Advertisement

Araga Jnanendra; ಕುಡಿಯುವ ನೀರಿನ ಯೋಜನೆಗೆ ನೀರು ಎತ್ತಲು ಮಾಣಿ ಡ್ಯಾಮ್ ಆಯ್ಕೆ

05:03 PM Mar 20, 2024 | Shreeram Nayak |

ತೀರ್ಥಹಳ್ಳಿ : ತಾಲೂಕಿನ ಒಂದು ಲಕ್ಷದ ಮೂವತ್ತು ಸಾವಿರ ಜನರಿಗೆ ಶುದ್ಧ ಕುಡಿಯುವ ನೀರಿನ ಒದಗಿಸುವ ಜಲ ಜೀವನ್ ಮಿಷನ್ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ನೀರನ್ನು ತುಂಗಾ ನದಿ ಅಥವಾ ಭೀಮೇಶ್ವರದ ಬಳಿ ಎತ್ತುವುದಿಲ್ಲ ಮಾಣಿ ಡ್ಯಾಮ್ ಬಳಿ ನೀರನ್ನು ಎತ್ತಲಾಗುತ್ತದೆ ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

Advertisement

ಬುಧವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ನನ್ನ ಮನವಿಯ ಮೇರೆಗೆ ರಾಜ್ಯ ಸರ್ಕಾರ ಮಂಜೂರು ಮಾಡಿದೆ.ಸುಮಾರು 353 ಕೋಟಿ ರೂ ಗಳ ಪರಿಷ್ಕೃತ ಅಂದಾಜನ್ನು ಸರ್ಕಾರ ಅನುಮೋದಿಸಿದೆ. ಅಲ್ಲಿನ ರೈತರಿಗೆ ನೀರನ್ನು ಎತ್ತುವುದರಿಂದ ತೊಂದರೆ ಆಗುತ್ತದೆ ಎನ್ನುವ ಕಾರಣಕ್ಕೆ ಸರ್ಕಾರಕ್ಕೆ ಮನವಿ ಮಾಡಿದ್ದೆ. ಅದನ್ನು ಸರ್ಕಾರ ಪರಿಗಣಿಸಿ ಆದೇಶ ಹೊರಡಿಸಿದೆ ಎಂದರು.

ಇನ್ನು ಮುಂದೆ ಮಾಣಿ ಡ್ಯಾಮ್ ಅಲ್ಲಿ ಕೆಲಸ ಆರಂಭವಾಗುತ್ತದೆ.ಮಾಣಿ ಡ್ಯಾಮ್ ಅಲ್ಲಿ ಕುಡಿಯುವ ನೀರನ್ನು ತಂದು ಕೊಡ್ಲಿನಲ್ಲಿ ಶುದ್ದಿಕರಣ ಘಟಕದಲ್ಲಿ ಶುದ್ದಿಕರಿಸಿ ಇಡೀ ತಾಲೂಕಿಗೆ ಹಂಚುವ ಕೆಲಸ ಆಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next