Advertisement

ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಳ

06:00 AM Mar 02, 2018 | Team Udayavani |

ಮುಂಬಯಿ: ಗೃಹ, ವಾಹನ ಸಾಲಕ್ಕೆ ಅರ್ಜಿ ಸಲ್ಲಿಸಿದವರಿಗೆ ನಿರಾಸೆ ಕಾದಿದೆ! ಸರಕಾರಿ ಸ್ವಾಮ್ಯದ ಎಸ್‌ಬಿಐ, ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌,  ಖಾಸಗಿ ರಂಗದ ಐಸಿಐಸಿಐ ಬ್ಯಾಂಕ್‌ ವಿವಿಧ ಸಾಲಗಳ ಮೇಲಿನ ಬಡ್ಡಿದರವನ್ನು ಗುರುವಾರ ಹೆಚ್ಚಿಸಿವೆ. ಇದರಿಂದಾಗಿ ಸಾಲಗಳ ಮೇಲಿನ ಇಎಂಐ ಹೆಚ್ಚಾಗಲಿದೆ.

Advertisement

2016ರ ಎಪ್ರಿಲ್‌ ಬಳಿಕ ಇದೇ ಮೊದಲ ಬಾರಿಗೆ ಎಸ್‌ಬಿಐ ಸಾಲದ ಮೇಲಿನ ಬಡ್ಡಿ ದರ  ಹೆಚ್ಚಿಸಿದೆ. ಎಸ್‌ಬಿಐ ವೆಚ್ಚ ಆಧಾರಿತ ಸಾಲ ವ್ಯವಸ್ಥೆ (ಎಂಸಿಎಲ್‌ಆರ್‌)ಯನ್ನು ಶೇ. 0.20ರಷ್ಟು ಹೆಚ್ಚಳ ಮಾಡಿದೆ. ಬುಧವಾರ ವಷ್ಟೇ ಎಸ್‌ಬಿಐ ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಳ ಮಾಡಿತ್ತು.

ಐಸಿಐಸಿಐ ಬ್ಯಾಂಕ್‌, ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ ಎಂಸಿಎಲ್‌ಆರ್‌ ಅನ್ನು ಕ್ರಮವಾಗಿ ಶೇ. 0.10 ಮತ್ತು ಶೇ. 0.15 ಎಂದು ಪರಿಷ್ಕರಿಸಿವೆ. ವೆಚ್ಚ ಆಧಾರಿತ ಸಾಲ ವ್ಯವಸ್ಥೆ  ಎಂದರೆ ನಿಗದಿತ ದರಕ್ಕಿಂತ ಕಡಿಮೆ ಪ್ರಮಾಣದಲ್ಲಿ ಯಾರಿಗೂ ಸಾಲ ಕೊಡದಂತೆ ಇರುವ ನಿಯಮ. ಸದ್ಯ ಅದರ ಪ್ರಮಾಣ ಶೇ. 7.95 ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next