Advertisement
ನಗರದ ಕರುವಿನಕಟ್ಟೆ ಸರ್ಕಲ್ ನಲ್ಲಿ ಹೋಳಿಗೆಮ್ಮ ದೇವಿಗೆ ಮೊರೆ ಹೋಗಿ ಸತತ ಬರದಿಂದ ತತ್ತರಿಸಿರುವ ಜಿಲ್ಲೆಗೆ ಉತ್ತಮ ಮಳೆ ಬಂದು ರೈತರ ಬದುಕು ಹಸನಾಗಲಿ, ಡೆಂಘೀ ಜ್ವರ ಸೇರಿದಂತೆ ಮತ್ತಿತರ ಯಾವುದೇ ರೀತಿಯ ರೋಗ ರುಜಿನ ಮಕ್ಕಳಿಗೆ ಕಾಡದಿರಲಿ ಎಂದು ನಗರದ ಮಳೆಯರುಮನೆಗಳಲ್ಲಿ ಮಾಡಿಟ್ಟುಕೊಂಡಿದ್ದ ಹೋಳಿಗೆಗಳನ್ನು ಹೋಳಿಗೆಮ್ಮನವರಿಗೆ ಅರ್ಪಿಸಿ ಕೃಪೆ ತೋರುವಂತೆ ಮನವಿ ಮಾಡಿಕೊಂಡರು. ಪ್ರತಿ ವರ್ಷವು ಆಷಾಢ ಮಾಸದಲ್ಲಿ ನಗರದ ಬಹುತೇಕ ನಿವಾಸಿಗಳು ಯಾವುದೇ ಜಾತಿ, ಬೇಧವಿಲ್ಲದೆ ಹೋಳಿಗೆ ಅಮ್ಮನವರಿಗೆ ವಿಶೇಷವಾಗಿ ಹೋಳಿಗೆ ಮಾಡಿಕೊಂಡು ಬಂದು ಅರ್ಪಿಸಲಾಗುತ್ತದೆ. ಭಕ್ತರು ಮೀಸಲು ನೀರಿನಿಂದ ಮಾಡಿದ ಹೋಳಿಗೆಯನ್ನು ಮೊದಲು ದೇವಿಗೆ ಎಡೆಯಾಗಿ ಅರ್ಪಿಸಿದರು. ದೇವರಿಗೆ ಹೋಳಿಗೆ ಅರ್ಪಿಸಿ ಊರಿನ ಹೊರಗಡೆ ದೇವಿಯನ್ನು ಸಾಗಾಕಿ (ದಾಟಿಸಿ) ನಮ್ಮಲ್ಲಿರುವ ಬರ, ರೋಗ, ಮತ್ತಿತರ ಸಮಸ್ಯೆಗಳನ್ನು ತೊಲಗಿಸು ಎಂದು ಹೋಳಿಗೆ ಅಮ್ಮನ ಜೊತೆಯಲ್ಲಿ ತೊಲಗಾಚೆ ಎಂದು ಗ್ರಾಮಸ್ಥರು ಬೇಡಿಕೊಂಡರು.