Advertisement

ಗೃಹ ಉತ್ಪನ್ನ, ಕರಕುಶಲ ತರಬೇತಿ

05:14 PM Mar 06, 2017 | |

ಉಡುಪಿ: ಹಿಂದೆ ಮಹಿಳೆಯರು ಹೆಚ್ಚಾಗಿ ಗೃಹ ನಿರ್ವಹಣೆ ಜವಾಬ್ದಾರಿ ಮಾತ್ರ ನಿರ್ವಹಿಸುತ್ತಿದ್ದರು. ಈಗ ಮಹಿಳೆಯರು ಪುರುಷರೊಂದಿಗೆ ಸರಿಸಮಾನರಾಗಿ ಉದ್ಯೋಗ ಹಾಗೂ ಎಲ್ಲ ವ್ಯವಹಾರಗಳಲ್ಲಿ ತೊಡಗಿಸಿಕೊಂಡು ಆದಾಯ ಗಳಿಕೆಯತ್ತ ಗಮನಹರಿಸುತ್ತಿದ್ದಾರೆ. ಸಿದ್ಧ ಆಹಾರ, ಸಾರು, ಸಾಂಬಾರು ಹುಡಿ, ಉಪ್ಪಿನ ಕಾಯಿ ಹಪ್ಪಳ ಇವುಗಳಿಗೆ  ಹೆಚ್ಚಿನ ಬೇಡಿಕೆಯಿದೆ. ಬೇಡಿಕೆಗನುಸಾರವಾಗಿ ಕ್ಲಪ್ತ ಸಮಯದಲ್ಲಿ ಗ್ರಾಹಕರಿಗೆ ಸೇವೆ ನೀಡಿದಲ್ಲಿ ಯಶಸ್ಸು ಖಂಡಿತ ಎಂದು ಮಣಿಪಾಲ ಪವರ್‌ ಸಂಸ್ಥೆಯ ಸ್ಥಾಪಕಾಧ್ಯಕ್ಷೆ, ಉದ್ಯಮಿ ರೇಣು ಜಯರಾಮ್‌ ಹೇಳಿದರು.

Advertisement

ಬಿವಿಟಿಯಲ್ಲಿ ಮಹಿಳೆಯರಿಗಾಗಿ ಏರ್ಪಡಿಸಿದ ಗೃಹ ಉತ್ಪನ್ನ, ಕರಕುಶಲತೆ  ತರಬೇತಿಯನ್ನು  ಉದ್ಘಾಟಿಸಿ ಮಾತನಾಡಿದರು.   ಭಾರತೀಯ ವಿಕಾಸ ಟ್ರಸ್ಟಿನ ವಿಶ್ವಸ್ತ ಕೆ. ಎಂ. ಉಡುಪ ಅಧ್ಯಕ್ಷತೆ ವಹಿಸಿದ್ದರು. ಟಿ. ಎ. ಪೈ ಗ್ರಾಮೀಣ ತರಬೇತಿ ಕೇಂದ್ರದ ನಿರ್ದೇಶಕ ಕೃಷ್ಣಾನಂದ ನಾಯಕ್‌, ಸಿಇಒ ಮನೋಹರ ಕಟೆರಿ, ಆಡಳಿತಾಧಿಕಾರಿ ಐ. ಜಿ. ಕಿಣಿ ಉಪಸ್ಥಿತರಿದ್ದರು.

ಬಿವಿಟಿ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀ ಬಾಯಿ ಸ್ವಾಗತಿಸಿದರು.   ತರಬೇತಿಯಲ್ಲಿ  ಜಿಲ್ಲೆಯ 30 ಕ್ಕೂ ಅಧಿಕ ಮಹಿಳೆಯರು ಭಾಗವಹಿಸುತ್ತಿದ್ದಾರೆ. 5 ದಿನ ನಡೆಯಲಿರುವ ತರಬೇತಿಯಲ್ಲಿ ವಿವಿಧ ರೀತಿಯ ಸಾಂಬಾರು ಹುಡಿ, ಹಪ್ಪಳ, ಸಂಡಿಗೆ, ಫಿನಾಯಿಲ್‌ ತಯಾರಿ, ಕರಕುಶಲತೆ, ಪೇಪರ್‌ ಬ್ಯಾಗ್‌ ತಯಾರಿ ಬಗ್ಗೆ  ಪ್ರಾತ್ಯಕ್ಷಿಕೆ, ಮಾಹಿತಿ ಪಡೆಯಲಿದ್ದಾರೆ. ಸುಮಂಗಲಾ ಮಾಹಿತಿ ನೀಡಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next