Advertisement

ಹೋಳಿ ಹುಣ್ಣಿಮೆ ಹಲಿಗೆ ಸಂಚಲನ ಮೇಳಕ್ಕೆ ಚಾಲನೆ

01:01 PM Mar 06, 2017 | Team Udayavani |

ಧಾರವಾಡ: “ಜಾನಪದ ಸೊಗಡು ಹೋಳಿ ಹುಣ್ಣಿಮೆ ಆಚರಿಸಿ ಹಿಂದೂ ಸಂಪ್ರದಾಯ ಉಳಿಸಿ’ ಎಂಬ ಘೋಷವಾಕ್ಯದಡಿ ಹೋಳಿ ಹುಣ್ಣಿಮೆ ಆಚರಣಾ ಸಮಿತಿಯಿಂದ ನಗರದಲ್ಲಿ ರವಿವಾರ ಹಲಿಗೆ ಸಂಚಲನ (ಬಾರಿಸುವ) ಕಾರ್ಯಕ್ರಮ ನಡೆಯಿತು. ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಕಾಮನಕಟ್ಟಿ ರಸ್ತೆಯ ಶ್ರೀಪ್ಯಾಟಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಹಲಿಗೆ ಸಂಚಲನಕ್ಕೆ ಚಾಲನೆ ನೀಡಿದರು.

Advertisement

ಅಲ್ಲಿಂದ ಹೊರಟ ಹಲಿಗೆ ಬಾರಿಸುವ ಮೇಳನಗರದ ಭೂಸಪ್ಪ ಚೌಕ್‌, ಲೈನ್‌ ಬಜಾರ್‌,  ಟಿಕಾರೆ ರಸ್ತೆ, ವಿವೇಕಾಂನ ವೃತ್ತ, ಗಾಂಧಿ ಚೌಕ್‌ ಮಾರ್ಗವಾಗಿ ಚರಂತಿಮಠ ಗಾರ್ಡನ್‌ನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ತೆರಳಿತು. ಸಾವಿರಾರು ಜನರು ಭಾಗವಹಿಸಿದ್ದರು. 

ಹಲಿಗೆ ಬಾರಿಸುವ ತಂಡದೊಂದಿಗೆ, ಕೆಸರಿ ಧ್ವಜ, ಪೇಟ, ಶಾಲುಗಳನ್ನು ಧರಿಸಿ ಯುವಕರು ಮೆರವಣಿಗೆಗೆ ಮೇರಗು ತಂದರು. ಈ ವೇಳೆ ಪೊಲೀಸ್‌ ಇಲಾಖೆ ಬಿಗಿ ಬಂದೋಬಸ್ತ್ ಏರ್ಪಡಿಸಿತ್ತು. ಈ  ವೇಳೆ ಹೋಳಿ ಹುಣ್ಣಿಮೆ ಆಚರಣಾ ಸಮಿತಿ ಅಧ್ಯಕ್ಷ ಶಂಕರ ಶಳಕೆ, ಶಾಸಕ ಅರವಿಂದ ಬೆಲ್ಲದ, ಅಮೃತ ದೇಸಾಯಿ,

ನಿರ್ಮಲಾ ಜವಳಿ, ಸಮಿತಿಯ ಉಪಾಧ್ಯಕ್ಷ ಶ್ರೀನಿವಾಸ ಪಾಟೀಲ, ರಾಮಚಂದ್ರ ಜಿಗಾಂವಕರ, ಸಂಜಯ ಕಪಟಕರ, ಶಿವು ಹಿರೇಮಠ, ಪೂರ್ಣಾ ಪಾಟೀಲ, ಶಕ್ತಿಕುಮಾರ ಹಿರೇಮಠ, ಪ್ರೀತೇಶ ಜಾಧವ, ಕಿರಣ ತೊಗ್ಗಿ, ಮಹೇಶ ಸೋಲಾಕೆ, ರಾಕೇಶ ನಾಝರೆ, ಗಣೇಶ ಪಾಟೀಲ, ವಿನೋದ ಜಾಧವ ಹಾಗೂ ಕಾಮನಕಟ್ಟಿಯ ಹಿರಿಯರು ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next