Advertisement
ಹಾಗಾಗಿ ಜೈಲಿನಲ್ಲಿರುವ ಕೈದಿಗಳಿಗೆ ಹೊರಗಡೆಯಿಂದ ಏನನ್ನಾದರೂ ತಂದು ಕೊಟ್ಟರೆ ಜೈಲು ಅಧಿಕಾರಿಗಳಿಗೆ 5 ವರ್ಷ ಜೈಲು ಶಿಕ್ಷೆ, ತರಿಸಿಕೊಂಡವರಿಗೆ ಅವರ ಸೆರೆವಾಸ ಮುಗಿದ ಬಳಿಕ ಪುನಃ 5 ವರ್ಷ ಶಿಕ್ಷೆ ಮುಂದುವರಿಸುವ ಕಾನೂನು ಜಾರಿಗೆ ತಂದಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
Related Articles
ಜೆ.ಸಿ.ಮಾಧುಸ್ವಾಮಿ ಅವರು ತಮ್ಮ ಅಖಂಡ ವಿದ್ವತ್ತು ಮತ್ತು ಅಪ್ರತಿಮ ಪಾಂಡಿತ್ಯದ ಮೂಲಕ ಎದುರಾಳಿಗಳಿಗೆ ಚಾಟಿ ಬೀಸುತ್ತಾರೆ, ತೊಡೆಯನ್ನೂ ತಟ್ಟುತ್ತಾರೆ. ಒಂದರ್ಥದಲ್ಲಿ ಸರಕಾರಕ್ಕೆ ಆಪತ್ಬಾಂಧವರಾಗಿದ್ದಾರೆ ಎಂದು ಆರಗ ಹೇಳಿದರು.
Advertisement
ಸೀನ್ ಆಫ್ ಕ್ರೈಂ ಆಫೀಸರ್ ನೇಮಕಪೊಲೀಸರು ಎಫ್‌ಐಆರ್ ಹಾಕಿ ಚಾರ್ಚ್‌ಶೀಟ್ ಹಾಕಿದರೂ ಸಾಕ್ಷ್ಯಾಧಾರಗಳಿಲ್ಲದೆ ಬಿದ್ದು ಹೋಗುತ್ತವೆ. ಹಾಗಾಗಿ ಅಪರಾಧ ನಡೆದ ಕೆಲವು ನಿಮಿಷದಲ್ಲೇ ಸಾಕ್ಷಿ ಕಾಪಾಡಬೇಕು, ಸಾಕ್ಷಿ ನಾಶ ಆದರೆ ಪತ್ತೆ ಕಷ್ಟ. ಹಾಗಾಗಿ ವಿಧಿವಿಜ್ಞಾನ ಜ್ಞಾನ ಇರುವವರ ಅಗತ್ಯವಿದೆ ಎನ್ನುವ ನಿಟ್ಟಿನಲ್ಲಿ ಅಪರಾಧ ಶೋಧನೆಗೆ ಹೊಸ ಹೆಜ್ಜೆ ಇರಿಸಿದ್ದು, ಸೀನ್ ಆಫ್ ಕ್ರೈಂ ಆಫೀಸರ್ ನೇಮಕ ಮಾಡಿಕೊಳ್ಳುತ್ತಿದೆ. ಇವರಿಂದ ಅಪರಾಧ ಪತ್ತೆ ಶೀಘ್ರವಾಗಲಿದೆ, ಶೀಘ್ರ ನ್ಯಾಯ ಸಿಗಲಿದೆ ಎಂದು ವಿಶ್ವಾಸವನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ವ್ಯಕ್ತಪಡಿಸಿದರು.