Advertisement

ಮನೆಯೇ ಸೌಂದರ್ಯಾಲಯ

09:17 PM Aug 20, 2019 | mahesh |

ಬ್ಯೂಟಿ ಪಾರ್ಲರ್‌ಗೆ ಹೋಗಿ ಫೇಶಿಯಲ್‌ ಮಾಡಿಸಿಕೊಳ್ಳೋದು ಮಹಾ ಬೋರು ಅಂತ ಅನ್ನಿಸಿದೆಯಾ? ನನಗಂತೂ ಹಾಗೇ ಅನ್ನಿಸ್ತಿತ್ತು. ಅದಕ್ಕೇ ಪಾರ್ಲರ್‌ಗೆ ಹೋಗೋದನ್ನೇ ನಿಲ್ಲಿಸಿಬಿಟ್ಟೆ. ಅದರ ಬದಲು, ಈಗ ಮನೆಯಲ್ಲೇ ಫೇಶಿಯಲ್‌ ಮಾಡೋದನ್ನು ಕಲಿತಿದ್ದೇನೆ. ಅದೂ, ಅಡುಗೆ ಮನೆಯಲ್ಲಿ ಸಿಗೋ ವಸ್ತುಗಳನ್ನು ಬಳಸಿಕೊಂಡು; ಹೇಗೆ ಗೊತ್ತಾ?

Advertisement

– ಕಿತ್ತಳೆ ಹಾಗೂ ಟೊಮೇಟೊ ಹಣ್ಣಿನ ರಸಕ್ಕೆ, ಒಂದು ಚಮಚದಷ್ಟು ಮೊಸರು ಸೇರಿಸಿ. ಈ ಮಿಶ್ರಣದಿಂದ ಮುಖಕ್ಕೆ ಮಸಾಜ್‌ ಮಾಡಿ, ಸ್ವಲ್ಪ ಹೊತ್ತು ಒಣಗಲು ಬಿಡಿ. ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಇದು ನಿಮ್ಮ ಚರ್ಮಕ್ಕೆ ಹೊಳಪು ನೀಡುತ್ತದೆ. – ಎಲೆಕೋಸನ್ನು ಗಟ್ಟಿಯಾಗಿ ಅರೆದು, ಅದರ ರಸವನ್ನು ಮುಖಕ್ಕೆ ಹಚ್ಚಿದರೆ ಸಡಿಲವಾದ ಚರ್ಮ ಬಿಗುವಾಗುವುದಲ್ಲದೆ, ಚರ್ಮದ ಸುಕ್ಕುಗಳು ಮಾಯವಾಗುತ್ತವೆ.

– ಸೇಬು ಹಣ್ಣನ್ನು ತಿನ್ನುವಾಗ, ಅದರ ಸಿಪ್ಪೆಯನ್ನು ಎಸೆಯದೆ, ಅದನ್ನು ಮುಖಕ್ಕೆ ಉಜ್ಜಿದರೆ, ಚರ್ಮಕ್ಕೆ ಕಾಂತಿ ಸಿಗುತ್ತದೆ.
– ಗೋಧಿ ಹಿಟ್ಟಿಗೆ ಸ್ವಲ್ಪ ನೀರು ಹಾಕಿ ತಯಾರಿಸಿದ ಪೇಸ್ಟ್‌ ಅನ್ನು ಮುಖಕ್ಕೆ ಹಚ್ಚಿ, ಸ್ವಲ್ಪ ಹೊತ್ತು ಬಿಟ್ಟು ತಣ್ಣೀರಿನಲ್ಲಿ ತೊಳೆಯಿರಿ. ಇದು ಚರ್ಮದಲ್ಲಿನ ಎಣ್ಣೆಯ ಅಂಶವನ್ನು ತೆಗೆದು ಹಾಕಿ, ಚರ್ಮವನ್ನು ಫ್ರೆಶ್‌ ಆಗಿಸುತ್ತದೆ. (ಸೋಪ್‌/ ಫೇಸ್‌ವಾಶ್‌ ಬದಲಿಗೆ ಗೋಧಿ ಹಿಟ್ಟನ್ನು ಬಳಸಬಹುದು).
– ಒಂದು ಚಮಚ ಹಾಲಿಗೆ, ಒಂದು ಚಮಚ ಸೌತೆಕಾಯಿ ರಸ ಮತ್ತು ಸ್ವಲ್ಪ ಲಿಂಬೆ ರಸ ಹಾಕಿ. ಒಂದು ಹತ್ತಿಯ ಉಂಡೆಯನ್ನು ಈ ಮಿಶ್ರಣದಲ್ಲಿ ಅದ್ದಿ ಮುಖ- ಕುತ್ತಿಗೆಗೆ ಮಸಾಜ್‌ ಮಾಡಿ, 20 ನಿಮಿಷ ಬಿಟ್ಟು ಮುಖ ತೊಳೆಯಿರಿ.
– ಜಾಯಿಕಾಯಿಯ ಹೋಳನ್ನು ರೋಸ್‌ ವಾಟರ್‌/ನೀರಿನಲ್ಲಿ ಪೇಸ್ಟ್‌ ಮಾಡಿ ಮುಖಕ್ಕೆ ಹಚ್ಚಿ, ಒಣಗಿದ ನಂತರ ಮುಖ ತೊಳೆದರೆ, ಮೊಡವೆ ಹಾಗೂ ಕಪ್ಪು ಕಲೆಗಳು ಮಾಯವಾಗುತ್ತವೆ.
– ಲಿಂಬೆಹಣ್ಣನ್ನು, ಹಾಲಿನೊಂದಿಗೆ ಬೆರೆಸಿ, ಮಲಗುವ ಮುನ್ನ ಮುಖಕ್ಕೆ ಹಚ್ಚಿದರೆ ಮೊಡವೆಯ ಸಮಸ್ಯೆ ಕಡಿಮೆಯಾಗುತ್ತದೆ.
– ರಾತ್ರಿ ಮಲಗುವಾಗ ಲಿಂಬೆ ಹಣ್ಣಿನ ರಸವನ್ನು ಮುಖಕ್ಕೆ ಹಚ್ಚಿ, ಬೆಳಗ್ಗೆ ಎದ್ದು ತಣ್ಣೀರಿನಲ್ಲಿ ಮುಖ ತೊಳೆದರೆ ಚರ್ಮಕ್ಕೆ ತಾಜಾ ಹೊಳಪು ಬರುವುದಲ್ಲದೆ, ಚರ್ಮ ಮೃದುವಾಗುತ್ತದೆ.
-ಪಪ್ಪಾಯ ಹಣ್ಣಿನ ರಸಕ್ಕೆ, ಜೇನುತುಪ್ಪ ಬೆರೆಸಿ ಮುಖಕ್ಕೆ ಮಸಾಜ್‌ ಮಾಡಿ.
-ಕಡಲೆಹಿಟ್ಟಿಗೆ, ಒಂದು ಚಿಟಿಕೆ ಅರಿಶಿನ ಬೆರೆಸಿ, ಅದರಿಂದ ಮುಖ ತೊಳೆದರೆ, ಮುಖದ ರೋಮಗಳು ಕಡಿಮೆಯಾಗುತ್ತವೆ.

-ಮಹೇಶ್ವರಿ ಕೈಸೊಲಗಿ

Advertisement

Udayavani is now on Telegram. Click here to join our channel and stay updated with the latest news.

Next