Advertisement

ಗಲಗಲಿಯಲ್ಲಿ ಶಾಂತಿ-ನೆಮ್ಮದಿಗೆ ಹೋಮ-ಹವನ

12:37 PM Aug 04, 2020 | Team Udayavani |

ಗಲಗಲಿ: ಗ್ರಾಮದಲ್ಲಿ ಸರ್ವ ಸಮಾಜದ ಪ್ರಮುಖರು ವಿವಿಧ ಧಾರ್ಮಿಕ ಕಾರ್ಯ ಕೈಗೊಂಡು ದೇಶದ ಸರ್ವ ಜನತೆ ಸೇರಿದಂತೆ ಸ್ಥಳೀಯರು ಶಾಂತಿ-ನೆಮ್ಮದಿಯಾಗಿರುವಂತೆ ಹರಸಲು ಭಗವಂತನನ್ನು ಪ್ರಾರ್ಥಿಸಿದರು. ಅಲ್ಲದೇ ಪ್ರಸಕ್ತ ವರ್ಷ ಉತ್ತಮ ಮಳೆ-ಬೆಳೆ ಕರುಣಿಸಲು ಒಟ್ಟಾಗಿ ಬೇಡಿಕೊಂಡರು.

Advertisement

ಇಂದು ಸ್ಥಳೀಯ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವಲ್ಲದೇ ಮಂತ್ರಘೋಷಗಳು ಮುಗಿಲು ಮುಟ್ಟಿದವು. ಬೆಳಗ್ಗೆ 7ಗಂಟೆಗೆ ದೇವಸ್ಥಾನದಪ್ರಾಂಗಣದಲ್ಲಿ ಚಿಕ್ಕೋಡಿಯ ರಾಜು ಜೋಶಿ ಭಟ್‌ ಹಾಗೂ ಕೃಷ್ಣಾ ಅವರ ನೇತೃತ್ವದಲ್ಲಿ ನವಗ್ರಹಹೋಮ, ಮಹಾ ಮೃತ್ಯುಂಜಯಹೋಮ, ಧನ್ವಂತರಿ ಹೋಮ, ಸುದರ್ಶನ ಹೋಮ, ಗಣಪತಿ, ದೇವಿಹವನ ಮತ್ತು ಅಷ್ಟದಿಗ್ಭಂದನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿದವು. ಗ್ರಾಮದಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಜಾತಿ-ಭೇದವೆನ್ನದೇ ಸ್ಥಳೀಯ ಸಮುದಾಯದ ಪ್ರಮುಖರು ಪಾಲ್ಗೊಂಡು ಯಶಸ್ವಿಗೊಳಿಸಿದರು.

ಗಾಲವ ಕ್ಷೇತ್ರದಿಂದ ಮೃತ್ತಿಕೆ ರವಾನೆ: ಇದೇ ಸಂದರ್ಭದಲ್ಲಿ ಪವಿತ್ರ ಗಾಲವ ಕ್ಷೇತ್ರದ ಮಣ್ಣು-ಹಾಗೂ ಕೃಷ್ಣಾನದಿಯ ಜಲವನ್ನು ಅಯೋಧ್ಯಾದಲ್ಲಿ ನಿರ್ಮಿಸುತ್ತಿರುವ ಶ್ರೀ ರಾಮಮಂದಿರದ ಕಾರ್ಯಕ್ಕೆ ಇಲ್ಲಿಂದ ರವಾನೆ ಮಾಡಲಾಯಿತು. ರಕ್ಷಾ ಬಂಧನದ ಕಾರ್ಯಕ್ರಮವನ್ನೂ ಇದೇ ಸಂದರ್ಭದಲ್ಲಿ ಪ್ರಮುಖರ ಸಮ್ಮುಖದಲ್ಲಿ ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next