Advertisement

Hombale Films: ಹೊಂಬಾಳೆ ಫಿಲ್ಮ್ಸ್‌ನಲ್ಲಿ ಮಿಂಚಲು ಪ್ರತಿಭೆಗಳಿಗೆ ಅವಕಾಶ; ಇಲ್ಲಿದೆ ವಿವರ

04:30 PM Nov 07, 2023 | Team Udayavani |

ಬೆಂಗಳೂರು: ಕನ್ನಡದಲ್ಲಿ ಸಿನಿಮಾಗಳನ್ನು ಮಾಡಿ ಪ್ಯಾನ್‌ ಇಂಡಿಯಾದಲ್ಲಿ ಮಿಂಚಿರುವ ಹೊಂಬಾಳೆ ಫಿಲ್ಮ್ಸ್‌ನ ನಿರ್ದೇಶಕರ ತಂಡದಲ್ಲಿ ಕೆಲಸ ಮಾಡಲು ಅವಕಾಶವೊಂದನ್ನು ಹೊಂಬಾಳೆ ಫಿಲ್ಮ್ಸ್‌ ನೀಡುತ್ತಿದೆ.

Advertisement

ʼಕೆಜಿಎಫ್‌ʼ ಸರಣಿ ʼಕಾಂತಾರʼ ದಂತಹ ಸಿನಿಮಾಗಳನ್ನು ಮಾಡಿರುವ ʼಹೊಂಬಾಳೆ ಫಿಲ್ಮ್ಸ್‌ʼ ನಿರ್ಮಾಣ ಸಂಸ್ಥೆಯಾಗಿ ದೊಡ್ಡ ಹೆಸರು ಗಳಿಸಿದೆ. ಸದ್ಯ ಹೊಂಬಾಳೆಯ ʼಸಲಾರ್‌ʼ ಸಿನಿಮಾದ ಮೇಲೆ ಪ್ರೇಕ್ಷಕರು ಭಾರೀ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ.

ಈ ನಡುವೆ ಹೊಂಬಾಳೆ ಪಿಲ್ಮ್ಸ್  ಡೈರೆಕ್ಷನ್‌ ತಂಡದಲ್ಲಿ ಕೆಲಸ ಮಾಡುವ ಅವಕಾಶವೊಂದನ್ನು ನೀಡಿದೆ.

“ಸಹಾಯಕ ನಿರ್ದೇಶಕರೇ ನಮ್ಮ ಸಿನಿಮಾ ಲೋಕಕ್ಕೆ ಬನ್ನಿ. ನಿಮ್ಮ ಸೃಜನಶೀಲತೆ ಮತ್ತು ಕಥೆ ಹೇಳುವ ಉತ್ಸಾಹವನ್ನು ನಮ್ಮ ಸಿನಿಮಾ ಪ್ರಯಾಣಕ್ಕೆ ತನ್ನಿ. ನಮ್ಮ ರೋಚಕ ಪಯಣಕ್ಕೆ ನಿಮ್ಮನ್ನು ಸ್ವಾಗತಿಸುತ್ತಿದ್ದೇವೆ. ನೀವು ಇಲ್ಲಿ ಕಲಿಯಬಹುದು, ಬೆಳೆಯಬಹುದು ಮತ್ತು ಬೆಳ್ಳಿ ಪರದೆಯ ಮ್ಯಾಜಿಕ್‌ಗೆ ಕೊಡುಗೆ ನೀಡಬಹುದು. ನೀವು ಮಿಂಚುವ ಅವಕಾಶ ಇಲ್ಲಿಂದ ಪ್ರಾರಂಭವಾಗುತ್ತದೆ” ಎಂದು ಹೊಂಬಾಳೆ ಬರೆದುಕೊಂಡಿದೆ.

ಏನೆಲ್ಲಾ ಬೇಕು:  

  1. ಫೀಚರ್‌ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವವಿರಬೇಕು.
  2. ಫೀಚರ್‌ ಲೆಥ್‌ ಸಿನಿಮಾದ ಪ್ರೀ-ಪ್ರೊಡಕ್ಷನ್‌, ಪ್ರೊಡಕ್ಷನ್‌ ಹಾಗೂ ಪೋಸ್ಟ್‌ ಪ್ರೊಡಕ್ಷನ್‌ ನಲ್ಲಿ ಕೆಲಸ ಮಾಡಿ ಅನುಭವವಿರಬೇಕು.
  3. ನೀವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದರೆ ಮೊದಲ ಆದ್ಯತೆ
Advertisement

ನವೆಂಬರ್‌ 11 ರಂದು ಮಲ್ಲೇಶ್ವರಂನ ಜಿಎಂ ರೆಜಾಯ್ಜ್ ಆಡಿಟೋರಿಯಂನಲ್ಲಿ ಈ ಕುರಿತ ಅಡಿಷನ್‌ ನಡೆಯಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next