Advertisement

ಹೋಲಿ ಫ್ಯಾಮಿಲಿ ಪ್ರೌಢಶಾಲೆ ಪ್ರೊ|ಯು.ಆರ್‌. ರಾವ್‌ ಶ್ರದ್ಧಾಂಜಲಿ

08:55 AM Jul 27, 2017 | Team Udayavani |

ಬಜಪೆ: ಭಾರತೀಯ ಉಪಗ್ರಹ ತಂತ್ರಜ್ಞಾನದ ಜನಕ, ವಿಶ್ವದ ಬಾಹ್ಯಕಾಶ ವಿಜ್ಞಾನ ಕ್ಷೇತ್ರದಲ್ಲಿ ಪ್ರಖರ ವಾಗಿ ಮಿನುಗುವ ನಕ್ಷತ್ರವೆಂದೇ ಬಿಂಬಿತವಾದ ಪ್ರೊ| ಯು. ಆರ್‌.ರಾವ್‌ ಅವರಿಗೆ ಶ್ರದ್ಧಾಂಜಲಿ ನುಡಿನಮನ ಕಾರ್ಯಕ್ರಮ ಬಜಪೆ ಹೋಲಿ ಫ್ಯಾಮಿಲಿ ಪ್ರೌಢಶಾಲೆಯಲ್ಲಿ  ಜರಗಿತು.

Advertisement

ಈ ಸಂದರ್ಭದಲ್ಲಿ ಶಾಲೆಯ ಗಣಿತ-ವಿಜ್ಞಾನ ಶಿಕ್ಷಕ ವಾಸುದೇವ ರಾವ್‌ ಕುಡುಪು ಅವರು ಪ್ರೊ| ಯು.ಆರ್‌. ರಾವ್‌ ಅವರ ಜೀವನ ಸಂದೇಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಭಗಿನಿ ಲೊಲಿಟಾ, ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ವಿಲ್ಮಾ ಉಪಸ್ಥಿತರಿದ್ದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ್‌ ಎಚ್‌. ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕೇತರ ಸಿಬಂದಿ ಚಂದ್ರಶೇಖರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next