ಭೋಪಾಲ್ (ಮಧ್ಯ ಪ್ರದೇಶ) : ಎಂಬಿಬಿಎಸ್ ಕೋರ್ಸ್ ಪುಸ್ತಕಗಳ ದೇಶದ ಮೊದಲ ಹಿಂದಿ ಆವೃತ್ತಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮತ್ತು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಸ್ ಕೈಲಾಶ್ ಸಾರಂಗ್ ಅವರ ಸಮ್ಮುಖದಲ್ಲಿ ಭಾನುವಾರ ಬಿಡುಗಡೆ ಮಾಡಿದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಪ್ರಧಾನಿ ಮೋದಿ ವಿದ್ಯಾರ್ಥಿಗಳ ಮಾತೃಭಾಷೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಇದೊಂದು ಐತಿಹಾಸಿಕ ನಿರ್ಧಾರ ಎಂದು ಅಮಿತ್ ಶಾ ಹೇಳಿದರು.
ಇದನ್ನೂ ಓದಿ : ಕಾಂಗ್ರೆಸ್ ಅಧ್ಯಕ್ಷ ಚುನಾವಣೆ : ರಾಹುಲ್ ಗಾಂಧಿ ಮತ ಚಲಾಯಿಸುವ ಕುರಿತು ಸ್ಪಷ್ಟನೆ
‘NEP-2020 ರ ಪ್ರಕಾರ ಹಿಂದಿಯಲ್ಲಿ ವೈದ್ಯಕೀಯ ಕೋರ್ಸ್ ಮಾಡುವ ಮೂಲಕ ತಮ್ಮ ಮಾತೃಭಾಷೆಯಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆಯುವ 75% ಹಿಂದಿ ಮಾತನಾಡುವ ಮಕ್ಕಳಿಗೆ ಮಧ್ಯಪ್ರದೇಶ ಸರಕಾರವು ಅವಕಾಶವನ್ನು ನೀಡಿದೆ. ಅವಿರತ ಪ್ರಯತ್ನದಿಂದ ಈ ಕೆಲಸವನ್ನು ಸಾಧ್ಯವಾಗಿಸಿದ ಎಲ್ಲಾ ವೈದ್ಯಕೀಯ ಕಾಲೇಜು ಶಿಕ್ಷಕರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಅಮಿತ್ ಶಾ ಹೇಳಿದರು.
‘ಅಧ್ಯಯನದಿಂದ ಸಂಶೋಧನೆಯವರೆಗೆ, ತನ್ನ ಸ್ವಂತ ಭಾಷೆಯಲ್ಲಿ ಯೋಚಿಸುವ ಮಗು ಮಾತ್ರ ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲದು ಏಕೆಂದರೆ ಅವನ ಮೂಲ ಆಲೋಚನಾ ಸಾಮರ್ಥ್ಯ ಆ ಭಾಷೆಯಲ್ಲಿ ಉತ್ತಮವಾಗಿರುತ್ತದೆ. ಅದಕ್ಕಾಗಿಯೇ ಮೋದಿ ಅವರು ಹೊಸ ಶಿಕ್ಷಣ ನೀತಿಯಲ್ಲಿ ತಾಂತ್ರಿಕ, ಉನ್ನತ ಮತ್ತು ವೈದ್ಯಕೀಯ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಕಲಿಸುವ ಅವಕಾಶವನ್ನು ಮಾಡಿದ್ದಾರೆ’ ಎಂದು ಶಾ ಹೇಳಿದರು.
‘ಇಂದು ಭಾರತದ ಶಿಕ್ಷಣ ಕ್ಷೇತ್ರಕ್ಕೆ ಅತ್ಯಂತ ಮಹತ್ವದ ದಿನ. ಮುಂದಿನ ದಿನಗಳಲ್ಲಿ ಇತಿಹಾಸ ಬರೆಯುವುದಾದರೆ, ಈ ದಿನ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಡುತ್ತದೆ’ ಎಂದು ಅಮಿತ್ ಶಾ ಹೇಳಿದರು.
ಸಿಎಂ ಶಿವರಾಜ್ ಸಿಂಗ್ ಮಾತನಾಡಿ, ‘ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯುವ ವೇಳೆ ಇಂಗ್ಲಿಷ್‌ನ ಜಾಲಕ್ಕೆ ಸಿಲುಕಿ ಹಲವು ಬಾರಿ ಪರೀಕ್ಷೆಯಲ್ಲಿ ತೇರ್ಗಡೆಯಾಗದೇ ವ್ಯಾಸಂಗವನ್ನೇ ತೊರೆದ ಬಡವರ ಮಕ್ಕಳ ಜೀವನದಲ್ಲಿ ಇಂದು ಅಮಿತ್ ಶಾ ಹೊಸ ಉದಯ ತಂದಿದ್ದಾರೆ’ ಎಂದರು.