ಬೆಂಗಳೂರು: ರಮೇಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಸಿಡಿ ವಿಚಾರದ ಬಗ್ಗೆ ಎಲ್ಲವನ್ನೂ ಎಸ್ಐಟಿ ( ವಿಶೇಷ ತನಿಖಾ ದಳ) ಯವರೇ ನೋಡಿಕೊಳ್ಳುತ್ತಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವತಿ ಎಲ್ಲಿದ್ದಾಳೆ ಎಂಬ ಮಾಹಿತಿ ವಿಚಾರವನ್ನು ಎಸ್ಐಟಿ ಯವರೇ ನೋಡಿಕೊಳ್ಳುತ್ತಾರೆ. ನಾನು ಬರೀ ಯುವತಿ ಹಾಗೂ ಅವರ ಕುಟುಂಬಕ್ಕೆ ಭದ್ರತೆ ಕೊಡಿ ಎಂದಷ್ಡೇ ಹೇಳಿದ್ದೇನೆ. ಹೀಗಾಗಿ ಅದೆಲ್ಲದನ್ನು ಎಸ್ಐಟಿ ಯವರೇ ನೋಡಿಕೊಳ್ತಾರೆ ಎಂದರು.
ಇದನ್ನೂ ಓದಿ:ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗ್ಲಿ ಬಿಡಿ: ಸಿಡಿ ಪ್ರಕರಣದ ಬಗ್ಗೆ ಸಿದ್ದರಾಮಯ್ಯ
ಸರ್ಕಾರದ ಷಡ್ಯಂತ್ರಕ್ಕೆ ಹೆದರುವ ಮಗನಲ್ಲ ಎಂಬ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಅದು ಅವರ ಹೇಳಿಕೆ, ಆ ಬಗ್ಗೆ ಅವರೇ ಸ್ಪಷ್ಟನೆ ಕೊಡಬೇಕು. ಅದು ನಮಗೆ ಸಂಬಂಧಿಸಿದ್ದಲ್ಲ ಎಂದರು.
ಸಿಡಿ ತನಿಖೆ ಕುರಿತು ಪೊಲೀಸ್ ಅಧಿಕಾರಿಗಳ ಜೊತೆಗೆ ಇಂದು ಯಾವ ಸಭೆಯೂ ಇಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟ ಪಡಿಸಿದರು.
ಇದನ್ನೂ ಓದಿ: ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾದ ಆ್ಯನ್-26 ವಿಮಾನ : ನಾಲ್ವರ ಸಾವು