Advertisement

ಮಕ್ಕಳ ಪಾಠಶಾಲೆ ಮನೆಯಲ್ಲೆ!

02:33 AM Jun 29, 2021 | Team Udayavani |

ಇದು ಆನ್‌ಲೈನ್‌ ಕಲಿಕಾ ಯುಗ. ಜುಲೈ 1ರಂದು ಶಾಲೆಗಳಲ್ಲೂ ಆನ್‌ಲೈನ್‌ ಶಿಕ್ಷಣ ಆರಂಭ ಎಂದು ಸರಕಾರ‌ ಘೋಷಿಸಿದೆ. ಶಾಲೆಗಳು ನೀಡುವ ಶಿಕ್ಷಣದ ಜತೆಗೆ ವಿವಿಧ ಮೂಲಗಳಿಂದ ನೀವು ನಿಮ್ಮ ಮಕ್ಕಳಿಗೆ ಆನ್‌ಲೈನ್‌ ಪಾಠ ಹೇಳಿಕೊಡಬಹುದು. ಅಂತಹ ಅಧ್ಯಯನ ಸಾಮಗ್ರಿಗಳ ಪರಿಚಯ ಇಲ್ಲಿದೆ.

Advertisement

ದೀಕ್ಷಾ ಆ್ಯಪ್‌
ಇದು ಕೇಂದ್ರ ಸರಕಾರ‌ದ ಅಧಿಕೃತ ಆ್ಯಪ್‌. ಒಂದನೇ ತರಗತಿಯಿಂದ ದ್ವಿತೀಯ ಪಿಯುಸಿ ತನಕದ ವಿದ್ಯಾರ್ಥಿಗಳ ಕಲಿಕಾ ವಸ್ತು ಹಾಗೂ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆಗೆ ಅನುಕೂಲವಾದ ಅಧ್ಯಯನ ಸಾಮಗ್ರಿ ಇದರಲ್ಲಿದೆ. ಎಲ್ಲ ಪ್ರಾದೇಶಿಕ ಭಾಷೆಯ ಪಠ್ಯ ವಿಷಯಗಳು ಲಭ್ಯವಿವೆ. ಮೊಬೈಲ್‌ ಆ್ಯಪ್‌ ಮತ್ತು ವೆಬ್‌ಸೈಟ್‌ ಕೂಡ ಇದೆ. ಇದರ ಜತೆಗೆ ರಾಜ್ಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಇಲಾಖೆ ದೂರದರ್ಶನದ ಮೂಲಕ ನಡೆಸಿದ ವೀಡಿಯೋ ತರಗತಿಗಳನ್ನು ಒಳಗೊಂಡಿರುವ ಯೂಟ್ಯೂಬ್‌ ಚಾನೆಲ್‌ ಕೂಡ ಇದೆ. https://diksha.gov.in/

ವಿಜಯೀಭವ ಮತ್ತು ಎಲ್‌ಎಂಎಸ್‌
ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಆನ್‌ಲೈನ್‌ ಕಲಿಕೆಗೆ ಪೂರಕವಾಗುವಂತೆ ರಾಜ್ಯ ಸರಕಾರ‌ ಕೆಲವು ತಿಂಗಳ ಹಿಂದೆ ಕಲಿಕಾ ನಿರ್ವಹಣ ವ್ಯವಸ್ಥೆ (ಎಲ್‌ಎಂಎಸ್‌) ಜಾರಿಗೆ ತಂದಿದೆ. ಇದರ ಮೊಬೈಲ್‌ ಆ್ಯಪ್ಲಿಕೇಶನ್‌ ಕೂಡ ಸಿದ್ಧವಾಗುತ್ತಿದೆ. ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯವಿರುವ ಪಠ್ಯ ವಸ್ತು¤ಗಳಾದ ವೀಡಿಯೋ ತರಗತಿ, ಪಿಪಿಟಿ, ಸ್ಟಡೀ ಮೆಟಿರಿಯಲ್‌ಗ‌ಳು ಲಭ್ಯವಿರುತ್ತದೆ. ಇದರಲ್ಲಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ನೇರ ಸಂವಹನಕ್ಕೂ ಅವಕಾಶವಿದೆ. ಇದರ ಜತೆಗೆ ಕಾಲೇಜು ಶಿಕ್ಷಣ ಇಲಾಖೆಯಿಂದಲೇ ವೀಡಿಯೋ ತರಗತಿಗಳನ್ನು ನೀಡಲು ವಿಜಯೀಭವ (Vijayi Bhava) ಪ್ರತ್ಯೇಕ ಯೂಟ್ಯೂಬ್‌ ಚಾನೆಲ್‌ ಕೂಡ ಇದೆ.

ಡಿಟಿಇ ಸ್ಟುಡಿಯೋ ಚಾನೆಲ್‌
ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಪ್ರತ್ಯೇಕ ಡಿಟಿಇ ಸ್ಟುಡಿಯೋ ಹೊಂದಿದ್ದು, ಇದರಲ್ಲಿ ವಿದ್ಯಾರ್ಥಿಗಳಿಗೆ ನಿರಂತರ ವೀಡಿಯೋ ಪಾಠ ಪ್ರಸಾರ ಮಾಡಲಾ ಗುತ್ತದೆ. ಡಿಟಿ ಸ್ಟುಡಿಯೋ ಚಾನೆಲ್‌ ಮತ್ತು ಅದರಲ್ಲಿ ಪ್ರಸಾರವಾಗುವ ಪಾಠದ ಮಾಹಿತಿ ತಾಂತ್ರಿಕ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಕೆಎಸ್‌ಒಯು ಆ್ಯಪ್‌
ಮೈಸೂರಿನಲ್ಲಿರುವ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ(ಕೆಎಸ್‌ಒಯು)ವು ತನ್ನದೇ ಆದ ಮೊಬೈಲ್‌ ಆ್ಯಪ್‌ ಹೊಂದಿದೆ. ಇದರಲ್ಲಿ ಅಂಚೆ ತೆರಪಿನ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಪಠ್ಯಕ್ಕೆ ಸಂಬಂಧಿಸಿದ ಮಾಹಿತಿಗಳು ಲಭ್ಯವಿದೆ. ಅಲ್ಲದೇ ವೀಡಿಯೋ ತರಗತಿಗಳನ್ನು ಅಧಿಕೃತ ವೆಬ್‌ಸೈಟ್‌ ಮೂಲಕ ಪ್ರಕಟಿಸಲಾಗುತ್ತದೆ. ಅದರ ಲಿಂಕ್‌ ಗಳನ್ನು ವಿವಿಯಿಂ ದಲೇ ವಿದ್ಯಾರ್ಥಿಗಳಿಗೆ ಕಳುಹಿಸುವ ವ್ಯವಸ್ಥೆಯಿದೆ.

Advertisement

ಗೆಟ್‌ ಸಿಇಟಿ ಗೋ
ಇದು ರಾಜ್ಯದ ವೃತ್ತಿಪರ ಕೋರ್ಸ್‌ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ ಸಹಿತವಾಗಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ನಡೆಸುವ ಅಭ್ಯರ್ಥಿಗಳಿಗೆ ಅನುಕೂಲವಾಗಿರುವ ಆ್ಯಪ್‌. ಪ್ರಾಧಿಕಾರ ಹಾಗೂ ಖಾಸಗಿ ಸಂಸ್ಥೆ ಸೇರಿಕೊಂಡು ಇದನ್ನು ನಡೆಸಿಕೊಂಡು ಬರುತ್ತಿದ್ದು, ಪಿಯುಸಿ ಅನಂತರದ ವಿದ್ಯಾರ್ಥಿಗಳಿಗೆ ಅಗತ್ಯವಿರುವ ವೀಡಿಯೋ ಪಾಠ, ಆನ್‌ಲೈನ್‌ ಪಾಠ ಇದರಲ್ಲಿ ನೀಡಲಾಗುತ್ತದೆ.

ಎನ್‌ ಸಿಇಆರ್‌ಟಿ ಇ-ಪಾಠಶಾಲಾ
ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್‌(ಎನ್‌ ಸಿಇಆರ್‌ಟಿ) ತನ್ನದೇ ಆದ ವೆಬ್‌ಸೈಟ್‌ ಮೂಲಕ ಇ-ಪಾಠಶಾಲೆಗೆ ಬೇಕಾದ ಕಲಿಕಾ ಸಾಮಗ್ರಿಗಳನ್ನು ಒದಗಿಸುತ್ತಿದೆ. ಮಾಹಿತಿಗೆ https://epathshala.nic.in/ ಸಂಪರ್ಕಿಸಬಹುದು. ಹಾಗೆಯೇ ಎನ್‌ಸಿಇಆರ್‌ಟಿ ಯೂಟ್ಯೂಬ್‌ ಚಾನೆಲ್‌ (NCERT OFFICIAL) ಕೂಡ ಹೊಂದಿದ್ದು, ಇದರಲ್ಲಿ ಅನೇಕ ಪಠ್ಯ ಲಭ್ಯವಿದೆ. ಹಾಗೆಯೇ ಶಿಕ್ಷಕರಿಗೆ ಅನುಕೂಲವಾದ ತರಬೇತಿ ವಿಷಯ ಒಳಗೊಂಡಿರುವ ಎನ್‌ಸಿಇಆರ್‌ಟಿ ಅವರ ವೆಬ್‌ಸೈಟ್‌ https://itpd.ncert.gov.in/ ಇದೆ.

ಸ್ವಯಂ ಪ್ರಭಾ
ಇದು ಶಿಕ್ಷಣಕ್ಕೆ ಸಂಬಂಧಿಸಿದ ಉಚಿತ ಡಿಟಿಎಚ್‌ ಚಾನೆಲ್‌ ಆಗಿದ್ದು, ಐಐಟಿ ಆನ್‌ಲೈನ್‌ ಪಾಠಗಳು, ವಿವಿಧ ಎಂಜಿನಿಯರಿಂಗ್‌ ಕೋರ್ಸ್‌ಗಳ ಪಠ್ಯ ಇದರಲ್ಲಿ ಲಭ್ಯವಿದೆ ಮಾಹಿತಿಗೆ https://www.swayamprabha.gov.in/ ನೋಡಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next