Advertisement

ಹೋಮ್‌ ಮಿನಿಸ್ಟರ್‌ ಟ್ರೇಲರ್‌ ಹಿಟ್‌ ಲಿಸ್ಟ್‌ ಗೆ; ಏ.01ರಂದು ಉಪ್ಪಿ ಚಿತ್ರ ಬಿಡುಗಡೆ

09:09 AM Mar 25, 2022 | Team Udayavani |

ಉಪೇಂದ್ರ ನಾಯಕರಾಗಿರುವ “ಹೋಮ್‌ ಮಿನಿಸ್ಟರ್‌’ ಚಿತ್ರ ಏ.01ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರೋದು ನಿಮಗೆ ಗೊತ್ತೇ ಇದೆ. ಈಗಾಗಲೇ ಚಿತ್ರದ ಟ್ರೇಲರ್‌, ಹಾಡುಗಳು ಬಿಡುಗಡೆಯಾಗಿ ಹಿಟ್‌ಲಿಸ್ಟ್‌ ಸೇರಿದೆ. ಅದರಲ್ಲೂ ಚಿತ್ರದ ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಒಂದು ಮಿಲಿಯನ್‌ಗೂ ಅಧಿಕ ವೀಕ್ಷಣೆಯೊಂದಿಗೆ ಟ್ರೇಲರ್‌ ಮುನ್ನುಗ್ಗುತ್ತಿದೆ.

Advertisement

ಉಪೇಂದ್ರ ಅವರು ಕೂಡಾ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಅದಕ್ಕೆ ಕಾರಣ ಚಿತ್ರದ ಕಥೆ ಹಾಗೂ ಮೇಕಿಂಗ್‌. ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ಇಡೀ ವಿಶ್ವವೇ ವರ್ಕ್‌ ಫ್ರಮ್‌ ಹೋಂಗೆ ಜಾರಿತ್ತು. ಈಗ “ಹೋಮ್‌ ಮಿನಿಸ್ಟರ್‌’ ಸಿನಿಮಾದಲ್ಲಿ ಆ ಅಂಶವನ್ನು ಹೇಳಲಾಗಿದ್ದು, ಇಡೀ ಫ್ಯಾಮಿಲಿ ಆಡಿಯನ್ಸ್‌ ಎಂಜಾಯ್‌ ಮಾಡುವ ಸಿನಿಮಾ ಎಂಬುದು ಉಪೇಂದ್ರ ಅವರ ಮಾತು.

ಇನ್ನು, ಚಿತ್ರದ ಮೇಕಿಂಗ್‌ ಕೂಡಾ ಅದ್ಧೂರಿಯಾಗಿದ್ದು, ಇಡೀ ಚಿತ್ರವನ್ನು ಕಲರ್‌ಫ‌ುಲ್‌ ಆಗಿ ಕಟ್ಟಿಕೊಡಲಾಗಿದೆಯಂತೆ.ಇನ್ನು, ಈ ಚಿತ್ರದಲ್ಲಿ ವೇದಿಕಾ ನಾಯಕಿಯಾಗಿ ನಟಿಸಿದ್ದು, ಸಖತ್‌ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಬಿಡುಗಡೆ ಹಾಗೂ ಸಿನಿಮಾದ ಬಗ್ಗೆ ಮಾತನಾಡುವ ಉಪೇಂದ್ರ, “ಇದು ನಾನು ಈವರೆಗೂ ಮಾಡಿರದ ಪಾತ್ರ. ಇಲ್ಲಿನ ನಿರ್ಮಾಪಕರು ಬೇರೆ ಕಡೆ ಹೋಗಿ ಚಿತ್ರ ನಿರ್ಮಾಣ ಮಾಡುತ್ತಾರೆ. ಆದರೆ ತೆಲುಗಿನ ನಿರ್ಮಾಪಕರು ಕನ್ನಡದ ಮೇಲಿನ ಅಭಿಮಾನದಿಂದ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇನ್ನೂ ನೂರು ಜನ ತೆಲುಗಿನ ನಿರ್ಮಾಪಕರು ಬಂದು ಕನ್ನಡ ಚಿತ್ರ ನಿರ್ಮಾಣ ಮಾಡಬೇಕು’ ಎಂದರು.

ಇದನ್ನೂ ಓದಿ:“ಹಿಮಾಲಯನ್‌ ಯೋಗಿ ಆನಂದ್‌ಗೆ’ ಜಾಮೀನು ನಿರಾಕರಣೆ

Advertisement

ಚಿತ್ರದಲ್ಲಿ ವೇದಿಕಾ ನಾಯಕಿಯಾಗಿ ನಟಿಸಿದ್ದಾರೆ. ಇಲ್ಲಿ ಅವರು ಜರ್ನಲಿಸ್ಟ್‌ ಆಗಿ ನಟಿಸಿದ್ದಾರಂತೆ. ನಿರ್ಮಾಪಕರಾದ ಪೂರ್ಣಚಂದ್ರ ನಾಯ್ಡು ಹಾಗೂ ಶ್ರೀಕಾಂತ್‌ ವೀರಮಾಚನೆನಿ ಚಿತ್ರ ಮೂಡಿಬಂದ ಬಗ್ಗೆ ವಿವರಿಸಿದರು. ಈ ಚಿತ್ರವನ್ನು ಸುಜಯ್‌ ಕೆ ಶ್ರೀಹರಿ ನಿರ್ದೇಶನ ಮಾಡಿದ್ದು, ಜಿಬ್ರಾನ್‌ ಸಂಗೀತವಿದೆ.

ಕರ್ನಾಟಕದಾದ್ಯಂತ ಸುಮಾರು 350ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಹೋಮ್‌ ಮಿನಿಸ್ಟರ್‌ ಚಿತ್ರವನ್ನು ಶ್ರೇಯಾ ಚಿತ್ರ ಮೂಲಕ ಬೆಂಗಳೂರು ಕುಮಾರ್‌ ಫಿಲಂಸ್‌ ಸಂಸ್ಥೆ ಬಿಡುಗಡೆ ಮಾಡುತ್ತಿರುವುದಾಗಿ ಬೆಂಗಳೂರು ಕುಮಾರ್‌ ತಿಳಿಸಿದರು.

ಚಿತ್ರದಲ್ಲಿ ವೇದಿಕಾ, ಸುಮನ್‌ ರಂಗನಾಥ್‌, ತಾನ್ಯಾ ಹೋಪ್‌, ಸಾಧುಕೋಕಿಲ, ಅವಿನಾಶ್‌, ಮಾಳವಿಕಾ, ಲಾಸ್ಯ, ಸುಧಾ ಬೆಳವಾಡಿ, ಶ್ರೀನಿವಾಸ ಮೂರ್ತಿ, ಬೇಬಿ ಆದ್ಯ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next