Advertisement

ಹೊಂಬಾಳೆ ಪ್ರತಿಭೋತ್ಸವ

08:37 PM Feb 21, 2020 | Lakshmi GovindaRaj |

ಹೊಂಬಾಳೆ ಪ್ರತಿಭಾ ರಂಗ ಸಂಸ್ಥೆಯು ತನ್ನ 25ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, “ಪ್ರತಿಭೋತ್ಸವ’- ರಾಜ್ಯಮಟ್ಟದ ಸುಗಮ­ಸಂಗೀತ ಮೇಳವನ್ನು ಆಯೋಜಿಸಿದೆ. ಇದು ದಿನವಿಡೀ ನಡೆಯುವ ಹಾಡುಹಬ್ಬ ವಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗ­ದಲ್ಲಿ ಜರುಗಲಿದೆ.

Advertisement

ಕಾರ್ಯಕ್ರಮದ ವಿವರ
ಬೆಳಗ್ಗೆ 10.30- ನಿತ್ಯೋತ್ಸವ ಗೀತ ಗೌರವ: ಪಂಚಮ್‌ ಹಳಿಬಂಡಿ, ನರಹರಿ ದೀಕ್ಷಿತ್‌, ಶ್ರೀರಕ್ಷಾ ಪ್ರಿಯರಾಮ್‌, ವರ್ಷಾ ಸುರೇಶ್‌, ಪಂಚಾಮೃತ ಸುಗಮಸಂಗೀತ ಅಕಾಡೆಮಿ, ಸೃಜನ ಸಾಂಸ್ಕೃತಿಕ ಸಮೂಹ, ನಿನಾದ ಸಂಸ್ಕೃತಿ ಕಲಾಕೇಂದ್ರ , ಭಾವಸಾಗರ, ಸಮರಸ ಸ್ಕೂಲ್‌ ಆಫ್ ಪರ್ಫಾಮಿಂಗ್‌ ಆರ್ಟ್ಸ್ ವಿದ್ಯಾರ್ಥಿಗಳಿಂದ.

ಉಪಸ್ಥಿತಿ: ಹಿರಿಯ ಕವಿ ನಾಡೋಜ ಪ್ರೊ.ಕೆ.ಎಸ್‌.ನಿಸಾರ್‌ ಅಹಮದ್‌

ಬೆಳ್ಳಿ ಬೆಡಗು ಗೌರವ: ಗಾಯಕ ಗರ್ತಿಕೆರೆ ರಾಘಣ್ಣ, ಸಂಗೀತ ಸಂಯೋಜಕಿ ಜಯಶ್ರೀ ಅರವಿಂದ್‌, ವಾದ್ಯಗಾರ ಎನ್‌.ಎಸ್‌.ಪ್ರಸಾದ್‌, ಕಾರ್ಯಕ್ರಮ ನಿರೂಪಕ ಜಿ.ಪಿ.ರಾಮಣ್ಣ ಅವರಿಗೆ ಬೆಳ್ಳಿ ಬೆಡಗು ಗೌರವ ಸಮರ್ಪಣೆ.

ಮಧ್ಯಾಹ್ನ 2.30- ಚಿಣ್ಣರ ಸಮೂಹ ಗಾಯನ: ಸಪ್ತಸ್ವರ ಸಂಗೀತ ವಿದ್ಯಾಲಯ, ಪಂಚಾಮೃತ ಸುಗಮಸಂಗೀತ ಅಕಾಡೆಮಿ, ಪ್ರಣತಿ ಸಂಗೀತ ಪ್ರತಿಷ್ಠಾನ, ನಿನಾದ ಸಂಸ್ಕೃತಿ ಕಲಾಕೇಂದ್ರ ವಿದ್ಯಾರ್ಥಿಗಳಿಂದ.

Advertisement

ಮಧ್ಯಾಹ್ನ 3.30- ವಚನ ಮತ್ತು ದಾಸರ­ಪದಗಳ ಗಾಯನ: ಗರ್ತಿಕೆರೆ ರಾಘಣ್ಣ, ಶಶಿಧರ ಕೋಟೆ, ಟಿ.ರಾಜಾರಾಂ, ಗಣೇಶ ದೇಸಾಯಿ, ಟಿ.ಗೋಪಾಲಕೃಷ್ಣ, ದಿವಾಕರ ಕಶ್ಯಪ್‌, ರಾಘವೇಂದ್ರ ಬೀಜಾಡಿ, ಗೀತಾ ಸತ್ಯಮೂರ್ತಿ, ಗಾಯತ್ರೀ ಕೇಶವ.

ಸಂಜೆ 5ರಿಂದ ರಂಗಗೀತೆಗಳ ಗಾಯನ: ಆರ್‌.ಪರಮಶಿವನ್‌, ಲಕ್ಷ್ಮಣದಾಸ್‌, ಹೆಚ್‌.ಜೆ.ಸಿದ್ದರಾಜಯ್ಯ ಸಂಜೆ 5.30ರಿಂದ ಭಾವಗೀತೆ ಗಾಯನ ಚಂದ್ರಿಕಾ ಗುರುರಾಜ್‌, ಕೆ.ಎಸ್‌.ಸುರೇಖಾ, ರಮೇಶ್ಚಂದ್ರ , ವೆಂಕಟೇಶ­ಮೂರ್ತಿ ಶಿರೂರ, ಬಂಡ್ಲಹಳ್ಳಿ ವಿಜಯ­ಕುಮಾರ್‌, ಎಸ್‌.ಆರ್‌.ರಾಘವೇಂದ್ರ, ಆನಂದ ಮಾದಲಗೆರೆ, ಹರೀಶ್‌ ನರಸಿಂಹ ಹಾಗೂ ವಿದ್ಯಾರ್ಥಿಗಳಿಂದ.

ವಸಂತ್‌ ಕುಂಬ್ಳೆ, ಎಸ್‌. ಮಧುಸೂದನ್‌, ಎಸ್‌.ಮಹೇಶ್‌, ಬಿ.ಕೆ.ಶಶಿಧರ್‌, ವಿ.ವಾದಿ, ಎಂ.ಸಿ. ಶ್ರೀನಿವಾಸ್‌, ಬಿ.ಎಸ್‌. ಶ್ರೀನಿವಾಸ ಮೂರ್ತಿ, ನರೇಂದ್ರ ಕುಮಾರ್‌, ಭರತ್‌ ಆತ್ರೇಯಸ್‌, ವಾದ್ಯ ಸಹಕಾರ ನೀಡುವರು. ಜಯಪ್ರಕಾಶ್‌ ನಾಗತಿಹಳ್ಳಿ, ಜಿ.ಪಿ.ರಾಮಣ್ಣ, ರಾಘವೇಂದ್ರ ಕಾಂಚನ್‌, ನಿರೂಪಣೆ ಮಾಡಲಿದ್ದಾರೆ.

ಯಾವಾಗ?: ಫೆ. 23, ಭಾನುವಾರ ಬೆಳಗ್ಗೆ 10.30- 8.30
ಎಲ್ಲಿ?: ರವೀಂದ್ರ ಕಲಾಕ್ಷೇತ್ರ

Advertisement

Udayavani is now on Telegram. Click here to join our channel and stay updated with the latest news.

Next