Advertisement

ಮನೆಯಲ್ಲೇ ಗ್ರಂಥಾಲಯ

04:07 PM Mar 11, 2017 | Team Udayavani |

ಎಲ್ಲವೂ ಆನ್‌ಲೈನ್‌ಮಯವಾಗುತ್ತಿರುವ ಈ ಸಂದರ್ಭದಲ್ಲಿ ಪುಸ್ತಕಪ್ರಿಯರಿಗಾಗಿ ಒಂದು ಆನ್‌ಲೈನ್‌ ಗ್ರಂಥಾಲಯದ ಕುರಿತ ಮಾಹಿತಿ ಇಲ್ಲಿದೆ. ಗ್ರಂಥಾಲಯಕ್ಕೆ ಹೋಗಿ ಬೇಕಾದ ಪುಸ್ತಕ ಎರವಲು ಪಡೆದು ಕಾರ್ಡು ಮತ್ತು ಚಂದಾದಾರಿಕೆಯನ್ನು ಮೇಂಟೇನ್‌ ಮಾಡುವುದು ಕಷ್ಟ ಎನ್ನುವವರಿಗೆ “ಜಸ್ಟ್‌ ಬುಕ್ಸ್‌’ ಆನ್‌ಲೈನ್‌ ಗ್ರಂಥಾಲಯ ತುಂಬಾ ಸಹಕಾರಿ. ಇದು ದೇಶದ ಮುಂಚೂಣಿಯಲ್ಲಿರುವ ಲೈಬ್ರರಿ ಸರಣಿಯಾಗಿದೆ. ಆನ್‌ಲೈನ್‌ ಮಾತ್ರವಲ್ಲದೆ ಆಫ್ಲೈನ್‌ ಮಳಿಗೆಗಳೂ ಇವೆ. ಚಂದಾದರರು ಬೇಂಗಳೂರಿನ ಹಲವೆಡೆ ಇರುವ ಜಸ್ಟ್‌ ಬುಕ್ಸ್‌ ಗ್ರಂಥಾಲಯಗಳಿಗೆ ತೆರಳಿಯೂ ಚಂದಾದಾರರಾಗಬಹುದು.  

Advertisement

ಆನ್‌ಲೈನ್‌ ಚಂದಾದಾರರು ತಮಗೆ ಬೇಕಾದ ಪುಸ್ತಕವನ್ನು ಆಯ್ಕೆ ಮಾಡಿದರೆ ಮನೆ ಬಾಗಿಲಿಗೇ ಪುಸ್ತಕ ದೊರೆಯುವ ಸೌಲಭ್ಯ ಇದಾಗಿದೆ. ಇದಕ್ಕಾಗಿ ಜಸ್ಟ್‌ ಬುಕ್ಸ್‌ ಜಾಲತಾಣಕ್ಕೆ ಭೇಟಿ ನೀಡಿದರೆ ಆಯಿತು. ಪ್ರತಿ ತಿಂಗಳು ಚಂದಾ ಹಣವನ್ನು ಪಾವತಿಸುವ ಮೂಲಕ ಓದುಗರು ಇವರ ಸಂಗ್ರಹದಲ್ಲಿರುವ ಹತ್ತು ಲಕ್ಷಕ್ಕೂ ಅಧಿಕ ಪುಸ್ತಕಗಳಲ್ಲಿ ಯಾವುದೇ ಪುಸ್ತಕವನ್ನು ಓದಬಹುದು. 

ಆರ್‌ಎಫ್ಐಡಿ(ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್‌) ತಂತ್ರಜ್ಞಾನ ಅಳವಡಿಸಿರುವುದರಿಂದ ಗ್ರಾಹಕರು ಕಿಯೋಸ್ಕ್ನಲ್ಲಿ ಕಾರ್ಡ್‌ ಸ್ವೆ„ಪ್‌ ಮಾಡುವ ಮೂಲಕ ಪುಸ್ತಕಗಳನ್ನು ಪಡೆಯುವುದು ಮತ್ತು ಹಿಂದಿರುಗಿಸುವುದು ಸಾಧ್ಯವಿದೆ. 

Advertisement

Udayavani is now on Telegram. Click here to join our channel and stay updated with the latest news.

Next