Advertisement

ಸಿಎಂ ದೆಹಲಿ ಭೇಟಿ ಬಗ್ಗೆ ತಪ್ಪು ಅರ್ಥ ಬೇಡ : ಗೃಹ ಸಚಿವ ಆರಗ ಜ್ಞಾನೇಂದ್ರ

08:16 PM Sep 08, 2021 | Team Udayavani |

ಧಾರವಾಡ : ಮುಖ್ಯಮಂತ್ರಿಗಳ ದೆಹಲಿಯ ಭೇಟಿ ವಿಚಾರ ತಪ್ಪಾಗಿ ಭಾವಿಸುವುದಾಗಲಿ, ಬಣ್ಣ ಹೆಚ್ಚುವುದಾಗಲಿ ಸರಿಯಾದ ಬೆಳವಣಿಗೆಯಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.

Advertisement

ನಗರದಲ್ಲಿ ಬುಧವಾರ ಸಂಜೆ ಮಾತನಾಡಿದ ಅವರು, ರಾಜ್ಯದಲ್ಲಿ ಜಟಿಲ ಸಮಸ್ಯೆಗಳಿವೆ. ಆಗಬೇಕಾದ ಸಾಕಷ್ಟು ಶಾಸ್ವತ ಅಭಿವೃದ್ಧಿ ಕೆಲಸ ಇವೆ. ಹೀಗಾಗಿ ಅವುಗಳ ಬಗ್ಗೆ ಪರಿಹಾರ ಕಂಡುಕೊಳ್ಳಲು ಮುಖ್ಯಮಂತ್ರಿಗಳು ಆಗಾಗ ದೆಹಲಿಗೆ ಹೋಗುತ್ತಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಮುಖ್ಯಮಂತ್ರಿಗಳು ದೆಹಲಿಗೆ ಬೇರೆ ಬೇರೆ ಕೆಲಸಗಳಿಗೆ ಹೋಗುತ್ತಾರೆ. ಹಣಕಾಸು ಸಚಿವರನ್ನು ಭೇಟಿ ಮಾಡಿದ್ದಾರೆ. ಈ ಬಗ್ಗೆ ಫೋಟೋಗಳು ಬಂದಿವೆ. ಹೀಗಾಗಿ ಇದನ್ನೇ ತಪ್ಪಾಗಿ ಭಾವಿಸುವುದು ಸರಿಯಲ್ಲ ಎಂದರು.

ನಮ್ಮ ಇಲಾಖೆಗಳ ಫೈಲ್ಗಳನ್ನು ಮೂವ್ ಮಾಡಿಸಲು ಹೋಗಬೇಕು. ಇದನ್ನೇ ದೆಹಲಿ ಹೈಕಮಾಂಡ್ ಭೇಟಿ ಎಂದರೆ ಹೇಗೆ ?  ಬಿಜೆಪಿಯಲ್ಲಿ ಯಾವುದೇ ವೈಮನಸ್ಸುಗಳಿಲ್ಲ. ಪಕ್ಷದಲ್ಲಿ ಎಲ್ಲವೂ ಚೆನ್ನಾಗಿದೆ. ವೈಮನಸ್ಸುಗಳಿವೆ ಎಂಬುದು ಕೇವಲ ಊಹಾಪೋಹ. ಅದರಲ್ಲೂ ಬಿಜೆಪಿ ಪಕ್ಷದ ನಾಯಕ ಅಮಿತ್ ಶಾ ಅವರೇ ಮುಕ್ತವಾಗಿ ಸಿಎಂ ಅವರ ಕಾರ್ಯ ಶ್ಲಾಘಿಸಿದ್ದಾರೆ. ಬಿಜೆಪಿ ನಾಯಕರಲ್ಲಿ ಭಿನ್ನಾಭಿಪ್ರಾಯಗಳು ಇಲ್ಲ. ಎಲ್ಲರೂ ಒಗ್ಗಾಟ್ಟಾಗಿಯೇ ಇದ್ದೇವೆ ಎಂದು ಎಂದು ಸ್ಪಷ್ಟಪಡಿಸಿದರು.

ಡ್ರಗ್ಸ್ ಪ್ರಕರಣ ಕುರಿತು ಈಗಲೇ ಪ್ರತಿಕ್ರಿಯೆ ನೀಡಲಾರೆ :

ಡ್ರಗ್ಸ ಪ್ರಕರಣದ ವಿಚಾರಣೆ ಆಗಿದ್ದು, ಈಗಾಗಲೇ ದೋಷಾರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ. ಇದರಲ್ಲಿ ಏನಾದರೂ ಇದ್ದರೆ ಮತ್ತೆ ವಿಚಾರಣೆ ಆಗುತ್ತದೆ. ಕಿಶೋರ ಶೆಟ್ಟಿ ನಾನು ಅನುಶ್ರೀ ಹೆಸರು ಹೇಳಿಲ್ಲ ಎನ್ನುತ್ತಾರೆ. ಈಗ ಹೆಸರು ಹೊರಗೆ ತಂದಿದ್ದು ಯಾರು? ಪ್ರಸ್ತಾಪ ಮಾಡಿದ್ಯಾರು? ಅದನ್ನು ತೆಗೆದುಕೊಂಡು ನಾವೇನು ಮಾಡಬೇಕು. ಈ ಬಗ್ಗೆ ನಾನೇನೂ ವಿವರವಾದ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಗೃಹ ಸಚಿವ ಅಗರ ಜ್ಞಾನೇಂದ್ರ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next