Advertisement

ಜೈಲಿಗೆ ಆಹಾರ ತರಿಸಿಕೊಂಡರೆ ಹೆಚ್ಚುವರಿ ಶಿಕ್ಷೆ: ಸಚಿವ ಆರಗ ಜ್ಞಾನೇಂದ್ರ

10:11 PM Nov 09, 2022 | Team Udayavani |

ಹುಳಿಯಾರು: ಜೈಲಿನಲ್ಲಿ ಬಿರಿಯಾನಿ ತರಿಸಿ ತಿನ್ನುತ್ತಿದ್ದಾರೆ. ಮದ್ಯ ಸೇವಿಸುತ್ತಿದ್ದಾರೆ. ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಮಾಧಕ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದಾರೆ. ಇದು ಸೆರೆಮನೆಯೋ, ಅರಮನೆಯೋ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

Advertisement

ಹಾಗಾಗಿ ಜೈಲಿನಲ್ಲಿರುವ ಕೈದಿಗಳಿಗೆ ಹೊರಗಡೆಯಿಂದ ಏನನ್ನಾದರೂ ತಂದು ಕೊಟ್ಟರೆ ಜೈಲು ಅಧಿಕಾರಿಗಳಿಗೆ 5 ವರ್ಷ ಜೈಲು ಶಿಕ್ಷೆ, ತರಿಸಿಕೊಂಡವರಿಗೆ ಅವರ ಸೆರೆವಾಸ ಮುಗಿದ ಬಳಿಕ ಪುನಃ 5 ವರ್ಷ ಶಿಕ್ಷೆ ಮುಂದುವರಿಸುವ ಕಾನೂನು ಜಾರಿಗೆ ತಂದಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಹುಳಿಯಾರು ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಪೊಲೀಸ್‌ ಠಾಣೆಯ ಕಟ್ಟಡದ ಉದ್ಘಾಟನೆಯನ್ನು ಬುಧವಾರ ನೆರವೇರಿಸಿ ಅವರು ಮಾತನಾಡಿದರು

ರಾಜ್ಯದಲ್ಲಿ ಶಾಂತಿಸುವ್ಯವಸ್ಥೆ ಕಾಪಾಡಿರುವ ಪೊಲೀಸರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ 200 ಕೋಟಿ ರೂ. ವೆಚ್ಚದಲ್ಲಿ 117 ಪೊಲೀಸ್‌ ಠಾಣೆಗೆ ನೂತನ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು 20 ಕಟ್ಟಡಗಳು ಈಗಾಗಲೇ ಉದ್ಘಾಟನೆ ಮಾಡಲಾಗಿದೆ. 4 ಸಾವಿರ ಕೋಟಿ ರೂ. ವೆಚ್ಚದಲ್ಲಿ ಪೊಲೀಸರಿಗೆ ಡಬಲ್‌ ಬೆಡ್‌ರೂಂ ಮನೆ ಕಟ್ಟಿಕೊಡುತ್ತಿದ್ದೇವೆ. 50 ಕೋಟಿ ರೂ. ವೆಚ್ಚದಲ್ಲಿ ಪೊಲೀಸರಿಗೆ ಹೊಸ ವಾಹನಗಳನ್ನು ಕೊಡಿಸಲಿದ್ದೇವೆ ಎಂದು ವಿವರಿಸಿದರು.

ಮಾಧುಸ್ವಾಮಿ ಆಪತ್ಬಾಂಧವ
ಜೆ.ಸಿ.ಮಾಧುಸ್ವಾಮಿ ಅವರು ತಮ್ಮ ಅಖಂಡ ವಿದ್ವತ್ತು ಮತ್ತು ಅಪ್ರತಿಮ ಪಾಂಡಿತ್ಯದ ಮೂಲಕ ಎದುರಾಳಿಗಳಿಗೆ ಚಾಟಿ ಬೀಸುತ್ತಾರೆ, ತೊಡೆಯನ್ನೂ ತಟ್ಟುತ್ತಾರೆ. ಒಂದರ್ಥದಲ್ಲಿ ಸರಕಾರಕ್ಕೆ ಆಪತ್ಬಾಂಧವರಾಗಿದ್ದಾರೆ ಎಂದು ಆರಗ ಹೇಳಿದರು.

Advertisement

ಸೀನ್‌ ಆಫ್‌ ಕ್ರೈಂ ಆಫೀಸರ್‌ ನೇಮಕ
ಪೊಲೀಸರು ಎಫ್‌ಐಆರ್‌ ಹಾಕಿ ಚಾರ್ಚ್‌ಶೀಟ್‌ ಹಾಕಿದರೂ ಸಾಕ್ಷ್ಯಾಧಾರಗಳಿಲ್ಲದೆ ಬಿದ್ದು ಹೋಗುತ್ತವೆ. ಹಾಗಾಗಿ ಅಪರಾಧ ನಡೆದ ಕೆಲವು ನಿಮಿಷದಲ್ಲೇ ಸಾಕ್ಷಿ ಕಾಪಾಡಬೇಕು, ಸಾಕ್ಷಿ ನಾಶ ಆದರೆ ಪತ್ತೆ ಕಷ್ಟ.

ಹಾಗಾಗಿ ವಿಧಿವಿಜ್ಞಾನ ಜ್ಞಾನ ಇರುವವರ ಅಗತ್ಯವಿದೆ ಎನ್ನುವ ನಿಟ್ಟಿನಲ್ಲಿ ಅಪರಾಧ ಶೋಧನೆಗೆ ಹೊಸ ಹೆಜ್ಜೆ ಇರಿಸಿದ್ದು, ಸೀನ್‌ ಆಫ್‌ ಕ್ರೈಂ ಆಫೀಸರ್‌ ನೇಮಕ ಮಾಡಿಕೊಳ್ಳುತ್ತಿದೆ. ಇವರಿಂದ ಅಪರಾಧ ಪತ್ತೆ ಶೀಘ್ರವಾಗಲಿದೆ, ಶೀಘ್ರ ನ್ಯಾಯ ಸಿಗಲಿದೆ ಎಂದು ವಿಶ್ವಾಸವನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next