Advertisement
ರಾಯ್‌ಪುರದಲ್ಲಿ ಸಂವಿಧಾನದ 73 ಹಾಗೂ 74ನೇ ತಿದ್ದುಪಡಿಯ ಸ್ವರ್ಣ ಮಹೋತ್ಸವ ಆಚರಣೆ ಹಿನ್ನೆಯಲ್ಲಿ ನಡೆದ ಜನ ಸ್ವರಾಜ್ ಸಮ್ಮೇಳನದಲ್ಲಿ ಮಾತನಾಡಿದ ರಾಹುಲ್ ‘ದೇಶದಲ್ಲಿ ಸಂವಿಧಾನದ ಮೇಲೆ ದಾಳಿಯಾಗುತ್ತಿದೆ. ಕರ್ನಾಟಕದಲ್ಲಿ ಶಾಸಕರು ಒಂದೆಡೆ ರಾಜ್ಯಪಾಲರು ಮತ್ತೂಂದೆಡೆ ಎನ್ನುವಂತಾಗಿದೆ. ಜೆಡಿಎಸ್ ನಾಯಕ (ಕುಮಾರ ಸ್ವಾಮಿ) ತನ್ನ ಪಕ್ಷದ ನಾಯಕರಿಗೆ 100 ಕೋಟಿ ರೂ. ಆಮಿಷ ಒಡ್ಡಲಾಗಿದೆ ಎಂದು ಹೇಳುತ್ತಿದ್ದಾರೆ’ ಎಂದರು.
Related Articles
ಕರ್ನಾಟಕದಲ್ಲಿ ಸರಕಾರ ರಚಿಸಲು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಹಕ್ಕು ಮಂಡಿಸಿದ ರೀತಿಯಲ್ಲೇ ಗೋವಾದಲ್ಲಿ ಅಲ್ಲಿನ ಕಾಂಗ್ರೆಸ್ ನಾಯಕ ಚಂದ್ರಕಾಂತ್ ಕವೆÉàಕರ್ ಸರಕಾರ ರಚನೆಗೆ ಹಕ್ಕು ಮಂಡಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಶನಿವಾರ ರಾಜ್ಯಪಾಲ ಮೃದುಲಾ ಸಿನ್ಹಾರನ್ನು ಭೇಟಿ ಆಗಲು ನಿರ್ಧರಿಸಿದ್ದಾರೆ. 40 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 16, ಬಿಜೆಪಿ 14, ಎಂಜಿಪಿ 3, ಗೋವಾ ಫಾರ್ವರ್ಡ್ ಪಾರ್ಟಿ 3, ಎನ್‌ಸಿಪಿ 1, ಸ್ವತಂತ್ರ 3 ಸ್ಥಾನ ಗೆದ್ದಿದ್ದಾರೆ. ‘ಕರ್ನಾಟಕದ ರಾಜ್ಯಪಾಲರು ಅತಿದೊಡ್ಡ ಪಕ್ಷವನ್ನು ಸರಕಾರ ರಚಿಸಲು ಆಹ್ವಾನಿಸಿದ್ದಾರೆ. ಗೋವಾ ರಾಜ್ಯಪಾಲರೂ ಅದನ್ನು ಅನುಸರಿಸಬೇಕು” ಎಂದು ಒತ್ತಾಯಿಸಿದ್ದಾರೆ. ಕಾಂಗ್ರೆಸ್‌ಗೆ 21 ಶಾಸಕರ ಬೆಂಬಲ ಬೇಕಲ್ಲವೇ ಎಂದು ಪ್ರಶ್ನಿಸಿದಾಗ “ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಬಹುಮತ ಸಾಬೀತುಪಡಿಸಲು ಸಾಧ್ಯವಾಗುತ್ತದೆ’ ಎಂದಿದ್ದಾರೆ.
Advertisement
ಇನ್ನೊಂದೆಡೆ ಬಿಹಾರದಲ್ಲಿ ಆರ್‌ಜೆಡಿ ಕೂಡ ಸರಕಾರ ರಚನೆಗೆ ಅವಕಾಶ ನೀಡಬೇಕೆಂದು ಹಕ್ಕು ಮಂಡಿಸಲಿದೆ ಎಂದು ಆರ್.ಜೆ.ಡಿ. ನಾಯಕ ತೇಜಸ್ವಿ ಯಾದವ್ ಹೇಳಿದ್ದಾರೆ. ಆರ್‌ಜೆಡಿ ಬಿಹಾರದಲ್ಲಿ ಅತಿದೊಡ್ಡ ಪಕ್ಷವಾಗಿದ್ದು, 243 ಸ್ಥಾನಗಳ ವಿಧಾನಸಭೆಯಲ್ಲಿ 80 ಸ್ಥಾನಗಳನ್ನು ಹೊಂದಿದೆ. ಆಡಳಿತಾರೂಢ ಜೆಡಿಯು, ಬಿಜೆಪಿ 131 ಸ್ಥಾನ ಹೊಂದಿವೆ. ಏತನ್ಮಧ್ಯೆ, ದೇಶಾದ್ಯಂತ ಕಾಂಗ್ರೆಸ್ ಶುಕ್ರವಾರ ಪ್ರತಿಭಟನೆ ನಡೆಸಲಿದೆ.
ಜೆ.ಡಿ.ಎಸ್.ಗೆ ಕೈ ಬೆಂಬಲಿಸಿದಾಗಲೇ ಪ್ರಜಾಪ್ರಭುತ್ವದ ಹತ್ಯೆ: ಅಮಿತ್ ಶಾರಾಜಕೀಯ ಲಾಭಕ್ಕಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ರಚನೆ ಮಾಡಲು ಜೆ.ಡಿ.ಎಸ್.ಗೆ ಬೆಂಬಲಿಸಿದಾಗಲೇ ದೇಶದಲ್ಲಿ ಪ್ರಜಾಪ್ರಭುತ್ವದ ಹತ್ಯೆಯಾಗಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಕರ್ನಾಟಕದಲ್ಲಿ ಸರಕಾರ ರಚನೆ ಮಾಡಲು ಯಾರಿಗೆ ಜನರು ಬೆಂಬಲ ನೀಡಿದ್ದಾರೆ? 104 ಸೀಟುಗಳನ್ನು ಗಳಿಸಿದ ಬಿಜೆಪಿಗೋ ಅಥವಾ 78 ಸ್ಥಾನಕ್ಕೆ ಕುಸಿದ ಕಾಂಗ್ರೆಸ್ಸಿಗೋ ಎಂದು ಅವರು ಕೇಳಿದ್ದಾರೆ. ಅಷ್ಟೇ ಅಲ್ಲ, ಕಾಂಗ್ರೆಸ್ 16 ಸಚಿವರು ಚುನಾವಣೆಯಲ್ಲಿ ಸೋತು ಹೋಗಿದ್ದಾರೆ. ಇನ್ನೊಂದೆಡೆ ಜೆಡಿಎಸ್ ಕೇವಲ 37 ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಇನ್ನು ಬಹುತೇಕ ಕಡೆ ಇಡುಗಂಟನ್ನೂ ಕಳೆದುಕೊಂಡಿದೆ. ಜನರು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಶಾ ಟ್ವೀಟ್ ಮಾಡಿದ್ದಾರೆ. ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪನವರಿಗೆ ಶುಭಾಶಯ. ಭ್ರಷ್ಟ ಹಾಗೂ ದುರಾಡಳಿತ ನೀಡಿದ ಕಾಂಗ್ರೆಸ್ ಕಿತ್ತೂಗೆಯಲು ಮತ ಹಾಕಿದ ಪ್ರತಿಯೊಬ್ಬ ಕನ್ನಡಿಗನ ಜಯವಿದು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ರಾಜ್ಯದ ಬಿಜೆಪಿ ಸರಕಾರವು ಜನರ ಆಶೋತ್ತರಗಳನ್ನು ಪೂರೈಸಲಿದೆ ಎಂಬ ವಿಶ್ವಾಸ ತಮಗಿದೆ ಎಂದು ಬರೆದುಕೊಂಡಿದ್ದಾರೆ. ಹಳೆಯ ಟ್ವೀಟ್ ನೆನಪಿಸಿದ ಕಾಂಗ್ರೆಸ್
ರಾಜಕೀಯ ಬಿಕ್ಕಟ್ಟಿನ ಮಧ್ಯದಲ್ಲೇ 2011ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಟ್ವೀಟ್ ಒಂದನ್ನು ಕಾಂಗ್ರೆಸ್ ಈಗ ಪ್ರಸ್ತಾವಿಸಿದೆ. 2011ರಲ್ಲಿ ಕರ್ನಾಟಕದಲ್ಲಿ ಎಚ್.ಆರ್. ಭಾರದ್ವಾಜ್ ರಾಜ್ಯಪಾಲರಾಗಿದ್ದ ವೇಳೆ ರಾಜಕೀಯ ಬಿಕ್ಕಟ್ಟು ಉಂಟಾಗಿತ್ತು. ಆಗ ಟ್ವೀಟ್ ಮಾಡಿದ್ದ ಮೋದಿ, ಭಾರತದ ಒಕ್ಕೂಟ ವ್ಯವಸ್ಥೆಯನ್ನು ಕರ್ನಾಟಕ ರಾಜ್ಯಪಾಲರು ನಾಶಗೊಳಿಸುತ್ತಿದ್ದಾರೆ. ಅವರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ರಾಷ್ಟ್ರಪತಿಗೆ ಪ್ರಧಾನಿ ಸೂಚಿಸಬೇಕು ಎಂದಿದ್ದರು. ಇದೀಗ ಕರ್ನಾಟಕದ ಹಾಲಿ ರಾಜ್ಯಪಾಲರನ್ನೂ ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತಿದೆ ಎಂದು ಹೇಳಿದೆ. ಕರ್ನಾಟಕ ರಾಜ್ಯಪಾಲರ ನಡೆ, ಸಂವಿಧಾನ ಶಿಲ್ಪಿ
ಡಾ. ಅಂಬೇಡ್ಕರ್ ವಿರಚಿತ ಸಂವಿಧಾನವನ್ನು ವಿಧ್ವಂಸ ಮಾಡುವ ಕುತಂತ್ರದಿಂದ ಕೂಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ – ಜೆಡಿಎಸ್ ಸರಕಾರವೇ ರಚನೆಯಾಗಬೇಕೆಂಬ ಮಾಯಾವತಿಯವರ ಆಗ್ರಹವನ್ನು ಬೆಂಬಲಿಸುತ್ತೇನೆ.
– ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಬಿಜೆಪಿಗೆ ಸರಕಾರ ರಚನೆಗೆ ಅವಕಾಶ ನೀಡುವ ಮೂಲಕ ಕರ್ನಾಟಕದ ರಾಜ್ಯಪಾಲರು ಸಂವಿಧಾನದ ನಿಯಮಾವಳಿಗಳನ್ನು ಗಾಳಿಗೆ ತೂರಿದ್ದಾರೆ. ಶಾಸಕರನ್ನು ಖರೀದಿಸಲು, ಕುದುರೆ ವ್ಯಾಪಾರ ನಡೆಸುವುದಕ್ಕೆ ಅವಕಾಶ ನೀಡುವ ನಿರ್ಧಾರವನ್ನು ರಾಜ್ಯಪಾಲರು ನೀಡಿದ್ದು ಅಚ್ಚರಿಯದ್ದಾಗಿದೆ. ಆರೆಸ್ಸೆಸ್ ಗವರ್ನರ್ ರಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ?
– ಕ್ಯಾ| ಅಮರಿಂದರ್ ಸಿಂಗ್, ಪಂಜಾಬ್ ಸಿಎಂ ರಾಜ್ಯಪಾಲರಿಗೆ ಯಡಿಯೂರಪ್ಪ ನೀಡಿದ ಪತ್ರದ ಮೇಲೆ ಅವರ ಭವಿಷ್ಯ ನಿಂತಿದೆ. 104ಕ್ಕಿಂತ ಹೆಚ್ಚು ಶಾಸಕರ ಬೆಂಬಲವಿದೆ ಎಂಬ ಉಲ್ಲೇಖ ಆ ಪತ್ರದಲ್ಲಿಲ್ಲ. ರಾಜ್ಯಪಾಲರ ಆಹ್ವಾನದಲ್ಲಿ ಶಾಸಕರ ಬೆಂಬಲದ ಬಗ್ಗೆ ಯಾವುದೇ ಪ್ರಸ್ತಾವವಿಲ್ಲ. ಒಂದು ವೇಳೆ ನಾನು ಯಡಿಯೂರಪ್ಪ ಆಗಿದ್ದಿದ್ದರೆ, ಮೇ 18ರ 10.30 ಕ್ಕಿಂತ ಮೊದಲು ಪ್ರಮಾಣ ವಚನ ಸ್ವೀಕರಿಸುತ್ತಲೇ ಇರಲಿಲ್ಲ.
– ಪಿ.ಚಿದಂಬರಂ, ಮಾಜಿ ಸಚಿವ