Advertisement
ಜೀವಿತದುದ್ದಕ್ಕೂ ಅನ್ನನೀರು ಬಿಟ್ಟು, ನಿದ್ದೆಗೆಟ್ಟು, ದುರಾಸೆಯಲ್ಲಿ ಅಷ್ಟಿಷ್ಟು ಕೂಡಿಟ್ಟು ಹೋದವರನ್ನು ಅವರದೇ ಮೂರನೇ ತಲೆ ಮಾರಿಗೆ ಸ್ಮರಿಸಿಕೊಳ್ಳಲೂ ಅಸಾಧ್ಯ ವಾಗಿರುವ ಸಂದರ್ಭದಲ್ಲಿ ಅತಿಯಾದ ಸಂಪತ್ತಿನ ಕ್ರೋಡೀ ಕರಣವೊಂದು ವ್ಯರ್ಥ ಸಾಧನೆಯಲ್ಲವೇ!?. ಕೆಲವರಂತೂ ಕಡುಸ್ವಾರ್ಥಿಗಳಾಗಿ, ದುರ್ಬಲರನ್ನು ಶೋಷಿಸಿ, ಶ್ರಮಿಕವರ್ಗದ ಬೆವರು-ನೆತ್ತರು ಹೀರಿದವರಿದ್ದಾರೆ. ಹಾಗೆ ಮೋಸ-ವಂಚನೆ, ಅಕ್ರಮ ದಂಧೆಗಳಲ್ಲಿ ಕಾನೂನು ಕಣ್ಣಿಗೆ ಮಣ್ಣೆರಚಿ ಹತ್ತಾರು ತಲೆ ಮಾರು ಕೂತು ತಿಂದರೂ ಕರಗದಷ್ಟು ಹಣ- ಆಸ್ತಿಗಳನ್ನೆಲ್ಲ ಸಂಪಾದಿಸಿಟ್ಟು ಸತ್ತರದು ಪಾಪಕರ್ಮವಲ್ಲದೆ ಮತ್ತೇನು!?.
Related Articles
Advertisement
ಮಕ್ಕಳಿಗೆ ಸಂಸ್ಕಾರ, ಹೊಣೆಗಾರಿಕೆ ಮತ್ತು ಆತ್ಮವಿಶ್ವಾಸಗಳನ್ನು ಬಿತ್ತಬೇಕಾದ ಮೊದಲ ಪ್ರಶಸ್ತ ಜಾಗ ಮನೆಯೇ. ಬಂಧುತ್ವದ ಮಹತ್ವ ಮತ್ತು ಗುರುಹಿರಿಯರೆಡೆಗೆ ಗೌರವಾ ದರಗಳು ಒಡಮೂಡಬೇಕಾದ್ದು ಅಲ್ಲಿಯೇ. ಹಾಗಾಗಿ ಬಂಧುಮಿತ್ರರನ್ನು ಮನೆಗೆ ಆಹ್ವಾನಿಸುವುದು ಮತ್ತು ಅವರ ಮನೆಗಳಿಗೆ ಕುಟುಂಬದೊಂದಿಗೆ ಅಗಾಗ ಭೇಟಿ ನೀಡುವ ಪರಿಪಾಠ ಬೆಳೆಸಿಕೊಳ್ಳುವುದು ಉತ್ತಮ.
ಮನೆಯ ಹೊಸ್ತಿಲಲ್ಲಿ ನಿಂತ ಅತಿಥಿಗಳನ್ನು ಒಳಗೆ ಸ್ವಾಗತಿಸಿ, ಸತ್ಕರಿಸುವ ಸೌಜನ್ಯತೆಯೇ ಇತ್ತೀಚಿನ ಮಕ್ಕಳಲ್ಲಿ ಮಾಯವಾಗಿರುವ ಬಗ್ಗೆ ಹಲವು ಹಿರಿಯರಲ್ಲಿ ಕಳವಳವಿದೆ. ಮೊಬೈಲ್-ಟಿವಿ ಗೀಳಿನಿಂದ ತಮ್ಮದೇ ಲೋಕದಲ್ಲಿ ವಿಹರಿಸುವ ಮಕ್ಕಳಲ್ಲಿ ಸಮುದಾಯ ಪ್ರಜ್ಞೆ-ಬಂಧುತ್ವ ಪ್ರಜ್ಞೆಯನ್ನು ಬೆಳೆಸುವುದು ಮುಖ್ಯ. ಆದರೆ ಮಾನವೀಯತೆ ಮರೆತು ದುಡ್ಡಿನ ಹಿಂದೆ ದಿಕ್ಕೆಟ್ಟು ಓಡುವ ಜನಮನ, ಬೇರೂರಿದ ಧನದಾಹ, ಯಾಂತ್ರಿಕ ಜೀವನಕ್ರಮವು ಬಾಂಧವ್ಯದ ತಂತುವನ್ನು ಸಡಿಲಗೊಳಿಸುತ್ತಿದೆ.
ಅನಿವಾರ್ಯವೆಂಬಂತೆ ಎಳವೆಯಲ್ಲೇ ಮಕ್ಕಳನ್ನು ಕಾನ್ವೆಂಟ್ ಸಂಸ್ಕೃತಿಗೆ ತಳ್ಳಿ, ಅಂಕ-ರ್‍ಯಾಂಕ್‌ಗಳ ಭ್ರಮೆಯಲ್ಲಿ ಕೇವಲ ಕಾಸು ತರುವ ಉದ್ಯೋಗದ ಬೆನ್ನು ಬೀಳುತ್ತಿ ರುವುದರ ಪರಿಣಾಮವಿದು. ಪಾಶ್ಚಾತ್ಯ ತೆಯ ಮರುಳು ಆವರಿಸಿರುವ ಮತ್ತು ಯಂತ್ರಗಳೇ ನಮ್ಮನ್ನಾಳುತ್ತಿರುವ ವರ್ತಮಾನದ ವಿಚಿತ್ರ ಸನ್ನಿವೇಶವಿದು. ಮುಕ್ತತೆ, ಪ್ರೀತಿ- ವಿಶ್ವಾಸದ ಜಾಗದಲ್ಲೀಗ ಸ್ವಾರ್ಥ -ಪ್ರತಿಷ್ಟೆಗಳ ಮೆರೆದಾ ಟವಿದೆ. ಮಕ್ಕಳಿಗೆ ನೆಲದ ನಂಟನ್ನೂ, ಕೂಡು ಕುಟುಂಬದ ಒಡನಾಟವನ್ನೂ ವಂಚಿಸಿದ ಹೆತ್ತವರದು ಸ್ವಯಂಕೃತ ಅಪರಾಧವೂ ಹೌದು. ಹಾಗಾದ್ದರಿಂದಲೇ ಮನೆಗಳು ತಮ್ಮ ವೈಭವ ಹಾಗಿರಲಿ ಸಹಜ ಗುಣ ಚೈತನ್ಯವನ್ನೂ ಕಳೆದುಕೊಂಡು ನಿತ್ರಾಣಗೊಳ್ಳುತ್ತಿರುವುದು.
ಹಾಗಾಗಿ ಅವನೀಗ ತನ್ನ ಅಲ್ಪಾಯುಷ್ಯ ಕ್ಕೊಂದು ಸಾರ್ಥಕ್ಯದ ಜಾಡು ಹುಡುಕು ವಷ್ಟಾದರೂ ಸೂಕ್ಷ್ಮಮತಿಯಾಗಬೇಕು. ಪುಟ್ಟ ಜೀವಿತಾವಧಿಗೆ ಅರ್ಥ ತುಂಬಿಕೊಳ್ಳಬೇಕೆಂದರೆ ಕೃತಕತೆ, ಆಡಂಬರಗಳಿಗೆ ಲಗಾಮು ಹಾಕಿ, ವಿಚಾರಗಳನ್ನು ಎತ್ತರಿಸಿಕೊಂಡು ಪ್ರಬುದ್ಧತೆಯ ಹಾದಿಗೆ ಹೊರಳಬೇಕು. ಜೀವದಯೆ, ಮನುಷ್ಯಪ್ರೀತಿ, ಸಮತೆ, ಸೋದರತೆಗಳನ್ನು ಎದೆಯೊಳಗೆ ಸಾಕಿಕೊಳ್ಳಬೇಕು.
ನಾಳೆಗಳು ಸಹನೀಯವಾಗಿ ಉಳಿಯ ಬೇಕೆಂದರೆ ಸಹನೆ, ಸರಳತೆಗಳೆಂಬ ಸಾತ್ವಿಕ ಬದುಕಿನ ತಾತ್ವಿಕ ಮೂಲಸೆಲೆಯು ಎದೆಯೊಳಗೆ ಬತ್ತಗೂಡದು. ಹಾಗೆಯೇ ಉದಾತ್ತ ಚಿಂತನೆಗಳನ್ನು ಕೃತಿಯಲ್ಲಿ ಬಾಳುವ ಧೈರ್ಯವನ್ನೂ, ಬೆಂಬಲಿಸುವ ಔದಾರ್ಯವನ್ನೂ ತೋರುವುದು ಮುಖ್ಯ. ಹಾಗಾದಾಗ ಮಾತ್ರವೇ ಸಮಾಜದ ಒಳಪದರ ಸಂತುಷ್ಠಿಯನ್ನು ಅನುಭವಿಸಲು ಸಾಧ್ಯ.
-ಸತೀಶ್ ಜಿ.ಕೆ., ತೀರ್ಥಹಳ್ಳಿ