Advertisement

ಮನೆ ಕಟ್ಟುವಾಗ ಅಭದ್ರತೆಯ ನೀಲ ನಕ್ಷೆ ಬೇಡವೇ ಬೇಡ

03:45 AM Jan 09, 2017 | Harsha Rao |

ಮನೋಹರ ನೀಲನಕ್ಷೆಗಳಿರುವ ಮನೆಗಳು ವಿನ್ಯಾಸದಲ್ಲಿ ಆಕರ್ಷತೆಯನ್ನು ಹೊಂದಿರುತ್ತದೆ. ಲಾನ್‌ಗಳು ಹೂಗಿಡ್ಗಳು ತರುಲತೆ ಈಜುಕೊಳ ಗಾಜಿನ ಸಂಯೋಜನೆಗಳೆಲ್ಲ ನೋಡಲು ಅದ್ಭುತ. ಆದರೆ ದಿಕ್ಕುಗಳ ವ್ಯತಿರಿಕ್ತ ಸಂಯೋಜನೆಗಳಿಂದ ಮನೆಯೊಳಗಿನ ಜೀವ ಧ್ವನಿಗಳಿಗೆ ದೈನಂದಿನ ಬದುಕಿಗೆ ಅರ್ಥಪೂರ್ಣ ತುಡಿತಗಳೇ ಇರದೆ ವಿಲವಿಲವೆಂಬ ಕನವರಿಕೆ ತುಂಬಿಕೊಂಡಿರುತ್ತದೆ. 

Advertisement

ನಿಮ್ಮ ಒಳಿತು ಕೆಡುಕುಗಳಲ್ಲಿ ಮನೆಯ ವಾಸ್ತು ಬಹು ಮುಖ್ಯ ಪಾತ್ರವಹಿಸುತ್ತದೆ ಎಂಬ ಕುರಿತು ಅನುಮಾನಗಳಿಲ್ಲ. ಆದರೆ ಕೆಲವರು ಸುಮ್ಮನೆ ವಿವಿಧ ರೀತಿಯ ಮನೆಯ ನೀಲನಕ್ಷೆಗಳನ್ನು ಒದಗಿಸುತ್ತಾರೆ. ನೋಡಲು ಸುಂದರವಾದ ಚೌಕಟ್ಟು ಆವರಣ ಸುಣ್ಣ ಬಣ್ಣಗಳಿಂದ ಅದ್ಭುತವಾಗಿಯೇ ಇರುತ್ತದೆ. ಇತ್ತೀಚೆಗೆ ಬೆಂಗಳೂರಿನ ಬಹು ಪ್ರಮುಖ
ಪ್ರದೇಶವೊಂದರಲ್ಲಿ ಬಹು ರೀತಿಯ ಆಕರ್ಷಣೆ ತುಂಬಿದ ದೇವ ಮಂದಿರವನ್ನು ನಿರ್ಮಿಸಿದ್ದರು. ಆದರೆ ಆಗಮ ಶಾಸ್ತ್ರದ ರೀತ್ಯಾ ವಾಸ್ತು ಸಂಪನ್ನತೆಗಳು ದೇವಾಲಯದ ಕಟ್ಟೋಣದಲ್ಲಿ ಸ್ಪಷ್ಟವಾಗಿ ಕಂಡು ಬರುತ್ತಿತ್ತು. ಕೊಡುಗೈ ದೊರೆಯಾದ ಸಂಪನ್ಮೂಲ ವ್ಯಕ್ತಿಯೊಬ್ಬರು ಈ ದೇವಾಲಯದ ಕಟ್ಟೋಣದಲ್ಲಿ ಮುಖ್ಯವಾದ ಭೂಮಿಕೆಯನ್ನು ವಹಿಸಿದ ಹೊಣೆ ಹೊತ್ತ ಸರ್ವತ್ರವಾಗಿ ಸೌಹಾರ್ದಪೂರ್ಣ ವ್ಯಕ್ತಿ. ದೇವಾಲಯದ ವಿನ್ಯಾಸದಲ್ಲಿ ತೊಂದರೆ ಇದೆ ಎಂದು ಹೇಳಿದ್ದನ್ನು ಮೌನವಾಗಿಯೇ ಕೇಳಿಸಿಕೊಂಡರು.

ಮುಖ್ಯದೇವರ ಗೋಪುರವೇ ವಿನ್ಯಾಸದಲ್ಲಿ ಅಗತ್ಯವನ್ನು ಮೀರಿದ ಅಂಕುಡೊಂಕುಗಳ ವಾಸ್ತು ಅಳತೆಗೆ ಸರಿಹೊಂದದ ಗೋಪುರದೊಂದಿಗೆ ಅಸಮಂಜಸವಾಗಿತ್ತು. ಆದರೆ ದೋಷವಿದೆ ಎಂಬುದನ್ನು ಕೇಳಿಸಿಕೊಂಡರೂ ದೇವಾಲಯದ ನೀರಿನ ಬೇಡಿಕೆ ಪೂರೈಸುವ ಪ್ರಮುಖ ಕೊಳವೆಗಳು ಅನ್ಯರ ತ್ಯಾಜ್ಯ ಸಂಗ್ರಹದ ಸ್ಥಾವರವನ್ನು ಸುತ್ತಿ ವಾಮಭಾಗದಲ್ಲಿ ವಿಸ್ತಾರಗೊಂಡು ದೇವಾಲಯಕ್ಕೆ ಹರಿದು ಬರುತ್ತಿತ್ತು. ಅವರು ಸಲಹೆ ಕೇಳಿದ್ದರಿಂದ ವಾಸ್ತು ವಿನ್ಯಾಸವನ್ನು ಗ್ರಹಿಸಿ ಅವರಿಗೆ ಒಟ್ಟೂ ನಿಟ್ಟಿನ ಆಯ ಉದ್ದ ಅಗಲಗಳನ್ನು ಗಮನಿಸಿದಾಗ ಮುಖ್ಯ ದೇವರ ಸಂಪನ್ನ ಸ್ಪಂದನಕ್ಕೆ ದೋಷವಿದ್ದು ಅನೇಕ ರೀತಿಯ ತಲ್ಲಣ, ಬೇಸರ, ಖನ್ನತೆಗಳಿಗೆ ಮುಖ್ಯ ವ್ಯಕ್ತಿ ಒಳಗಾಗುತ್ತಾರೆ ಎಂಬುದು ಶಾಸ್ತ್ರ ಸಿದ್ಧಾಂತವಾಗಿದೆ ಎಂಬುದನ್ನು ಸದ್ದಿರದೆ ಕೇಳಿಸಿಕೊಂಡರು. ಇರುವ ಸಂಯೋಜನಾ ದೋಷದಿಂದಾಗಿ ಎದುರಾಗುವ ತೊಂದರೆಗಳನ್ನು ಗ್ರಹಿಸಿದವರೇ ಇಡೀ ದೇವಾಲಯವನ್ನು ಪುನರೂಪಿಸುವ ಸಂಕಲ್ಪಕ್ಕೆಬದ್ಧರಾದರು. ಅದೇ ಕಾರಣದಿಂದಾಗಿ ಸಂಪನ್ನವಾದ ದೇವಾಲಯ ತಲೆ ಎತ್ತಿತು. ಈಗ ಸುಂದರವಾದ ಪರಿಪೂರ್ಣತೆ ಒದಗಿದೆ.

ಈ ರೀತಿಯಾಗಿ ಪುನರೂÅಪಿಸಿದ ಮೇಲೆ ಹಿಂದಿನ ದಿನಗಳಿಗಿಂತಲೂ ಬಲಾಡ್ಯವಾದ ಹಣಕಾಸಿನ ಪ್ರಾಬಲ್ಯ ಈಗ ದೇವಾಲಯ ಕಟ್ಟಿಸಿದ ಗೃಹಸ್ಥನಿಗೆ ಒದಗಿ ಬಂದಿದೆ. ಯುಕ್ತವಾದ ರೀತಿಯಲ್ಲಿ ಶ್ರೀಚಕ್ರ ಸೂರ್ಯ ಪ್ರಭಾ ಮಂಡಲ ಕೂರ್ಮ ಕೇಂದ್ರ ಗ್ರಹಗಳನ್ನು ಪ್ರಬಲವಾಗಿಸಿದ ಪರಿಣಾಮವಾಗಿ ದೇವಾಲಯ ಕಟ್ಟಿಸಿದ ಗೃಹಸ್ಥರ ಅಸ್ಥಿರ ಮನಸ್ಸಿನ
ಮಗನಿಗೂ ಉತ್ತಮವಾದ ಕ್ರಿಯಾಶೀಲತೆ ಒದಗಿ ತಂದೆಯ ಜೊತೆ ವಹಿವಾಟಿನಲ್ಲಿ ಕೈ ಜೋಡಿಸಿದ. ಈಗ ಪಾದರಸದಂತೆ ಉತ್ತಮವೂ ಘನತೆಯುಕ್ತವೂ ಆದ ಲವಲವಿಕೆಯ ಹೆಚ್ಚಿನ ರೀತಿಯ ವರ್ಚಸ್ಸು ಸೃಷ್ಟಿಸಿದೆ. ಮನಸ್ಸು ಬಂದಂತೆ ಕಟ್ಟಡಗಳನ್ನಾಗಲೀ ಮನೆಯನ್ನು ಅಂದಗೊಳಿಸುವ ನೆಪದಲ್ಲಿ ಅಸ್ತವ್ಯಸ್ತವಾಗಬಾರದು.

ಈಗ ನಗರದಲ್ಲಿ ಜನರನ್ನು ಸೆಳೆಯುವ ದೃಷ್ಟಿಕೋನದಿಂದ ವಿವಿಧ ನಕ್ಷೆಯ ಆಕಾರದ ಓರೆಕೋರೆ ಇದ್ದರೂ ಸೌಂದರ್ಯ ಮಿಂಚುವ ಸುಹಾಸಕರತೆಯೊಂದಿಗೆ ಕಟ್ಟಡಗಳು ಮನೆಗಳು ಅಪಾರ್‌rಮೆಂಟ್‌ಗಳು ತಲೆ ಎತ್ತುತ್ತಿವೆ. ಹಣದ ಮೂಲ ಬಲವಾಗಿದ್ದು ಹಣದ ಹೊಳೆ ಹರಿದು ಬರುತ್ತದೆ. ಬ್ಯಾಂಕ್‌ಗಳು ಅತಿ ಶೀಘ್ರವಾಗಿ ಗೃಹಸಾಲ ನೀಡುವ ಯೋಜನೆಗಳ ಮೂಲಕ ಸಹಕರಿಸುತ್ತಾರೆ. ಆದರೆ ನೆನಪಿಡಬೇಕಾದದ್ದು ಈ ಮನೋಹರ ನೀಲನಕ್ಷೆಗಳಿರುವ ಮನೆಗಳು ವಿನ್ಯಾಸದಲ್ಲಿ ಆಕರ್ಷತೆಯನ್ನು ಹೊಂದಿರುತ್ತದೆ. ಲಾನ್‌ಗಳು ಹೂಗಿಡ್ಗಳು ತರುಲತೆ ಈಜುಕೊಳ ಗಾಜಿನ ಸಂಯೋಜನೆಗಳೆಲ್ಲ ನೋಡಲು ಅದ್ಭುತ. ಆದರೆ ದಿಕ್ಕುಗಳ ವ್ಯತಿರಿಕ್ತ ಸಂಯೋಜನೆಗಳಿಂದ ಮನೆಯೊಳಗಿನ ಜೀವ ಧ್ವನಿಗಳಿಗೆ ದೈನಂದಿನ ಬದುಕಿಗೆ ಅರ್ಥಪೂರ್ಣ ತುಡಿತಗಳೇ ಇರದೆ ವಿಲವಿಲವೆಂಬ ಕನವರಿಕೆ ತುಂಬಿಕೊಂಡಿರುತ್ತದೆ. ಅಭದ್ರತೆಯ ನೀಲನಕ್ಷೆಗಳ ಮೂಲಕ ಕಟ್ಟಲ್ಪಟ್ಟ ಈ ಎಲ್ಲಾ ಕಟ್ಟಡಗಳು ಅಥವಾ ಸಂಕೀರ್ಣಗಳು ವಸತಿಯ ಕಾರಣಕ್ಕೆ ಬೇಕಾದ ಸ್ಪಂದನಗಳಿಗೆ ನ್ಯಾಯ ಒದಗಿಸಲಾರವು. ಆದರೂ ಜನ ಅಭದ್ರತೆಯ ಕುರಿತು ಮೊದಲು ಯೋಚಿಸಲಾರರು.

Advertisement

ಕಾಲ ಮಿಂಚಿದ ಮೇಲೆ ಯೋಚಿಸಿದರೆ ಪ್ರಯೋಜನವೂ ಆಗಲಾರದು.

– ಅನಂತಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next