Advertisement
ಮನೆಗೆ ವಸ್ತುಗಳನ್ನು ಖರೀದಿಸುವಾಗ ಒಂದೇ ವಸ್ತ್ತುವಿನಿಂದಾಗುವ ಹಲವು ಉಪಯೋಗಗಳ ಕುರಿತು ಯೋಚಿಸಿ ಖರೀಸುವುದರಿಂದ ಮನೆಯಲ್ಲಿ ವಸ್ತಗಳು ತುಂಬುವುದನ್ನು ತಪ್ಪಿಸಿಕೊಳ್ಳಬಹುದು.
ಅಗತ್ಯವಿರುವಷ್ಟು ಪೀಠೊಪಕರಣಗಳನ್ನು ಮನೆಯಲ್ಲಿ ಡುವುದರಿಂದ ಮನೆ ಸುಂದರವಾಗಿ ಕಾಣುತ್ತದೆ. ಬಹೂಪಯೋಗಿ ಪೀಠೊಪಕರಣಗಳನ್ನು ಬಳಕೆಯಿಂದ ಮನೆಯಲ್ಲಿ ಜಾಗದ ಸಮಸ್ಯೆ ಕಾಣಿಸುವುದಿಲ್ಲ. ಮನೆಯ ಗೋಡೆಯ ಬಣ್ಣದ ಕರ್ಟನ್, ಬೆಡ್‌ಶೀಟ್‌ಗಳನ್ನು ಬಳಸುವುದು ಉತ್ತಮ. ಇದರಿಂದ ಕೋಣೆಯಲ್ಲಿ ಜಾಗ ಹೆಚ್ಚು ಕಾಣಿಸುತ್ತದೆ. ಜತೆಗೆ ಆದಷ್ಟು ಲೈಟ್ ಬಣ್ಣವನ್ನು ಬಳಸುವುದು ಉತ್ತಮ. ಗೋಡೆಯಲ್ಲಿ ಶೋಕೇಸ್ ನಿರ್ಮಿಸಿ
ಮನೆಯಲ್ಲಿ ಬಾಗಿಲುಗಳಿಗೆ ಸಾಕಷ್ಟು ಜಾಗ ಬೇಕಾಗುವುದರಿಂದ ಸ್ಲೈಡಿಂಗ್ ಬಾಗಿಲುಗಳನ್ನು ಮನೆಯಲ್ಲಿ ಬಳಸಬಹುದು. ಮನೆಯಲ್ಲಿ ಪ್ರತ್ಯೇಕ ಶೋಕೇಸ್ ಇಡುವುದರ ಬದಲು ಗೋಡೆಯಲ್ಲಿಯೇ ಶೋಕೇಸ್ ನಿರ್ಮಿಸುವುದರಿಂದ ಹೆಚ್ಚು ಜಾಗ ಮನೆಯಲ್ಲಿ ಸಿಗುತ್ತದೆ. ಕೊಣೆಯಲ್ಲಿರುವ ಪುಸ್ತಕಗಳು, ಆಕರ್ಷಕ ವಸ್ತಗಳನ್ನು ಅದರಲ್ಲಿಡುವುದರಿಂದ ಅಲ್ಲಲ್ಲಿ ಎಸೆಯುವುದು ಕಡಿಮೆಯಾಗುತ್ತದೆ.
Related Articles
Advertisement
ಗೋಡೆಯಲ್ಲಿ ದೊಡ್ಡದಾದ ಕನ್ನಡಿಯಿರುವುದರಿಂದ ಕೋಣೆ ಸುಂದರವಾಗಿ ಕಾಣುವುದರ ಜತೆಗೆ ಜಾಗ ವಿಸ್ತಾರವಾಗಿರುವಂತೆ ಕಾಣಿಸುತ್ತದೆ. ಕೋಣೆಯ ಅಂದವನ್ನು ಕನ್ನಡಿ ಬಳಸುವುದರಿಂದ ಹೆಚ್ಚಿಸಬಹುದು.
••ರಂಜಿನಿ ಮಿತ್ತಡ್ಕ