ಈಗೀಗ ಜನರಿಗೆ ಮನೆಯ ವಿಮೆಯ ಕುರಿತು ಆಸಕ್ತಿ ಬೆಳೆಯುತ್ತಿದೆ. ಮಳೆ, ಪ್ರವಾಹ ಮುಂತಾದ ಪ್ರಾಕೃತಿಕ ವಿಕೋಪಗಳು ಮತ್ತಿತರ ಕಾರಣಗ ಳಿಂದಾಗಿ ಮನೆಗೆ ಹಾನಿ ಸಂಭವಿಸಿದ ಸಂದರ್ಭದಲ್ಲಿ, ನಷ್ಟ ಪರಿಹಾರಕ್ಕಾಗಿ ಸರ್ಕಾರದ ಮೊರೆ ಹೋಗುವುದುಂಟು. ಈ ಸಂದರ್ಭದಲ್ಲಿ ವಿಮೆಯ ಪರಿಹಾ ರವೂ ಸಿಕ್ಕರೆ, ಹೊರೆ ಕಡಿಮೆಯಾದಂತಾಗುತ್ತದೆ.
ರಿಪೇರಿ ಖರ್ಚು ಕ್ಲೈಮ್”: ಪ್ರಾಕೃತಿಕ ವಿಕೋಪಗಳಿಂದ ರಕ್ಷಣೆ ಬಯಸುವ ಗ್ರಾಹಕರಿಗಾಗಿ ಎರಡು ಬಗೆಯ ಆಯ್ಕೆಗಳನ್ನು ವಿಮಾ ಸಂಸ್ಥೆಗಳು ಒದಗಿಸುತ್ತವೆ. ಮೊದಲನೆಯ ದರಲ್ಲಿ ವಿಮಾ ಸಂಸ್ಥೆಗಳು ಗ್ರಾಹಕರಿಗೆ ‘ರಿಇನ್ ಸ್ಟೇಟ್ಮೆಂಟ್ ವ್ಯಾಲ್ಯೂ’ ಅನ್ನು ಪಾವತಿಸುತ್ತವೆ. ಅಂದರೆ, ಎಷ್ಟು ನಷ್ಟವಾಗಿದೆಯೋ ಅಷ್ಟು ಮೊತ್ತ. ಈ ಕೆಟಗರಿಯಲ್ಲಿ ಬರುವ ವಿಮೆ, ಮನೆ ನಿರ್ಮಾಣದ ಖರ್ಚನ್ನು ಭರಿಸುತ್ತದೆ. ಇದರಡಿ ವಿಮಾ ಸಂಸ್ಥೆ, ನಷ್ಟವನ್ನು ಭರಿಸುವ ಸಲು ವಾಗಿ, ಹಾನಿ ತಗುಲಿದ ಭಾಗವನ್ನು ಸರಿಪಡಿಸಿಕೊಡುತ್ತದೆ ಇಲ್ಲವೇ ಹೊಸ ಭಾಗಗಳನ್ನು ಹಾಕಿಸಿಕೊಡುತ್ತದೆ. ಸಂಸ್ಥೆಯು ಮೊದಲೇ ಒಂದು ಪಟ್ಟಿಯನ್ನು ಸಿದಪಡಿಸಿಟ್ಟುಕೊಂಡಿರುತ್ತದೆ.
ಅದರಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯ ಖರ್ಚು- ವೆಚ್ಚಗಳೆ ಲ್ಲವೂ ನಿಗದಿಯಾಗಿರುತ್ತವೆ. ಪಾಲಿಸಿದಾ ರರು ಹಾನಿಗೊಳಗಾದ ಮನೆಯ ದುರಸ್ತಿ ನಡೆಸುವ ಸಮಯದಲ್ಲಿ, ಹಂತ ಹಂತವಾಗಿ ವಿಮಾ ಸಂಸ್ಥೆ ಹಣವನ್ನು ಪಾವತಿಸುತ್ತದೆ. ವಿಮೆಯನ್ನು ಕ್ಲೈಮ್ ಮಾಡುವ ಸಂದರ್ಭದಲ್ಲಿ ಆಯಾ ನಷ್ಟಕ್ಕೆ ಸಂಬಂಧಿ ಸಿದಂತೆ ಮೊತ್ತವನ್ನು ಲೆಕ್ಕ ಹಾಕಲಾಗುತ್ತದೆ. ಕೆಲ ವಿಮಾಸಂಸ್ಥೆಗಳು, ಪಾಲಿಸಿದಾರರು ಹೆಚ್ಚಿನ ಮೊತ್ತವನ್ನು ಬಿಲ್ ಮಾಡಲು ಅನುವು ಮಾಡಿಕೊಡು ತ್ತವೆ. ಉದಾಹರಣೆಗೆ, ಮನೆ ದುರಸ್ತಿ ಕಾಮಗಾರಿಗೆ 20 ಲಕ್ಷ ತಗುಲಿದ್ದರೆ, ಪಾಲಿಸಿದಾರರು ಶೇ.20ರಷ್ಟು ಅಧಿಕ ಮೊತ್ತವನ್ನು ಕೋರಬಹುದು. ಆಗ ವಿಮಾ ಸಂಸ್ಥೆ 24 ಲಕ್ಷ ರೂ.ಗಳನ್ನು ಪಾವತಿಸುತ್ತದೆ.
ಎರಡನೆಯ ಬಗೆ: ಗೃಹ ವಿಮೆಯಲ್ಲಿ ಇನ್ನೊಂದು ಆಯ್ಕೆಇದೆ. ಅದರಲ್ಲಿ ಸಂಸ್ಥೆ, ಪಾಲಿಸಿದಾರರಿಗೆ ಹಿಂದೆಯೇ ನಿಗದಿಪಡಿಸಲಾದ(ಅಗ್ರೀಡ್) ಮೊತ್ತವನ್ನು ಪಾವತಿ ಸುತ್ತದೆ. ಅಗ್ರೀಡ್ ಮೊತ್ತ ಎಂದರೆ, ಸಂಸ್ಥೆ ಮತ್ತು ಪಾಲಿಸಿದಾರರಿಬ್ಬರೂ ಒಮ್ಮತದಿಂದ ಒಪ್ಪಂದ ಮಾಡಿಕೊಂಡ ಮೊತ್ತ. ಈ ಮೊತ್ತ, ಸರ್ಕಾರಿ ಸರ್ಕಲ್ ರೇಟ್ ಅಥವಾ ಸ್ವತಂತ್ರ ಮೌಲ್ಯಮಾಪಕರ ಸಲ ಹೆಯ ಮೇಲೆ ನಿಗದಿಯಾಗಿರುತ್ತದೆ. ಹೀಗೆ ದೊರೆ ಯುವ ಹಣದಲ್ಲಿ ಹಾನಿಗೊಳಗಾದ ಮನೆಯ ದುರಸ್ತಿಯನ್ನಾದರೂ ಮಾಡಿಸಿಕೊಳ್ಳ ಬಹುದು, ಇಲ್ಲವೇ ಬೇರೆಡೆ ಹೊಸ ಮನೆ ಯನ್ನಾದರೂ ಖರೀದಿ ಸ ಬಹುದು. ಆ ಸಂದರ್ಭದಲ್ಲಿ ಪಾಲಿಸಿದಾರರು ತಮ್ಮ ಹಳೆಯ ಮನೆಯನ್ನು ವಿಮಾ ಸಂಸ್ಥೆಯ ಸುಪರ್ದಿಗೆ ಒಪ್ಪಿಸಿ ಮುಂದುವರಿಯಬೇಕಾಗುತ್ತದೆ.
ಹೆಚ್ಚುವರಿ ಕವರ್: ವಿಮಾ ಸಂಸ್ಥೆಗಳು ಗೃಹ ವಿಮೆಯ ಜೊತೆ ಜೊತೆಗೆ ಎಕ್ಸ್ ಟ್ರಾ ಸವಲತ್ತುಗಳನ್ನು ನೀಡುತ್ತವೆ. ಅವನ್ನು ಆಡ್ ಆನ್ ಕವರ್ ಎಂದು ಕರೆಯಲಾ ಗುತ್ತದೆ. ಎಕ್ಸ್ ಟ್ರಾ ಸವಲತ್ತುಗಳಿಗಾಗಿ ಎಕ್ಸ್ ಟ್ರಾ ಶುಲ್ಕವನ್ನು ತೆರಬೇಕು. ಕಳ್ಳತನ, ಮನೆಯಲ್ಲಿಟ್ಟ ಹಣ ಒಡವೆಗಳ ಕಳವು ಇತ್ಯಾದಿ ಅವಘಡಗಳನ್ನು ಈ ಹೆಚ್ಚುವರಿ ಆಡ್ ಆನ್ ಸವಲತ್ತುಗಳು ಕವರ್ ಮಾಡುತ್ತವೆ. ಅದರಲ್ಲೇ ಮತ್ತೂಂದು ಬಗೆಯ ಆಡ್ ಆನ್ ಕವರ್‌ಗಳು ಮನೆಯಲ್ಲಿನ ಉಪಕರಣ ಗಳಿಗೆ ರಕ್ಷಣೆ ಒದಗಿಸುತ್ತವೆ. ರೆಫ್ರಿಜರೇಟರ್, ವಾಶಿಂಗ್ ಮಶೀನ್, ಏರ್ ಕಂಡೀಷನರ್ ಮತ್ತಿತರ ಎಲೆಕ್ಟ್ರಾನಿಕ್ ವಸ್ತುಗಳು ಕೆಟ್ಟು ಹೋದರೆ ಪಾಲಿಸಿದಾ ರರು ಈ ಆಡ್ ಆನ್ ಕವರ್ ಅಡಿ ಕ್ಲೈಮ್ ಮಾಡಬಹುದು.