Advertisement
ಆಧುನಿಕ ಲೋಕ ವಿಸ್ತಾರವಾಗುತ್ತಿದೆ. ಮನೆಯಲ್ಲಿ ಬಳಕೆ ಮಾಡುತ್ತಿರುವ ವಸ್ತುಗಳು ಕೂಡ ಈಗ ಸ್ಮಾರ್ಟ್ ರೂಪಕ್ಕೆ ಬದಲಾಗುತ್ತಿವೆ. ನಿತ್ಯ ಬಳಕೆ ಮಾಡುವ ಮನೆ ವಸ್ತುಗಳು ಸ್ಮಾರ್ಟ್ ಆಗುವ ಮೂಲಕ ಜೀವನ ವ್ಯವಸ್ಥೆ ಸುಧಾರಣೆ ಕಾಣುತ್ತಿದೆ. ಟಿವಿ, ಫ್ರಿಜ್, ವಿದ್ಯುತ್ ದೀಪಗಳು, ಕಾಫಿ ಮೇಕರ್‌ಗಳು ಸ್ಮಾರ್ಟ್ ಆಗುತ್ತಿವೆ. ವೈಫೈ, ಬ್ಲೂಟೂಥ್ ಸಾಧನಗಳ ಮೂಲಕ ಇವುಗಳಿಗೆ ಸಂಪರ್ಕ ನೀಡಲು ಸಾಧ್ಯವಿದೆ.
Related Articles
Advertisement
ಅಂದಹಾಗೆ, ಗೀಸರ್, ಎ.ಸಿ., ಇಸ್ತ್ರಿಪೆಟ್ಟಿಗೆ ಹೀಗೆ ಮನೆಯ ಯಾವುದೇ ವಸ್ತುವನ್ನು ಅಥವಾ ವಿದ್ಯುತ್ ಉಪಕರಣಗಳನ್ನು ಬಳಸುತ್ತಿದ್ದರೂ ಅವುಗಳನ್ನು ವೈಫೈ ನೆಟ್‌ವರ್ಕ್ ಜತೆಗೆ ಜೋಡಿಸಲು ಆ ಮೂಲಕ ಸ್ಮಾರ್ಟ್ ಲುಕ್ ನೀಡಲು ಸಾಧ್ಯವಿದೆ.
ಈ ಮೂಲಕ ನಿತ್ಯ ವಸ್ತುಗಳನ್ನು ಮೊಬೈಲ್ ಸಹಾಯದಿಂದಲೇ ನಿಯಂತ್ರಿಸಲು ಅವಕಾಶವಿದೆ. ಉದಾಹರಣೆಗೆ ಫ್ರಿಜ್ ಕೂಡ ಸ್ಮಾರ್ಟ್ ರೂಪ ಪಡೆದರೆ ಅದರೊಳಗೆ ಯಾವೆಲ್ಲ ವಸ್ತುಗಳಿವೆ ಎಂಬುದನ್ನು ಫ್ರಿಜ್ ನ ಬಾಗಿಲು ತೆಗೆದಲು ಮೊಬೈಲ್‌ನಲ್ಲಿಯೇ ನೋಡಬಹುದು. ಅಡುಗೆ ಕೋಣೆಯಲ್ಲಿ ಫ್ರಿಜ್ ಇರುವುದರಿಂದ ಅಡುಗೆ ಮಾಡುವಾಗ ಹಾಡು ಕೂಡ ಕೇಳಬಹುದು.
ಜತೆಗೆ ಕಾಫಿ ಮೇಕರ್ ಕೂಡ ಸ್ಮಾರ್ಟ್ ಆಗಿದೆ. ಬ್ಲೂಟೂತ್ ಸಂಪರ್ಕದಿಂದ ಬಿಸಿ ಬಿಸಿ ಕಾಫಿಗೆ ಆರ್ಡರ್ ಕೊಡ ಬಹುದು. ಜತೆಗೆ ಒಂದೆರಡು ದಿನ ಮನೆ ಬಿಟ್ಟು ಇರಬೇಕಾದರೆ ಸಿಸಿ ಕೆಮರಾಗಳನ್ನು ಕೂಡ ನಾವು ದೂರದಲ್ಲಿದ್ದು ಕೊಂಡೇ ವೀಕ್ಷಿಸಬಹುದು. ಮನೆಯೊಳಗೆ, ಸುತ್ತ ಮುತ್ತ ನಡೆಯುವ ವ್ಯವಹಾರಗಳನ್ನು ಗಮನಿಸಬಹುದು. ಹೀಗಾಗಿ ಯಾವುದೇ ಆತಂಕವಿಲ್ಲದೆ ದೂರದೂರುಗಳಿಗೆ ಹೋಗಿ ಬರಬಹುದು.
ಸ್ಮಾರ್ಟ್ ಆಗಿವೆ ವಿದ್ಯುತ್ ದೀಪಇದೇ ರೀತಿ ಮನೆಯಲ್ಲಿರುವ ವಿದ್ಯುತ್ ದೀಪಗಳು ಕೂಡ ಸ್ಮಾರ್ಟ್ ಆಗುತ್ತಿವೆ. ಮೊಬೈಲ್ ಮೂಲಕವೇ ವಿದ್ಯುತ್ ದೀಪಗಳನ್ನು ನಿಯಂತ್ರಿಸುವ ಕಲೆಗಾರಿಕೆ ಇದಕ್ಕಿದೆ. ಪ್ರತಿಷ್ಠಿತ ಕಂಪೆನಿಯೊಂದು ಸ್ಮಾರ್ಟ್ ತಂತ್ರಜ್ಞಾನವನ್ನು ಪರಿಚಯಿಸಿತ್ತು. ಮೂರು ಬಲ್ಬ್ ಗಳ ಜತೆಗೆ ಪುಟ್ಟದಾದ ಒಂದು ರೌಟರ್ ವ್ಯವಸ್ಥೆಯಿದೆ. ಈ ಬಲ್ಬ್ ಗಳಿಗೆ ಅಂತರ್ಜಾಲ ಸಂಪರ್ಕ ದೊರೆಯುತ್ತದೆ. ಹೀಗಾಗಿ ಇವು ತಂತಿರಹಿತವಾಗಿಯೇ ಕಾರ್ಯನಿರ್ವಹಿಸುತ್ತವೆ. ಫೋನ್‌ನಲ್ಲಿ ಆ್ಯಪ್ ಅಳವಡಿಸಿಕೊಂಡು ಅದರಿಂದಲೇ ಇದನ್ನು ನಿಯಂತ್ರಿಸಬಹುದು. ಇದೇ ಸಮಯಕ್ಕೆ ಆನ್/ ಆಫ್ ಮಾಡುವ ಬಗ್ಗೆ ಸಮಯ ಹೊಂದಿಸಿಕೊಂಡು ವಿದ್ಯುತ್ ದೀಪಗಳನ್ನು ನಿಯಂತ್ರಿಸಬಹುದು. ವಿಶೇಷವೆಂದರೆ ಮನೆಯಲ್ಲಿಯೇ ಇರುವಾಗ ಫೋನ್‌ನ ಅಗತ್ಯವಿಲ್ಲದೆ ಮಾತಿನ ಮೂಲಕವೇ ನಿಯಂತ್ರಿಸಬಹುದು. ಕೋಣೆಯೊಳಗೆ ಪ್ರವೇಶಿಸುತ್ತಿದ್ದಂತೆ ದೀಪಗಳು ಉರಿಯುವಂತೆ, ನೀವಿರುವಾಗ ಅಪರಿಚಿತರು ಕೋಣೆಯೊಳಗೆ ಬಂದಾಗ ದೀಪಗಳು ಆನ್ ಆಗುವಂತೆ ಮಾಡುವುದಕ್ಕೆ ಅವಕಾಶವಿದೆ. ದಿನೇಶ್ ಇರಾ