Advertisement

ಪುಟ್ಟ ಯಜಮಾನನಿಗೆ ಹೊಂಬಳ ಪ್ರಶಸ್ತಿ ಪ್ರದಾನ

11:50 AM Nov 11, 2019 | Suhan S |

ಧಾರವಾಡ: ಜಿ.ಬಿ. ಹೊಂಬಳ ಅಭಿನಂದನಾ ಸಮಿತಿ ವತಿಯಿಂದ ಜಿ.ಬಿ. ಹೊಂಬಳ ಅಮೃತ ಮಹೋತ್ಸವ ಹಾಗೂ ಗಣೇಶ ನಾಡೋರ ಅವರ “ಪುಟ್ಟ ಯಜಮಾನ’ ಕೃತಿಗೆ ಜಿ.ಬಿ. ಹೊಂಬಳ ಮಕ್ಕಳ ಸಾಹಿತ್ಯ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಕವಿಸಂನಲ್ಲಿ ರವಿವಾರ ಜರುಗಿತು.

Advertisement

15 ಸಾವಿರ ನಗದು, ಸ್ಮರಣಿಕೆ ಒಳಗೊಂಡ ಜಿ.ಬಿ. ಹೊಂಬಳ ಮಕ್ಕಳ ಸಾಹಿತ್ಯ ರಾಜ್ಯ ಪ್ರಶಸ್ತಿಯನ್ನು ಗಣೇಶ ನಾಡೋರ ಅವರ “ಪುಟ್ಟ ಯಜಮಾನ’ ಕೃತಿಗೆ ಪ್ರದಾನ ಮಾಡಲಾಯಿತು.  ಅತಿಥಿಯಾಗಿದ್ದ ಹಿರಿಯ ವಿಮರ್ಶಕ ಡಾ| ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಸಾಹಿತ್ಯ ಅಕಾಡೆಮಿಗಳು ಲೇಖಕರಿಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ ಹೊರತು ಲೇಖಕರನ್ನು, ಪುಸ್ತಕಗಳನ್ನು ಪೋಷಿಸುವಗ್ರಂಥಾಲಯ ಅಧಿಕಾರಿಗಳಿಗೆ ಪ್ರಾಮುಖ್ಯತೆ ನೀಡುತ್ತಿಲ್ಲ. ಹೀಗಾಗಿ ಲೇಖಕರೆಲ್ಲ ಸೇರಿ ಗ್ರಂಥಾಲಯ ಅಧಿಕಾರಿಗಳಿಗೆ ಪ್ರಶಸ್ತಿ ನೀಡುವ ಚಿಂತನೆ ನಡೆಸಬೇಕಿದೆ. ಇದರಿಂದ ಗ್ರಂಥಾಲಯಗಳ ಅಭಿವೃದ್ಧಿ ಹೆಚ್ಚಾಗಲು ಸಾಧ್ಯವಿದೆ ಎಂದರು.

ಸರ್ಕಾರಗಳೂ ಗ್ರಂಥಾಲಯಗಳ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. 2016ರಿಂದ ಈವರೆಗೆ ಸರ್ಕಾರಗಳು ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಖರೀದಿ ಮಾಡಿಲ್ಲ. ಹೀಗಾಗಿ ಗ್ರಂಥಾಲಯಗಳು ಅಧೋಗತಿಯತ್ತ ಸಾಗುತ್ತಿವೆ ಎಂಬುದಾಗಿ ವರದಿಗಳಿಂದ ತಿಳಿದು ಬಂದಿದೆ. ಪುಸ್ತಕ ಸಂಸ್ಕೃತಿ ಕಡೆಗಣನೆ ಹಾಗೂ ಸೃಜನಶೀಲತೆ ಇಲ್ಲದ ಕಾರಣಕ್ಕೆ ಸಮಾಜದಲ್ಲಿ ಕ್ರೌರ್ಯ, ಹಿಂಸೆ ಪ್ರಜ್ವಲಿಸುತ್ತಿವೆ. ಹೀಗಾಗಿ ಇಂದಿನ ಮಕ್ಕಳಿಗೆ ಗ್ರಂಥಾಲಯದ ಪರಿಚಯ ಮಾಡಿಕೊಡುವ ಮೂಲಕ ಅವರಲ್ಲಿ ಓದುವ ಆದರ್ಶ ಬೆಳೆಸುವ ಜವಾಬ್ದಾರಿ ಎಲ್ಲ ಪಾಲಕರ ಮೇಲಿದೆ ಎಂದು ಹೇಳಿದರು. ಕವಿ ಬಿ.ಆರ್‌. ಲಕ್ಷ್ಮಣರಾವ್‌ ಅಭಿನಂದನಾಗ್ರಂಥ ಬಿಡುಗಡೆಗೊಳಿಸಿದರು. ಪುಟ್ಟ ಯಜಮಾನ ಕೃತಿ ಕುರಿತು ಸಾಹಿತಿ ಡಾ| ಬಸು ಬೇವಿನಗಿಡದ ಮಾತನಾಡಿದರು.

ಗಣೇಶ ನಾಡೋರ, ಡಾ| ಆನಂದ ಪಾಟೀಲ, ಡಾ| ಕೆ.ಎನ್‌. ಪ್ರಸಾದ, ಜಿ.ಬಿ. ಹೊಂಬಳ ಮಾತನಾಡಿದರು. ಡಾ| ಎಸ್‌. ಆರ್‌. ಗುಂಜಾಳ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಮಾಲತಿ ಪಟ್ಟಣಶೆಟ್ಟಿ, ಬಿ.ಎಸ್‌. ಶಿರೋಳ, ನೀಲಾ ಹೊಂಬಳ, ಡಾ| ಚಂದ್ರಶೇಖರ ರೊಟ್ಟಿಗವಾಡ, ಬಿ.ಎಸ್‌. ಮಾಳವಾಡ, ಎಸ್‌.ಸಿ. ಪಾಟೀಲ, ಎಸ್‌. ಕೆ. ಸವಣೂರ, ತಮ್ಮಣ್ಣ ಬೀಗಾರ, ಶಂಕರ ಹಲಗತ್ತಿ, ಡಾ| ಮಹೇಶ ಹೊರಕೇರಿ ಇದ್ದರು. ನಿಂಗಣ್ಣ ಕುಂಟಿ ಸ್ವಾಗತಿಸಿದರು. ಮಾಯಾರಾಮನ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next