ಬೆಳಗಾವಿ : ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ಮಂಗಳವಾರ ಮುಂಜಾನೆ, ಬೆಳಗಾವಿ ನಗರ ಅನಾಗೊಳ ದಲ್ಲಿ ಪುನರ್ ಪ್ರತಿಷ್ಠಾಪನೆ ಗೊಂಡ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರವರ ಪ್ರತಿಮೆ ಮತ್ತು ನಗರದಲ್ಲಿ, ಸ್ಥಾಪಿಸಲಾಗಿರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.
ಬೆಳಗಾವಿ ನಗರದಲ್ಲಿ ಸ್ಥಾಪಿಸಲಾಗಿರುವ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ರಾಯಣ್ಣ ರವರ ಪ್ರತಿಮೆಗೆ ಅವಮಾನ ಮಾಡಿದ ದುಷ್ಕರ್ಮಿಗಳು ದೇಶ ದ್ರೋಹಿಗಳು, ಅವರಿಗೆ ತಕ್ಕ ಶಾಸ್ತಿ ವಿಧಿಸುತ್ತೇವೆ. ಇದರ ಹಿಂದಿನ ಇರಬಹುದಾದ ಸಂಚನ್ನು, ಪೊಲೀಸರು ಬಯಲುಗೊಳಿಸುತ್ತಾರೆ ಎಂದರು.
ಗೃಹ ಸಚಿವರ ಜೊತೆಯಲ್ಲಿ ಶಾಸಕ ಶ್ರೀ ಅಭಯ್ ಪಾಟೀಲ್ ಆವರು ಉಪಸ್ಥಿತರಿದ್ದರು.