ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ.ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನಿಷೇದಾಜ್ಞೆ ಜಾರಿ ಮಾಡಲಾಗಿದೆ.ಎನ್ ಐಎ ತನಿಖೆ ನೀಡುವ ಅವಶ್ಯಕತೆ ಇಲ್ಲ’ ಎಂದರು. ‘ಚುನಾವಣೆ ಬರ್ತಿದೆ,ಎಲ್ಲವನ್ನು ರಾಜಕೀಕರಣ ಮಾಡುವುದು ಸೂಕ್ತವಲ್ಲ.ಸಮಾಜದ ಶಾಂತಿ ಸುವ್ಯೆವಸ್ಥೆ ಕೆಡಿಸುವ ಕೆಲಸ ಮಾಡುವುದು ಸಮರ್ಥನೀಯವಲ್ಲ.ಸದ್ಯಕ್ಕೆ ಪರಿಸ್ಥಿತಿ ಹತೋಟಿಯಲ್ಲಿದೆ’ ಎಂದು ಹೇಳಿಕೆ ನೀಡಿದ್ದಾರೆ. ಸಿಎಂ ಜೊತೆ ಚರ್ಚೆ ‘ನಾನು ಸ್ಥಳಕ್ಕೆ ತೆರಳುವ ಕುರಿತು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ತಿಳಿಸುತ್ತೇನೆ’ ಎಂದು ಸಚಿವ ರೆಡ್ಡಿ ಹೇಳಿಕೆ ನೀಡಿದ್ದರು. ಸಾವಿರಾರು ಜನರು ಮನೆಯ ಮುಂದೆ ಜಮಾವಣೆಗೊಳ್ಳುತ್ತಿದ್ದು ಶವಯಾತ್ರೆ ನಡೆಸಲು ಅವಕಾಶ ನೀಡದ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಮೃತನ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಸ್ಥಳಕ್ಕೆ ಎಸಿ ಅಂಬುಲೆನ್ಸ್ ದೀಪಕ್ ಶವವಿಟ್ಟು ಹೋರಾಟ ನಡೆಸಲು ಸಂಘ ಪರಿವಾರ, ಬಿಜೆಪಿ ಮತ್ತು ಸ್ಥಳೀಯರು ತೀರ್ಮಾನಿಸಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಹವಾನಿಯಂತ್ರಣ ವ್ಯವಸ್ಥೆ ಇರುವ ವಿಶೇಷ ಅಂಬುಲೆನ್ಸ್ ತರಿಸಲಾಗಿತ್ತು.
ಜಿಲ್ಲಾದ್ಯಂತ ಪ್ರತಿಭಟನೆ ದಕ್ಷಿಣ ಕನ್ನಡದ ಎಲ್ಲಾ ತಾಲೂಕು ಕೇಂದ್ರ ಗಳಲ್ಲಿ ದೀಪಕ್ ರಾವ್ ಹತ್ಯೆ ಖಂಡಿಸಿ ಬಿಜೆಪಿ, ಸಂಘಪರಿವಾರದ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿ ರಾಜ್ಯ ಸಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಸೂಕ್ತ ತನಿಖೆ ನಡೆಸಿ ಬಂಧಿತ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ಒತ್ತಾಯಿಸಿದ್ದಾರೆ. ಬುಧವಾರ ಮಧ್ಯಾಹ್ನ ದೀಪಕ್ ರಾವ್ (28) ಅವರನ್ನು ದುಷ್ಕರ್ಮಿಗಳು ಮಾರಕಾಯುಧಗಳಿಂದ ಕಡಿದು ಕೊಲೆ ಮಾಡಿದ್ದರು. ಸಿನಿಮೀಯ ಶೈಲಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಘಟನೆ ನಡೆದಮೂರೂವರೆ ತಾಸುಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೂಲ್ಕಿಯ ನೌಷಾದ್,ರಿಜ್ವಾನ್, ಪಿಂಕಿ ನವಾಜ್ ಮತ್ತು ನಿರ್ಷಾನ್ ಬಂಧಿತರು.