Advertisement

ಯುವತಿಯೇ ಅಥವಾ ವಕೀಲರು ಯಾರೇ ಬಂದು ದೂರು ನೀಡಿದರೂ ಎಸ್ ಐಟಿಯಿಂದ ಕ್ರಮ: ಬೊಮ್ಮಾಯಿ

01:01 PM Mar 26, 2021 | Team Udayavani |

ಬೆಂಗಳೂರು: ಸ್ವತಃ ಯುವತಿಯೇ ಬರಲಿ ಅಥವಾ ವಕೀಲರು, ಬೇರೆ ಯಾರು ಬಂದು ದೂರು ನೀಡಿದರೂ ಎಸ್ಐಟಿಯವರು ಕ್ರಮ ವಹಿಸಲಿದ್ದಾರೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ವಿಧಾನ ಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಕ್ಷಣೆ ವಿಚಾರದಲ್ಲಿ ಈಗಾಗಲೇ ಹೇಳಿದಂತೆ ಯುವತಿ ಹಾಗೂ ಕುಟುಂಬದವರಿಗೆ ರಕ್ಷಣೆ ನೀಡುವಂತೆ ಸೂಚನೆ ನೀಡಲಾಗಿದೆ. ಎಲ್ಲಿದ್ದಾರೋ ಹುಡುಕಿ, ಭದ್ರತೆ ಒದಗಿಸಲು ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಯುವತಿ ಹಾಗೂ ಅವರ ಪೋಷಕರಿಗೆ ಆತಂಕ ಬೇಡ ಎಂದು ಹೇಳಿದರು.

ಇದನ್ನೂ ಓದಿ:ಸಿಡಿ ಲೇಡಿಯ ಮೂರನೇ ವಿಡಿಯೋ ಬಿಡುಗಡೆ: ವಕೀಲರ ಮೂಲಕ ದೂರು ನೀಡಲು ನಿರ್ಧಾರ

Advertisement

Udayavani is now on Telegram. Click here to join our channel and stay updated with the latest news.

Next