ಸಂರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿ ಪ್ರಾಣಾರ್ಪಣೆಗೈದ ಎಲ್ಲ ವೀರಯೋಧರ ತ್ಯಾಗ, ಬಲಿದಾನಗಳಿಂದ ನಾವಿಂದು ಸುರಕ್ಷಿತರಾಗಿದ್ದೇವೆ ಎಂದರು.
Advertisement
ಮಾಯ್ ದೇ ದೇವುಸ್ ಚರ್ಚ್‌ನ ಸಹಾಯಕ ಧರ್ಮಗುರು ವಂ| ಪ್ರವೀಣ್ ಡಿ’ಸೋಜಾ, ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷ ಜೆ.ಪಿ. ರೊಡ್ರಿಗಸ್, ನಿವೃತ್ತ ಸೈನಿಕರಾದ ಜ್ಯೋ ಡಿ’ಸೋಜಾ, ಎಡ್ವರ್ಡ್ ಡಿ’ಸೋಜಾ, ಕೆ. ಸುಂದರ ಗೌಡ, ಜಯಂತ ಬೇಕಲ್, ಶಿವರಾಮ ಭಟ್, ಮಾಧವ ಬಿ.ಕೆ., ತುಳಸೀದಾಸ್, ಜಗನ್ನಾಥ ಎಂ., ರಮೇಶ್ ಬಾಬು, ಹೊನ್ನಪ್ಪಗೌಡ, ಮೂರು ಶಾಲೆಗಳ ಮುಖ್ಯಸ್ಥೆ ರೋಸಲಿನ್ ಲೋಬೋ, ಜಾನೆಟ್ ಡಿ’ಸೋಜಾ, ಹ್ಯಾರಿ ಡಿ’ಸೋಜಾ, ಶಾಲಾ ರಕ್ಷಕ – ಶಿಕ್ಷಕ ಸಂಘದ ಉಪಾಧ್ಯಕ್ಷರು ಮೊದಲಾದವರು ಉಪಸ್ಥಿತರಿದ್ದರು.
ಮೊಂಬತ್ತಿ ಬೆಳಗಿಸಿ, ದೇಶ ಭಕ್ತಿಗೀತೆ ಹಾಡುವ ಮೂಲಕ ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಕೋರಲಾಯಿತು. ನಿವೃತ್ತ ಸೈನಿಕ ಶ್ರೀರಂಗ ಶಾಸ್ತ್ರಿ ಅವರು ಮಾತನಾಡಿ, ನಮ್ಮೊಳಗೆ ಒಬ್ಬ ಯೋಧನಿದ್ದಾನೆ. ದೇಶ ಕಾಯುವುದು, ಅದನ್ನು ರಕ್ಷಿಸುವುದು ಭಾರತೀಯರಾದ ನಮ್ಮ ಕರ್ತವ್ಯ ಎಂದರು.